ಫಾಸ್ಟ್ ಟ್ಯಾಗ್ ನಿಂದ ಜಿಎಸ್ ಟಿ ತನಕ ಮಾರ್ಚ್ ತಿಂಗಳಲ್ಲಿ ಬದಲಾಗಲಿವೆ ಈ ನಿಯಮಗಳು, ಹೆಚ್ಚಲಿದೆ ಜೇಬಿನ ಮೇಲಿನ ಹೊರೆ

By Suvarna News  |  First Published Feb 29, 2024, 12:17 PM IST

ಪ್ರತಿ ಹೊಸ ತಿಂಗಳ ಪ್ರಾರಂಭದಲ್ಲಿ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಯಾಗುತ್ತದೆ. ಅದರಂತೆ ಮಾರ್ಚ್ ನಲ್ಲಿ ಕೂಡ ಕೆಲವು ನಿಯಮಗಳು ಬದಲಾವಣೆಯಾಗಲಿದ್ದು, ಇದು ಜನರ ಮೇಲೆ ನೇರ ಪರಿಣಾಮ ಬೀರಲಿವೆ. 
 


ನವದೆಹಲಿ (ಫೆ. 29): ಸಾಮಾನ್ಯವಾಗಿ ಹೊಸ ತಿಂಗಳು ಪ್ರಾರಂಭವಾಗುವಾಗ ಒಂದಷ್ಟು ಹಣಕಾಸಿನ ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಅದರಂತೆ ನಾಳೆಯಿಂದ ಮಾರ್ಚ್ ತಿಂಗಳು ಪ್ರಾರಂಭವಾಗಲಿದೆ. ಈ ತಿಂಗಳಲ್ಲಿ ಕೂಡ ಒಂದಷ್ಟು ಹೊಸ ನಿಯಮಗಳು ಜಾರಿಗೆ ಬರಲಿವೆ. ಮಾರ್ಚ್ ಪ್ರಸಕ್ತ ಹಣಕಾಸು ಸಾಲಿನ ಕೊನೆಯ ತಿಂಗಳಾಗಿರುವ ಕಾರಣ ಈ ಬದಲಾವಣೆಗಳು ಸಹಜವಾಗಿ ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ.  ರಸ್ತೆ ಮಾರ್ಗವಾಗಿ ಕಾರು ಅಥವಾ ಇನ್ಯಾವುದೇ ವಾಹನಗಳಲ್ಲಿ ತೆರಳೋರು ಕೆವೈಸಿ ಮಾಡದಿದ್ರೆ ನಾಳೆಯಿಂದ ಫಾಸ್ಟ್ ಟ್ಯಾಗ್  ನಿಷ್ಕ್ರಿಯಗೊಳ್ಳಲಿದೆ. ಹಾಗೆಯೇ ಜಿಎಸ್ಟಿಗೆ ಸಂಬಂಧಿಸಿದ ನಿಯಮಗಳು ಕೂಡ ಮಾರ್ಚ್ ನಲ್ಲಿ ಬದಲಾಗಲಿವೆ. ಎಸ್ ಬಿಐ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ನಿಯಮಗಳಲ್ಲಿ ಕೂಡ ಕೆಲವು ಬದಲಾವಣೆಗಳು ಆಗಲಿವೆ. ಹಾಗೆಯೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಸಂಬಂಧಿಸಿದಂತೆ ಒಂದಿಷ್ಟು ಬದಲಾವಣೆಗಳು ಕೂಡ ಮಾರ್ಚ್ ನಲ್ಲಿ ಆಗಲಿವೆ. ಈ ಬದಲಾವಣೆಗಳು ಫಾಸ್ಟ್ ಟ್ಯಾಗ್ ಬಳಕೆದಾರರು ಸೇರಿದಂತೆ ದೇಶಾದ್ಯಂತ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರಲಿದೆ. 

1.ಫಾಸ್ಟ್ ಟ್ಯಾಗ್ ನಿಷ್ಕ್ರಿಯ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಾಹನ ಮಾಲೀಕರಿಗೆ ಫಾಸ್ಟ್ ಟ್ಯಾಗ್ ಕೆವೈಸಿ ಅನ್ನು ಕಡ್ಡಾಯವಾಗಿ ಫೆ.29ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ. ಒಂದು ಈ ಅಂತಿಮ ಗಡುವಿನೊಳಗೆ ಕೆವೈಸಿ ಮಾಡದಿದ್ರೆ ಅಂಥ ಫಾಸ್ಟ್ ಟ್ಯಾಗ್ ಮಾರ್ಚ್ 1ರಿಂದ ನಿಷ್ಕ್ರಿಯಗೊಳ್ಳಲಿದೆ ಎಂದು ತಿಳಿಸಿದೆ. ಹೀಗಾಗಿ ನೀವಿನ್ನೂ ನಿಮ್ಮ ಫಾಸ್ಟ್ ಟ್ಯಾಗ್ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿದ್ರೆ ತಕ್ಷಣ ಮಾಡಿ ಮುಗಿಸಿ.

Tap to resize

Latest Videos

2.ಎಸ್ ಬಿಐ ಕ್ರೆಡಿಟ್ ಕಾರ್ಡ್ ನಲ್ಲಿ ಬದಲಾವಣೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೆಬ್ ಸೈಟ್ ನಲ್ಲಿರುವ ಮಾಹಿತಿ ಪ್ರಕಾರ ಮಾರ್ಚ್ ನಿಂದ ಕ್ರೆಡಿಟ್ ಕಾರ್ಡ್ ಕನಿಷ್ಠ ದಿನದ ಬಿಲ್ ಲೆಕ್ಕಾಚಾರ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಲಿದೆ. ಈ ಬದಲಾವಣೆ ಮಾ.15ರಿಂದ ಜಾರಿಗೆ ಬರಲಿದೆ. ಅಲ್ಲದೆ, ಈ ಬಗ್ಗೆ ಬ್ಯಾಂಕ್ ತನ್ನ ಎಲ್ಲ ಗ್ರಾಹಕರಿಗೂ ಇ-ಮೇಲ್ ಮುಖಾಂತರ ಮಾಹಿತಿ ನೀಡಿದೆ. 

Bank Holidays: ಮಾರ್ಚ್ ತಿಂಗಳಲ್ಲಿ 14 ದಿನ ಬ್ಯಾಂಕ್ ಕ್ಲೋಸ್; ಆರ್ ಬಿಐ ಹಾಲಿಡೇ ಲಿಸ್ಟ್ ಹೀಗಿದೆ..

3.ಜಿಎಸ್ ಟಿ ನಿಯಮಗಳಲ್ಲಿ ಬದಲಾವಣೆ: 5 ಕೋಟಿ ರೂ. ಮೇಲ್ಪಟ್ಟ ಉದ್ಯಮಗಳಿಗೆ ಎಲ್ಲ B2B ವಹಿವಾಟುಗಳಿಗೆ ಇ-ಇನ್ ವಾಯ್ಸ್  ಮಾಹಿತಿಗಳನ್ನು ಸೇರ್ಪಡೆಗೊಳಿಸದಿದ್ರೆ ಮಾರ್ಚ್ 1ರಿಂದ ಇ-ವೇ ಬಿಲ್ ಸೃಷ್ಟಿಸಲು ಸಾಧ್ಯವಾಗೋದಿಲ್ಲ. ಸರಕು ಹಾಗೂ ಸೇವಾ ತೆರಿಗೆ ವ್ಯವಸ್ಥೆಯಡಿಯಲ್ಲಿ  50,000ರೂ. ಮೇಲ್ಪಟ್ಟ ಸರಕುಗಳ ಅಂತರ-ರಾಜ್ಯ ಸಾಗಣೆಗೆ ಇ-ವೇ ಬಿಲ್ ಗಳು ಅಗತ್ಯ.

4.ಪೇಟಿಎಂ ನಿರ್ಬಂಧ: ಮಯ ಉಲ್ಲಂಘನೆ ಆರೋಪ ಹೊತ್ತಿರುವ ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದೆ. ಇದರಿಂದ ಮಾರ್ಚ್ 15ರ ಬಳಿಕ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಕೆಲ ಸೇವೆಗಳು ಬಂದ್ ಆಗಲಿದೆ. ಮಾ.  15ರಿಂದ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಹೊಸ ಠೇವಣಿಗಳನ್ನು ಸ್ವೀಕರಿಸುವುದು ಮತ್ತು  ಕ್ರೆಡಿಟ್ ವಹಿವಾಟುಗಳನ್ನು ಮಾಡುವುದು ಸೇರಿದಂತೆ ಪ್ರಮುಖ ವ್ಯಾಪಾರ ನಿರ್ಬಂಧಗಳನ್ನು ಆರ್ ಬಿಐ ವಿಧಿಸಿದೆ. ಪೇಟಿಎಂ ಅತೀದೊಡ್ಡ ಪಾವತಿ ಪ್ಲಾಟ್ ಫಾರ್ಮ್ ಗಳಲ್ಲಿ ಒಂದಾಗಿದ್ದು, ಈ ಕ್ರಮ ಸಾಕಷ್ಟು ಜನರ ಮೇಲೆ ಪರಿಣಾಮ ಬೀರಲಿದೆ. 

5.ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ: ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನ ಅಡುಗೆ ಅನಿಲ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಗಳನ್ನು ಪರಿಶೀಲಿಸಿ, ಹೊಸ ದರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಮಾರ್ಚ್ ಮೊದಲ ದಿನ ಕೂಡ ಎಲ್ ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆ ನಿರೀಕ್ಷಿಸಬಹುದು. 

ನೀವು ಪಾವತಿಗೆ ಪೇಟಿಎಂ UPI ಬಳಸುತ್ತಿದ್ದೀರಾ? ಹಾಗಾದರೆ ನಿಮಗಿದೆ ಆರ್‌ಬಿಐ ಸಂದೇಶ!

6.ಸೋಷಿಯಲ್ ಮೀಡಿಯಾಕ್ಕೆ ಹೊಸ ನಿಯಮ: ಸರ್ಕಾರ ಇತ್ತೀಚೆಗೆ ಐಟಿ ನಿಯಮಗಳಲ್ಲಿ ಬದಲಾವಣೆ ತಂದಿದೆ. ಅದರ ಅನ್ವಯ ಮಾ.1ರಿಂದ ಸೋಷಿಯಲ್ ಮೀಡಿಯಾಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಮಾ.1ರಿಂದ ಎಕ್ಸ್ , ಫೇಸ್ ಬುಕ್, ಯೂಟ್ಯೂಬ್ ಹಾಗೂ ಇನ್ ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸುಳ್ಳು ಅಥವಾ ತಪ್ಪು ಸುದ್ದಿಗಳನ್ನು ಪೋಸ್ಟ್ ಅಥವಾ ಪ್ರಸಾರ ಮಾಡಿದ್ರೆ ಅದಕ್ಕೆ ದಂಡ ವಿಧಿಸಲಾಗುತ್ತದೆ. 
 

click me!