ಜೋಯಲುಕ್ಕಾಸ್‌ನಿಂದ ವರ್ಷದ ಅತಿ ದೊಡ್ಡ ಆಫರ್ ‘Incredible 50’!

Published : Feb 26, 2021, 05:34 PM ISTUpdated : Feb 26, 2021, 06:02 PM IST
ಜೋಯಲುಕ್ಕಾಸ್‌ನಿಂದ ವರ್ಷದ ಅತಿ ದೊಡ್ಡ ಆಫರ್ ‘Incredible 50’!

ಸಾರಾಂಶ

ವಿಶ್ವದ ಫೇವರಿಟ್ ಜ್ಯುವೆಲ್ಲರ್ ಜೋಯಲುಕ್ಕಾಸ್‌|  ಜೋಯಲುಕ್ಕಾಸ್‌ನಿಂದ ವರ್ಷದ ಅತಿ ದೊಡ್ಡ ಆಫರ್ ‘Incredible 50’| ಆಭರಣಗಳ ಮೇಲಿನ ಮೇಕಿಂಗ್ ಚಾರ್ಜ್‌ನಲ್ಲಿ ಶೇ. 50ರಷ್ಟು ರಿಯಾಯಿತಿ 

ಬೆಂಗಳೂರು(ಫೆ.26): ವಿಶ್ವದ ಫೇವರಿಟ್ ಜ್ಯುವೆಲ್ಲರ್ ಜೋಯಲುಕ್ಕಾಸ್‌ ಈ ವರ್ಷದ ತನ್ನ ಬಹುದೊಡ್ಡ ಆಫರ್ Incredible 50 ಘೋಷಿಸಿದೆ. ಈ ಮೂಲಕ ಗ್ರಾಹಕರು ಎಲ್ಲಾ ಆಭರಣಗಳ ಮೇಲಿನ ಮೇಕಿಂಗ್ ಚಾರ್ಜ್‌ನಲ್ಲಿ ಶೇ. 50ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಇನ್ನು ಕಳೆದ ಎಂಟು ತಿಂಗಳಲ್ಲೇ ಚಿನ್ನದ ದರ ಕನಿಷ್ಟ ಹಂತಕ್ಕೆ ತಲುಪಿರುವ ವೇಳೆ Incredible 50 ಆಫರ್ ಘೋಷಣೆಯಾಗಿದೆ ಎಂಬುವುದು ಉಲ್ಲೇಖನೀಯ. ಈ ಮೂಲಕ ಗ್ರಾಹಕರು ತಮ್ಮಿಷ್ಟದ ಆಭರಣಗಳನ್ನು ಅತ್ಯಾಕರ್ಷಕ ಬೆಲೆಗೆ ಖರೀದಿಸಬಹುದಾದ ಸುವರ್ಣಾವಕಾಶ ಜೋಯಲುಕ್ಕಾಸ್‌ ಒದಗಿಸಿದೆ.

ಈ ಆಫರ್‌ ಘೋಷಿಸಿದ ಜೋಯಲುಕ್ಕಾಸ್‌ನ ಗ್ರೂಪ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಜೋಯ್ ಅಲುಕಾಸ್ 'ಮೇಕಿಂಗ್ ಚಾರ್ಜ್‌ ಅತ್ಯಂತ ಕಡಿಮೆ ಪಡೆಯುವ ಆಫರ್ ಘೋಷಿಸುತ್ತಿದ್ದೇವೆ. Incredible 50 ಮೂಲಕ ನಮ್ಮ ಗ್ರಾಹಕರಿಗೆ ಹಣ ಉಳಿತಾಯ ಮಾಡುವ ಅವಕಾಶ ಸಿಗಲಿದೆ. ಇದೇ ವೇಳೆ ನಮ್ಮ ಗ್ರಾಹಕರಿಗೆ ಅತ್ಯಾಕರ್ಷಕ ವಿನೂತನ ಡಿಸೈನ್‌ನ ಆಭರಣ ಕೊಳ್ಳುವ ಅವಕಾಶವೂ ಲಭಿಸಲಿದೆ. ಹೀಗಾಗಿ ಎಲ್ಲರೂ ನಮ್ಮ ಶೋರೂಂಗೆ ಭೇಟಿ ನೀಡಿ ನಿಗದಿತ ಅವಧಿಗಿರುವ ಈ ಆಫರ್‌ನ ಲಾಭ ಪಡೆದುಕೊಳ್ಳುವಂತೆ ಆಹ್ವಾನಿಸುತ್ತೇನೆ' ಎಂದಿದ್ದಾರೆ.

17 ದಿನಗಳ ಈ ಆಫರ್ ಫೆಬ್ರವರಿ 26ರಂದು ಆರಂಭಗೊಂಡು ಮಾರ್ಚ್ 14ಕ್ಕೆ ಕೊನೆಗೊಳ್ಳಲಿದೆ. ಈ ಆಫರ್ ಭಾರತಾದ್ಯಂತ ಇರುವ ಜೋಯಲುಕ್ಕಾಸ್‌ನ ಎಲ್ಲಾ ಶಾಪ್‌ಗಳಲ್ಲೂ ಲಭ್ಯವಿರಲಿದೆ. ಇಷ್ಟೇ ಅಲ್ಲದೇ ಗ್ರಾಹಕರಿಗೆ ಫ್ರೀ ಇನ್ಶೂರೆನ್ಸ್ ಹಾಗೂ ಲೈಫ್‌ಟೈಮ್‌ ಆಭರಣದ ಫ್ರೀ ಮೈಂಟೇನೆನ್ಸ್ ಹಾಗೂ ಗೋಲ್ಡ್ ಎಕ್ಸ್ಚೇಂಜ್ ಆಫರ್ ಕೂಡಾ ಸಿಗಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಸ್ಟಾರ್‌ಲಿಂಕ್‌ ಇಂಟರ್ನೆಂಟ್‌ ವೆಬ್‌ಸೈಟ್‌ ಆರಂಭ, 30 ದಿನದ ಫ್ರೀ ಟ್ರಯಲ್‌ ಜೊತೆ ರಿಚಾರ್ಜ್‌ ಘೋಷಿಸಿದ ಮಸ್ಕ್‌ ಕಂಪನಿ!
Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ