Russia Ukraine Crisis: ಚಿನ್ನ, ಬೆಳ್ಳಿ ಬೆಲೆ ಗಗನಕ್ಕೆ! ಭಾರತದ ಪ್ರಮುಖ ನಗರಗಳಲ್ಲಿಇಂದಿನ ದರ ಎಷ್ಟಿದೆ?

Suvarna News   | Asianet News
Published : Feb 25, 2022, 01:58 PM ISTUpdated : Feb 25, 2022, 02:01 PM IST
Russia Ukraine Crisis: ಚಿನ್ನ, ಬೆಳ್ಳಿ ಬೆಲೆ ಗಗನಕ್ಕೆ! ಭಾರತದ ಪ್ರಮುಖ ನಗರಗಳಲ್ಲಿಇಂದಿನ ದರ ಎಷ್ಟಿದೆ?

ಸಾರಾಂಶ

*ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸುತ್ತಿದ್ದಂತೆ ಜಿಗಿದ ಚಿನ್ನ, ಬೆಳ್ಳಿ ದರ *ಚಿನ್ನದ ಮೇಲಿನ ಹೂಡಿಕೆ ಹೆಚ್ಚಿರೋದೆ ದರ ಏರಿಕೆಗೆ ಕಾರಣ *ಮುದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಏರಿಕೆ ಸಾಧ್ಯತೆ 

ನವದೆಹಲಿ (ಫೆ.25): ರಷ್ಯಾ -ಉಕ್ರೇನ್ ಸಂಘರ್ಷದ ಪರಿಣಾಮ ಬಂಗಾರದ ದರ ಗಗನಕ್ಕೇರಿದೆ. ಸುರಕ್ಷಿತ ಎಂಬ ಕಾರಣಕ್ಕೆ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಹೆಚ್ಚಿಸಿರೋದೆ ಈ ಏರಿಕೆಗೆ ಕಾರಣ. ಗುರುವಾರ (ಫೆ.24) ಭಾರತದಲ್ಲಿ 24 ಕ್ಯಾರೆಟ್ 10ಗ್ರಾಂ ಚಿನ್ನದ ದರ 51,000 ರೂ. ಗಡಿ ದಾಟಿತ್ತು. ಆದ್ರೆ ಶುಕ್ರವಾರ (ಫೆ.25) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ರೂ ಕೂಡ ಭಾರತದಲ್ಲಿ ಮಾತ್ರ ಚಿನ್ನದ ದರ ನಿನ್ನೆಗೆ ಹೋಲಿಸಿದ್ರೆ ಇಂದು ಇಳಿಕೆ ದಾಖಲಿಸಿದೆ. ಬೆಳ್ಳಿ ದರದಲ್ಲಿ ಕೂಡ ಇಂದು ಇಳಿಕೆ ಕಂಡುಬಂದಿದೆ. 

ಭಾರತದ ಎಲ್ಲ ಪ್ರಮುಖ ನಗರಗಳ ಬೆಲೆಯ ಸರಾಸರಿ ಹಿಡಿದ್ರೆ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,250ರೂ. ಇತ್ತು. ಆದ್ರೆ ಇಂದು 400ರೂ. ಇಳಿಕೆಯಾಗಿ 46,850ರೂ. ಆಗಿದೆ. ಅದೇರೀತಿ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 51,550ರೂ. ಇತ್ತು, ಇಂದು 400ರೂ. ಇಳಿಕೆಯಾಗಿ 51,110ರೂ. ಆಗಿದೆ. ಬೆಳ್ಳಿ ಬೆಲೆ ಕೂಡ 66,000ರೂ. ಇದ್ದು, 65,000ರೂ.ಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಗುರುವಾರ  22 ಕ್ಯಾರಟ್ ನ 10 ಗ್ರಾಂ ಚಿನ್ನದ ದರದ ಮೇಲೆ 850 ರೂಪಾಯಿ ಏರಿಕೆಯಾಗಿದ್ದರೆ, 1 ಕೆಜಿ ಬೆಳ್ಳಿ ದರದಲ್ಲಿ 600 ರೂಪಾಯಿ ಏರಿಕೆ ಕಂಡಿದೆ. 

Gold Silver Price : ದೇಶಾದ್ಯಂತ ಚಿನ್ನ, ಬೆಳ್ಳಿ ದರವೆಷ್ಟು?

ಚಿನ್ನದ ದರ ಇನ್ನಷ್ಟು ಹೆಚ್ಚೋ ಸಾಧ್ಯತೆ?
ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ದರದಲ್ಲಿ ಇನ್ನಷ್ಟು ಹೆಚ್ಚಳವಾಗೋ ನಿರೀಕ್ಷೆಯಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದು ರಷ್ಯಾ ಹಾಗೂ ಉಕ್ರೇನ್ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳೋ ಸಾಧ್ಯತೆಯಿರೋದು. ಎರಡನೆಯದು ಜಾಗತಿಕ ಆರ್ಥಿಕತೆಯಲ್ಲಿನ ಹಿಂಜರಿಕೆ ಹಾಗೂ ಹಣದುಬ್ಬರ ದರದಲ್ಲಿ ಏರಿಕೆಯಾಗಿರೋದು. ಇದ್ರಿಂದ ಬಂಗಾರದ ಬೆಲೆ ಇನ್ನಷ್ಟು ಜಿಗಿತ ಕಾಣಲಿದ್ದು, ಈ ವರ್ಷ 55,000ರೂ. ಮುಟ್ಟಿದ್ರೆ, ಮುಂದಿನ ವರ್ಷ 62,000ರೂ. ಗಡಿ ತಲುಪೋ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರ ಹೀಗಿದೆ
ಬೆಂಗಳೂರು ( Bangalore) 
ಬೆಂಗಳೂರಿನಲ್ಲಿ  ( Bangalore 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 47,250ರೂ. ಇತ್ತು. ಇಂದು400ರೂ. ಇಳಿಕೆಯಾಗಿ 46,850ರೂ. ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರ 51,550ರೂ. ಇತ್ತು, ಇಂದು 400ರೂ. ಇಳಿಕೆಯಾಗಿ 51,110ರೂ. ಆಗಿದೆ. ಒಂದು ಕೆ. ಜಿ ಬೆಳ್ಳಿ ದರ 69,000 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡ 2,700ರೂ. ಇಳಿಕೆ ಕಂಡುಬಂದಿದೆ. ನಿನ್ನೆ ಒಂದು ಕೆ.ಜಿ. ಬೆಳ್ಳಿ ದರ 72,700ರೂ. ಆಗಿತ್ತು. ಇಂದು 70,000ರೂ. ಆಗಿದೆ. 

ದೆಹಲಿಯಲ್ಲಿ (Delhi) 
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಇಂದು10ರೂ. ಏರಿಕೆಯಾಗಿದೆ. ನಿನ್ನೆ 47,250 ರೂ. ಇತ್ತು, ಇಂದು 10ರೂ. ಏರಿಕೆಯಾಗಿ 47,260 ರೂ. ಆಗಿದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 51,550ರೂ. ಆಗಿದ್ದು, ಇಂದು 440ರೂ. ಇಳಿಕೆಯಾಗಿ 51,110ರೂ. ಇದೆ. ಒಂದು ಕೆ.ಜಿ.ಬೆಳ್ಳಿ ದರ ನಿನ್ನೆಗಿಂತ ಇಂದು 4000ರೂ. ಏರಿಕೆಯಾಗಿದೆ. ನಿನ್ನೆ 66,000ರೂ. ಇದ್ದು, ಇಂದು 70,000ರೂ. ಆಗಿದೆ. 

Russia Ukraine Crisis: ಯುದ್ಧದಿಂದ ಗ್ಲೋಬಲ್‌ ಎಕಾನಾಮಿ ತಲ್ಲಣ: ಭಾರತದ ಆರ್ಥಿಕತೆಗೂ ಭಾರೀ ಹೊಡೆತ!

ಮುಂಬೈನಲ್ಲಿ(Mumbai) 
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ, 46,850 ರೂ.ಇದೆ. ನಿನ್ನೆ 47,250ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 400ರೂ. ಇಳಿಕೆಯಾಗಿದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 51,550ರೂ.ಆಗಿದೆ. ನಿನ್ನೆ 51,110ರೂ. ಆಗಿತ್ತು. ಅಂದ್ರೆ ನಿನ್ನೆಗಿಂತ ಇಂದು 440ರೂ. ಇಳಿಕೆಯಾಗಿದೆ. ಇನ್ನು ಬೆಳ್ಳಿ ದರದಲ್ಲಿ ಕೂಡ 1000ರೂ. ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ ನಿನ್ನೆ 66,000ರೂ. ಇದ್ದು, ಇಂದು 65,000ರೂ. ಇದೆ.  

ಚೆನ್ನೈಯಲ್ಲಿ(Chennai) 
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು 48,010ರೂ. ಆಗಿದೆ. ನಿನ್ನೆ 49,510ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 1,500ರೂ. ಆಗಿದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 54,010ರೂ. ಇತ್ತು. ಇಂದು 52,37ರೂ. ಇದೆ.  ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು,  ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 72,700ರೂ. ಇದ್ದು, ಇಂದು 7,700ರೂ. ಇಳಿಕೆಯಾಗಿ 65,000ರೂ. ಇದೆ. 

"

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!