ಇಂದೆನೋ ವಿಶೇಷ: ಸಿಹಿ ಸುದ್ದಿಗಳ 'ಮಹಾಮಳೆ'!

Published : Oct 09, 2018, 03:06 PM ISTUpdated : Oct 09, 2018, 09:16 PM IST
ಇಂದೆನೋ ವಿಶೇಷ: ಸಿಹಿ ಸುದ್ದಿಗಳ 'ಮಹಾಮಳೆ'!

ಸಾರಾಂಶ

ಇಂದು ಎಲ್ಲೆಡೆ ಸಿಹಿ ಸುದ್ದಿಗಳದ್ದೇ ಭರಾಟೆ! ಕಹಿ ಸುದ್ದಿಗಳ ದಿನಗಳು ಮುಗಿದಂತೆ ಕಾಣುತ್ತಿದೆ! ಡಾಲರ್ ಎದುರು ರೂಪಾಯಿ ಮೌಲ್ಯ ತುಸು ಚೇತರಿಕೆ! ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಕೂಡ ಚೇತರಿಕೆ

ಮುಂಬೈ(ಅ.9): ಬ್ಯಾಂಕ್ ಮತ್ತು ರಫ್ತುದಾರರು ಅಮೆರಿಕದ ಕರೆನ್ಸಿಯ ಮಾರಾಟದಿಂದಾಗಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 18 ಪೈಸೆ ಏರಿಕೆಯಾಗಿ ಡಾಲರ್ ವೊಂದಕ್ಕೆ ರೂಪಾಯಿ ಬೆಲೆ 73.88 ರೂ. ಆಗಿದೆ.

ಸಾಗರೋತ್ತರದಲ್ಲಿ ಡಾಲರ್ ಮೌಲ್ಯ ದುರ್ಬಲವಾಗಿರುವುದರಿಂದ ಜಾಗತಿಕ ಕಚ್ಚಾ ತೈಲ ಬೆಲೆ ಮತ್ತು ದೇಶೀಯ ಷೇರು ಮಾರುಕಟ್ಟೆಯಲ್ಲಿ ಅಧಿಕ ಬೆಲೆಯಿಂದಾಗಿ ರೂಪಾಯಿ ಮೌಲ್ಯ ಇಂದು ಏರಿಕೆ ಕಂಡುಬಂತು.

ಇಂದು ಬೆಳಗ್ಗೆ,ವಿದೇಶಿ ವಿನಿಮಯ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಸ್ಥಳೀಯ ಕರೆನ್ಸಿ 18 ಪೈಸೆ ಏರಿಕೆ ಕಂಡು 73.88 ರೂ.ಗೆ ತಲುಪಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿಯ ಸೂಚ್ಯಂಕ ಈ ವರ್ಷ ಶೇ.7.3ರಷ್ಟು ಏರಿಕೆ ಕಂಡುಬಂದಿದ್ದು, ಮುಂದಿನ ವರ್ಷಕ್ಕೆ ಶೇ.7.4ರಷ್ಟು ಎಂದು ತೋರಿಸುತ್ತಿರುವುದು ಕೂಡ ಹೂಡಿಕೆದಾರರಲ್ಲಿ ಉತ್ಸಾಹ ಕಂಡುಬಂದಿದೆ.

ಈ ಮಧ್ಯೆ, ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ 72 ಅಂಕ ಏರಿಕೆ ಕಂಡುಬಂದು ಶೇಕಡಾ 0.21 ವೃದ್ಧಿಯಾಗಿ 34,546ರಂತೆ ವಹಿವಾಟು ನಡೆಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!