ಪ್ಲೀಸ್.. ಗಾಂಧಿ ನೋಟನ್ನು ಕಾಪಾಡಿ ಮೋದಿ!

By Web DeskFirst Published Sep 4, 2018, 1:13 PM IST
Highlights

ಮತ್ತೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ! ಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ! ಪ್ರತೀ ಡಾಲರ್ ಗೆ  71.37 ರೂ. ಗೆ ತಲುಪಿದ ರೂಪಾಯಿ ಮೌಲ್ಯ! ಸರಕು ಸಾಗಣೆ ವೆಚ್ಚಗಳ ಬೆಲೆ ದುಬಾರಿ! ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆಯಾದ ಕಚ್ಚಾ ತೈಲದರ 

ಮುಂಬೈ(ಸೆ.4): ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಮುಂದುವರೆದಿದ್ದು, ಇಂದು ಮತ್ತೆ ರುಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮೊತ್ತಕ್ಕೆ ಕುಸಿದಿದೆ.

ಡಾಲರ್‌ ಎದುರು ರೂಪಾಯಿ ಇಂದು ಷೇರು ಮಾರುಕಟ್ಟೆ ವಹಿವಾಟಿನ ನಡುವೆ ಸಾರ್ವಕಾಲಿಕ ದಾಖಲೆ ಕುಸಿತ ಕಂಡಿದ್ದು, ಡಾಲರ್ ಎದುರು ರೂಪಾಯಿ 16 ಪೈಸೆಗಳಷ್ಟು ಕುಸಿತ ಗೊಂಡಿದೆ. ಸದ್ಯ ಪ್ರತೀ ಡಾಲರ್ ಗೆ  71.37 ರೂ.ಗಳಾಗಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆಯ ತಳ ಮಟ್ಟಕ್ಕೆ ರೂಪಾಯಿ ಕುಸಿದಿದೆ. 

ಕಳೆದ ವಾರಾಂತ್ಯದ ವಹಿವಾಟಿನಲ್ಲಿ ಡಾಲರ್ ಹೆಚ್ಚು ಬೇಡಿಕೆ ಸೃಷ್ಟಿಯಾಗಿದ್ದೇ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಅಂತೆಯೇ ಸರಕು ಸಾಗಣೆ ವೆಚ್ಚಗಳ ದುಬಾರಿ ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

ಇನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಕೂಡ ಏರಿಕೆಯಾಗಿದ್ದು, ಇಂದಿನ ಸೆನ್ಸೆಕ್ಸ್ ಮತ್ತು ನಿಫ್ಟಿ ಅಂಶಗಳ ಅಲ್ಪ ಕುಸಿತ ಕೂಡ ರೂಪಾಯಿ ಮೌಲ್ಯದ ಕುಸಿತದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. 

ಅಲ್ಲದೇ ನಕಾರಾತ್ಮಕ ವಹಿವಾಟಿನ ಹಿನ್ನಲೆಯಲ್ಲಿ ವಿದೇಶಿ ಹೂಡೆಕೆದಾರರು ಸುಮಾರು 21.13 ಕೋಟಿ ಮೌಲ್ಯದ ಷೇರುಗಳನ್ನು ಮಾರಲು ಮುಂದಾಗಿದ್ದು, ಭಾರತೀಯ ಷೇರುಮಾರುಕಟ್ಟೆಯ ಹಿನ್ನಡೆಗೆ ಕಾರಣ ಎನ್ನಲಾಗಿದೆ.

click me!