ಕುಸಿದ ಚಿಲ್ಲರೆ ಹಣದುಬ್ಬರ: ತರಕಾರಿ ಬೆಲೆ?

By Web DeskFirst Published Sep 13, 2018, 1:59 PM IST
Highlights

ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡ 3.69ಕ್ಕೆ ಕುಸಿತ! ಕಳೆದ ಹತ್ತು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರ! ಹಣ್ಣು, ತರಕಾರಿ, ಅಡುಗೆ ಪದಾರ್ಥಗಳ ಬೆಲೆ ಇಳಿಕೆ! ಅಲ್ಪಾವಧಿ ಬಡ್ಡಿದರ ಏರಿಕೆಯ ಅಂದಾಜು
    

ನವದೆಹಲಿ(ಸೆ.13): ಆಗಸ್ಟ್ ತಿಂಗಳಿನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡ 3.69ಕ್ಕೆ ಕುಸಿದಿದ್ದು, ಕಳೆದ ಹತ್ತು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ.

ಮುಖ್ಯವಾಗಿ ಹಣ್ಣು ಮತ್ತು ತರಕಾರಿಗಳನ್ನು ಒಳಗೊಂಡಂತೆ ಅಡುಗೆ ಪದಾರ್ಥಗಳ ಬೆಲೆ ಕುಸಿತವಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರವು ಜುಲೈನಲ್ಲಿ 4.17 ರಷ್ಟು ಮತ್ತು ಆಗಸ್ಟ್ 2017 ರಲ್ಲಿ 3.28 ರಷ್ಟು ಇತ್ತು. 2017 ರ ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 3.58 ರಷ್ಟಿತ್ತು.

ಅಲ್ಪಾವಧಿ ಹಣದುಬ್ಬರ ಆರ್ ಬಿಐ ಅಂದಾಜಿಸಿದ್ದ ಶೇ. 4ಕ್ಕಿಂತ ಕಡಿಮೆ ಇರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅಲ್ಪಾವಧಿಯಲ್ಲಿನ ಬಡ್ಡಿದರಗಳು ಏರಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.

click me!