912GB ಡೇಟಾ ಹೊಂದಿರುವ ಸೂಪರ್ ಡೂಪರ್ ಪ್ಲಾನ್ ನೀಡಿದ ಜಿಯೋ; 5G ಜೊತೆ ಫ್ರೀ OTT ಆಕ್ಸೆಸ್!

Published : Jun 23, 2025, 05:10 PM IST
Reliance Jio

ಸಾರಾಂಶ

ರಿಲಯನ್ಸ್ ಜಿಯೋ 912ಜಿಬಿ ಡೇಟಾ, 5ಜಿ ಮತ್ತು ಉಚಿತ ಒಟಿಟಿ ಆಕ್ಸೆಸ್‌ನೊಂದಿಗೆ ಹೊಸ ಪ್ಲಾನ್‌ ಅನ್ನು ಪರಿಚಯಿಸಿದೆ. ಈ ವಾರ್ಷಿಕ ಪ್ಲಾನ್ ದೀರ್ಘಾವಧಿಯ ಬಳಕೆದಾರರಿಗೆ ಸೂಕ್ತವಾಗಿದೆ.

ಮುಂಬೈ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ದೇಶದ ಅತಿದೊಡ್ಡ ಖಾಸಗಿ ಟೆಲಿಕಾಂ ಕಂಪನಿಯಾಗಿದೆ. 48 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದುವ ಮೂಲಕ ರಿಲಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದೆ. ಕಡಿಮೆ ಬೆಲೆಗೆ ಹೆಚ್ಚು ವ್ಯಾಲಿಡಿಟಿ ಹೊಂದಿರುವ ಪ್ಲಾನ್‌ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುವಲ್ಲಿ ರಿಲಯನ್ಸ್ ಜಿಯೋ ಯಶಸ್ವಿಯಾಗುತ್ತದೆ. ಇದರ ಜೊತೆ ಎದುರಾಳಿಗಳಾದ ಭಾರ್ತಿ ಏರ್‌ಟೆಲ್, ವೊಡಾಫೊನ್ ಐಡಿಯಾಗೆ ಟಕ್ಕರ್ ನೀಡುವ ರೀತಿಯಲ್ಲಿಯೇ ರಿಲಯನ್ಸ್ ಜಿಯೋ ಹೊಸ ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಿರುತ್ತದೆ.

ಇದೀಗ ರಿಲಯನ್ಸ್ ಜಿಯೋ 912GB ಡೇಟಾ ಹೊಂದಿರುವ ಸೂಪರ್ ಡೂಪರ್ ಪ್ಲಾನ್ ನೀಡುತ್ತಿದೆ. 912GB ಡೇಟಾ ಜೊತೆಯಲ್ಲಿ 5G ಜೊತೆ ಫ್ರೀ OTT ಪ್ಲಾಟ್‌ಫಾರಂಗಳಿಗೆ ಉಚಿತ ಆಕ್ಸೆಸ್ ನೀಡುತ್ತಿದೆ. ಈ ಪ್ಲಾನ್ ಬೆಲೆ ಮತ್ತು ವ್ಯಾಲಿಡಿಟಿ ಎಷ್ಟು ಎಂದು ನೋಡೋಣ ಬನ್ನಿ.

ದೀರ್ಘಾವದಿ ವ್ಯಾಲಿಡಿಟಿ ಹೊಂದಿರುವ ಸೂಪರ್ ಪ್ಲಾನ್

ಪದೇ ಪದೇ ರೀಚಾರ್ಜ್ ಮಾಡಿಕೊಳ್ಳುವುದು ತಲೆನೋವಿನ ಕೆಲಸವಾಗಿದೆ. ಹಾಗಾಗಿ ದೀರ್ಘಾವಧಿ ಅಂದ್ರೆ 1 ವರ್ಷ ವ್ಯಾಲಿಡಿಟಿ ಹೊಂದಿರುವ ಪ್ಲಾನ್‌ಗಳನ್ನು ಆಕ್ಟಿವೇಟ್ ಮಾಡಿಕೊಳ್ಳುವುದು ಉತ್ತಮ ಮಾರ್ಗವಾಗಿರುತ್ತದೆ. ಇಂತಹ ದೀರ್ಘವಾದಿ ಪ್ಲಾನ್‌ಗಳಲ್ಲಿ ಡೇಟಾ ಮತ್ತು ಹೆಚ್ಚುವರಿ ಲಾಭಗಳಾದರದ ಮೇಲೆ ಬೇರೆ ಬೇರೆ ಬೆಲೆಯಲ್ಲಿ ಪ್ಲಾನ್‌ಗಳನ್ನು ಪರಿಚಯಿಸಲಾಗುತ್ತಿದೆ. ಇಂದು ನಾವು ಹೇಳುತ್ತಿರುವ ರಿಲಯನ್ಸ್ ಜಿಯೋ ಪ್ಲಾನ್‌ನಲ್ಲಿ ಗ್ರಾಹಕರಿಗೆ 912GB ಡೇಟಾ ಸಿಗುತ್ತದೆ.

ರಿಲಯನ್ಸ್ ಜಿಯೋದಿಂದ 912GB ಡೇಟಾ ಪ್ಲಾನ್

ಆಗಾಗ್ಗೆ ರೀಚಾರ್ಜ್‌ಗಳ ತೊಂದರೆಯಿಲ್ಲದೆ ವಿಶ್ವಾಸಾರ್ಹ ಇಂಟರ್ನೆಟ್, ಕರೆ ಸೇವೆ ಮತ್ತು ಅತ್ಯಧಿಕ ಡೇಟಾ ಬಳಕೆ ಮಾಡೋರಿಗೆ ಈ ಪ್ಲಾನ್ ಸೂಕ್ತವಾಗಿದೆ.

ವ್ಯಾಲಿಡಿಟಿ: 365 ದಿನಗಳು (1 ವರ್ಷ)

ಡೇಟಾ: ಪ್ರತಿದಿನ 2.5GB ಡೇಟಾ (ವರ್ಷಕ್ಕೆ 912GB)

ವಾಯ್ಸ್ ಕಾಲ್: ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕಾಲ್ ಮಾಡಬಹುದು.

ಎಸ್‌ಎಂಎಸ್: ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು. (ವರ್ಷಕ್ಕೆ 36500 ಎಸ್‌ಎಂಎಸ್)

5G ಆಕ್ಸೆಸ್: ಅರ್ಹ ಬಳಕೆದಾರರಿಗೆ ಅನ್‌ಲಿಮಿಟೆಡ್ ಟ್ರ್ಯು 5G ಡೇಟಾ

ಬೆಲೆ: 3,599 ರೂಪಾಯಿ

ದೀರ್ಘಾವಧಿಯ ಈ ಪ್ಲಾನ್‌ನಲ್ಲಿರುವ ಹೆಚ್ಚುವರಿ ಲಾಭಗಳು

ಸಾಮಾನ್ಯವಾಗಿ ಜಿಯೋ ಬಳಕೆದಾರರಿಗೆ ಜಿಯೋ ಟಿವಿ ಆಕ್ಸೆಸ್ ಉಚಿತವಾಗಿ ಸಿಗುತ್ತದೆ. ಈ ಆಪ್‌ ಮೂಲಕ ಲೈವ್ ಚಾನೆಲ್ ವೀಕ್ಷಣೆ ಮಾಡಬಹುದು. 50GB ಉಚಿತ ಕ್ಲೌಡ್ ಸ್ಟೋರೇಜ್ (JioCloud AI) ಲಭ್ಯವಾಗುತ್ತದೆ. 90 ದಿನಗಳವರೆಗೆ JioCinema Premium (formerly Jio Hotstar) ಆಕ್ಸೆಸ್ ಕೂಡ ಗ್ರಾಹಕರಿಗೆ ಲಭ್ಯವಾಗುತ್ತದೆ. ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮನರಂಜನೆ ನೀಡುವ ಉದ್ದೇಶವನ್ನು ಈ ಪ್ಲಾನ್ ಒಳಗೊಂಡಿದೆ.

ನಿಯಮಿತ ಬಳಕೆದಾರರಿಗೆ ಈ ಪ್ಲಾನ್

ಈ ಒಂದು ಪ್ಯಾಕೇಜ್ ಎಲ್ಲಾ ವರ್ಗದವರಿಗೆ ಸೂಕ್ತ ಎಂದು ಹೇಳಬಹುದು. ವಿದ್ಯಾರ್ಥಿ, ಉದ್ಯೋಗಿಗಳು, ಪ್ರವಾಸಿಗಳು, ಗೃಹಿಣಿಯರಿಗೂ ಈ ಒಂದು ವರ್ಷದ ಪ್ಲಾನ್ ಸೂಕ್ತವಾಗಿದೆ. ದೈನಂದಿನ ಮಿತಿಗಳಿಲ್ಲದೆ 5G ಪ್ರವೇಶವನ್ನು ಹುಡುಕುತ್ತಿರುವ ಬಳಕೆದಾರರಿಗೆ ಇದು ಉತ್ತಮ ಫಿಟ್ ಆಗಿದೆ. ಅನ್‌ಲಿಮಿಟೆಡ್ ಕಾಲ್, ಡೇಟಾ, OTT ವಿಷಯ ಮತ್ತು ಕ್ಲೌಡ್ ಸಂಗ್ರಹಣೆ ಆಯ್ಕೆಯನ್ನು ಈ ಪ್ಲಾನ್ ಹೊಂದಿದೆ.

ಸ್ಮಾರ್ಟ್‌ ಪ್ಲಾನ್

ಜಿಯೋದ 3599 ರೂ. ವಾರ್ಷಿಕ ರೀಚಾರ್ಜ್ ಯೋಜನೆಯು ವರ್ಷವಿಡೀ ನಿರಂತರ ಸೇವೆಯನ್ನು ಬಯಸುವ ಬಳಕೆದಾರರಿಗೆ ಒಂದು ಸ್ಮಾರ್ಟ್ ಮತ್ತು ಆರ್ಥಿಕ ಆಯ್ಕೆಯಾಗಿದೆ. 912GB ಹೈ-ಸ್ಪೀಡ್ ಡೇಟಾ, ಅನಿಯಮಿತ ಕರೆ, ನಿಜವಾದ 5G ಪ್ರವೇಶ ಮತ್ತು OTT ಚಂದಾದಾರಿಕೆಗಳು ಮತ್ತು ಕ್ಲೌಡ್ ಸಂಗ್ರಹಣೆಯಂತಹ ಹೆಚ್ಚುವರಿ ಸವಲತ್ತುಗಳೊಂದಿಗೆ, ಈ ಯೋಜನೆಯು ಸಮಂಜಸವಾದ ಬೆಲೆಯಲ್ಲಿ ಉತ್ತಮ ಮೌಲ್ಯವನ್ನು ನೀಡುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ
Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?