100 -200 ನೋಟಿನ ಬಗ್ಗೆ ಆರ್ ಬಿಐ ಮಹತ್ವದ ಮಾಹಿತಿ, ಮತ್ತೆ ನೋಟು ಎಕ್ಸ್ಚೇಂಜ್ ಮಾಡ್ಬೇಕಾ? ʻ

Published : Mar 12, 2025, 03:25 PM ISTUpdated : Mar 12, 2025, 04:07 PM IST
100 -200 ನೋಟಿನ ಬಗ್ಗೆ ಆರ್ ಬಿಐ ಮಹತ್ವದ ಮಾಹಿತಿ, ಮತ್ತೆ ನೋಟು ಎಕ್ಸ್ಚೇಂಜ್ ಮಾಡ್ಬೇಕಾ? ʻ

ಸಾರಾಂಶ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಶೀಘ್ರದಲ್ಲೇ ಹೊಸ 100 ಮತ್ತು 200 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಿದೆ. ವಿನ್ಯಾಸ ಬದಲಾಗದಿದ್ದರೂ, ಹೊಸ ಗವರ್ನರ್ ಸಹಿ ಇರುತ್ತದೆ. ಹಳೆಯ ನೋಟುಗಳು ಚಲಾವಣೆಯಲ್ಲಿರುತ್ತವೆ, ಬದಲಾಯಿಸುವ ಅಗತ್ಯವಿಲ್ಲ. ಡಿಜಿಟಲ್ ವಹಿವಾಟು ಹೆಚ್ಚಿದ್ದರೂ, ನಗದು ಬಳಕೆಯೂ ಏರಿಕೆಯಾಗಿದೆ. ದೆಹಲಿ, ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಎಟಿಎಂನಿಂದ ಹಣ ಡ್ರಾ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಗದು ಬಳಕೆ ಅಧಿಕವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) 100 ಮತ್ತು 200 ರೂಪಾಯಿ ನೋಟಿ (Note)ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ನೂರು ಹಾಗೂ ಇನ್ನೂರು ರೂಪಾಯಿ ಮುಖ ಬೆಲೆಯ ಹೊಸ ನೋಟುಗಳನ್ನು ಆರ್ ಬಿಐ ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. 

ಹೊಸ ನೋಟಿನಲ್ಲಿ ಏನು ಬದಲಾವಣೆ? : ಆರ್ ಬಿಐ ಬಿಡುಗಡೆ ಮಾಡಲಿರುವ ಹೊಸ 100 ಹಾಗೂ 200 ರೂಪಾಯಿ ನೋಟಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇರೋದಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.  ಹೊಸ ನೋಟುಗಳಲ್ಲಿ ಆಗುವ ಬದಲಾವಣೆ ಅಂದ್ರೆ ಗವರ್ನರ್ ಸಹಿ. ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸಹಿ ಹೊಸ ನೋಟಿನಲ್ಲಿ ಇರಲಿದೆ. ಹೊಸ ನೋಟಿನ ಮುದ್ರಣದಲ್ಲಿ ಹೆಚ್ಚಿನ ವಿಶೇಷತೆ ಇಲ್ಲ. ಇದು ಸಾಮಾನ್ಯ ಸಂಗತಿಯಾಗಿದ್ದು,  ಪ್ರತಿ ಬಾರಿ ಹೊಸ ಗವರ್ನರ್ ನೇಮಕದ ನಂತ್ರ ಅವರ ಸಹಿ ಇರುವ ಹೊಸ ನೋಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. 

ಡಿಮ್ಯಾಟ್ ಖಾತೆ: ತೆರೆಯುವುದು ಹೇಗೆ? ಏನೇನು ದಾಖಲೆ ಬೇಕು?

ಹಳೆ ನೋಟು ಮಾನ್ಯ : ಆರ್ ಬಿಐ ಹೊಸ 100 ಹಾಗೂ 200ರ ನೋಟು ಬಿಡುಗಡೆ ಮಾಡ್ತಿದ್ದಂತೆ ಹಳೆ ನೋಟುಗಳು ಮಾರುಕಟ್ಟೆಯಲ್ಲಿ ಇರಲ್ವಾ ಎನ್ನುವ ಆತಂಕ ಬೇಡ. ಹಳೆಯ 100 ಮತ್ತು 200 ರೂ. ನೋಟುಗಳು ಮೊದಲಿನಂತೆಯೇ ಮಾನ್ಯವಾಗಿರುತ್ತವೆ. ಅವುಗಳನ್ನು ಜನರು ಧೈರ್ಯವಾಗಿ ಪಡೆಯಬಹುದು. ಈ ನೋಟುಗಳನ್ನು ಬದಲಾಯಿಸುವ ಅಗತ್ಯವಿಲ್ಲ. ಈ ಹೊಸ ನೋಟುಗಳು ಶೀಘ್ರದಲ್ಲೇ ಬ್ಯಾಂಕ್‌ಗಳು ಮತ್ತು ಎಟಿಎಂಗಳಲ್ಲಿ ಲಭ್ಯವಿರುತ್ತವೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. 

ಯಾವ ಪ್ರದೇಶದಲ್ಲಿ ಹೆಚ್ಚು ನಗದು ಬಳಕೆ ? : ಭಾರತದಲ್ಲಿ ಡಿಜಿಟಲ್ ವಹಿವಾಟು (Digital transaction) ಹೆಚ್ಚಾಗಿದೆ. ಅದಾಗ್ಯೂ ದೇಶದಲ್ಲಿ ನಗದು ಚಲಾವಣೆ ಮೊದಲಿಗಿಂತ ಹೆಚ್ಚಾಗಿದೆ ಎಂದು ಆರ್ ಬಿಐ ವರದಿ ಮಾಡಿದೆ. ಆರ್‌ಬಿಐ ದತ್ತಾಂಶದ ಪ್ರಕಾರ, ಮಾರ್ಚ್ 2017 ರಲ್ಲಿ ನಗದು ಚಲಾವಣೆ 13.35 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು ಮಾರ್ಚ್ 2024 ರ ವೇಳೆಗೆ 35.15 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದ್ರ ಜೊತೆಯಲ್ಲೇ ಡಿಜಿಟಲ್ ವ್ಯವಹಾರದಲ್ಲೂ ಏರಿಕೆ ಕಂಡು ಬಂದಿದೆ. ಮಾರ್ಚ್ 2020 ರಲ್ಲಿ ಯುಪಿಐ ಮೂಲಕ ಡಿಜಿಟಲ್ ವಹಿವಾಟು 2.06 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು.  ಫೆಬ್ರವರಿ 2024 ರ ವೇಳೆಗೆ ಅದು 18.07 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. 2024ರಲ್ಲಿ, ಒಂದೇ ವರ್ಷದಲ್ಲಿ ಡಿಜಿಟಲ್ ವಹಿವಾಟು ಸುಮಾರು 172 ಬಿಲಿಯನ್  ರೂಪಾಯಿ ತಲುಪಿದೆ.

ಸ್ಟಾರ್ಟಪ್ ಜಗತ್ತಿನಲ್ಲಿ LAT ಏರೋಸ್ಪೇಸ್, ಮಾಜಿ ಮುಖ್ಯಸ್ಥೆಯ ಕಂಪೆನಿಗೆ ಜೊಮ್ಯಾಟೊ ಸಿಇಒ

ಯಾವ ಪ್ರದೇಶದಲ್ಲಿ ಹೆಚ್ಚು ನಗದು ಬಳಕೆ : ತರಕಾರಿ, ಹಾಲು ಮಾರಾಟಗಾರರು ಸೇರಿದಂತೆ ಸಣ್ಣ ಕಚೇರಿಗಳಲ್ಲಿ ಕೂಡ ಡಿಜಿಟಲ್ ವಹಿವಾಟು ನಡೆಯುತ್ತಿದೆ. ಆದ್ರೆ ಎಟಿಎಂನಿಂದ ಹಣ ವಿತ್ಡ್ರಾ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ. ದೆಹಲಿ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ 2024ರ ಹಣಕಾಸು ವರ್ಷದಲ್ಲಿ ಎಟಿಎಂಗಳಿಂದ ಅತಿ ಹೆಚ್ಚು ಹಣ ವಿತ್ ಡ್ರಾ ಮಾಡಲಾಗಿದೆ.  ಹಬ್ಬ ಹಾಗೂ ಚುನಾವಣೆ ಸಮಯದಲ್ಲಿ ನಗದಿಗೆ ಬೇಡಿಕೆ ಹೆಚ್ಚಾಗಿದೆ ಎಂದು ವರದಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಗದು ಬಳಸುವವರ ಸಂಖ್ಯೆ ಹೆಚ್ಚಿದೆ. ಅಲ್ಲಿ ಡಿಜಿಟಲ್ ಪಾವತಿ (digital payment) ಕಡಿಮೆ ಇರುವ ಕಾರಣ ನಗದು ಹರಿವು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ