
ಬೆಂಗಳೂರು (ಸೆ.1): ನಿಮ್ಮ ಬಳಿ ಇನ್ನೂ 2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಇರಿಸಿಕೊಂಡಿದ್ದಲ್ಲಿ, ಆರ್‌ಬಿಐ ಬಿಗ್ ಅಪ್‌ಡೇಟ್ ನೀಡಿದೆ.ಭಾರತೀಯ ರಿಸರ್ವ್ ಬ್ಯಾಂಕ್ (RBI) 2023ರ ಮೇ 19 ರಂದು ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿತ್ತು. ಈ ಪ್ರಕ್ರಿಯೆಯ ಪ್ರಗತಿಯನ್ನು ಆರ್‌ಬಿಐ ಪ್ರತಿ ತಿಂಗಳು ಪ್ರಕಟ ಮಾಡುತ್ತಿದೆ. 2025ರ ಆಗಸ್ಟ್ 31ರ ವೇಳೆಗೆ ಆರ್‌ಬಿಐಗೆ ವಾಪಾಸಾಗಿರುವ 2 ಸಾವಿರ ರೂಪಾಯಿ ನೋಟುಗಳ ವಿವರವನ್ನು ತಿಳಿಸಲಾಗಿದೆ.
2023ರ ಮೇ 19 ರಂದು ₹3.56 ಲಕ್ಷ ಕೋಟಿಯಷ್ಟಿದ್ದ ₹2000 ನೋಟುಗಳ ಒಟ್ಟು ಮೌಲ್ಯವು, 2025ರ ಆಗಸ್ಟ್ 31ರ ಅಂತ್ಯಕ್ಕೆ ₹5,956 ಕೋಟಿಗೆ ಇಳಿದಿದೆ. ಅಂದರೆ, ಚಲಾವಣೆಯಲ್ಲಿದ್ದ ಶೇಕಡಾ 98.33% ರಷ್ಟು ನೋಟುಗಳು ಈಗಾಗಲೇ ಹಿಂತಿರುಗಿದಂತಾಗಿದೆ.
₹2000 ನೋಟುಗಳು ಈಗಲೂ ಕಾನೂನು ಮಾನ್ಯತೆಯನ್ನು ಹೊಂದಿದೆ ಎಂದು ಆರ್‌ಬಿಐ ತಿಳಿಸಿದೆ. ಅದರರ್ಥ ನೀವು ಈಗಲೂ ಕೂಡ 2 ಸಾವಿರ ರೂಪಾಯಿ ನೋಟುಗಳನ್ನು ವ್ಯವಹಾರಕ್ಕೆ ಬಳಸಿಕೊಳ್ಳಬಹುದಾಗಿದೆ.
2023ರ ಅಕ್ಟೋಬರ್ 7 ರವರೆಗೆ ದೇಶದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ₹2000 ನೋಟುಗಳನ್ನು ಜಮಾ ಮಾಡಲು ಅಥವಾ ಬದಲಾಯಿಸಲು ಅವಕಾಶವಿತ್ತು. 2023ರ ಮೇ 19 ರಿಂದ, RBI ಯ 19 ಇಶ್ಯೂ ಕಚೇರಿಗಳಲ್ಲಿ ನೋಟುಗಳನ್ನು ಬದಲಾಯಿಸಲು ಅವಕಾಶ ನೀಡಲಾಗಿದೆ. 2023ರ ಅಕ್ಟೋಬರ್ 9 ರಿಂದ, RBI ಯ ಈ ಕಚೇರಿಗಳಲ್ಲಿ ವೈಯಕ್ತಿಕ ಖಾತೆಗಳಿಗೆ ನೋಟುಗಳನ್ನು ಜಮಾ ಮಾಡಿಕೊಳ್ಳುವ ವ್ಯವಸ್ಥೆಯೂ ಇದೆ.
ಸಾರ್ವಜನಿಕರು ಯಾವುದೇ ಅಂಚೆ ಕಚೇರಿಯ ಮೂಲಕ ಅಂಚೆ ಸೇವೆಯನ್ನು ಬಳಸಿಕೊಂಡು, ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು RBI ಇಶ್ಯೂ ಕಚೇರಿಗಳಿಗೆ ₹2000 ನೋಟುಗಳನ್ನು ಕಳುಹಿಸಬಹುದಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.