ರತನ್ ಟಾಟಾ ಕಂಪೆನಿಯ ಸಿಇಓ ಚಾಣಾಕ್ಷತನಕ್ಕೆ 7.21 ಕೋಟಿ ವೇತನ!

By Gowthami KFirst Published Jul 23, 2024, 5:34 PM IST
Highlights

ಪ್ರಸಿದ್ಧ ಟಾಟಾ ಗ್ರೂಪ್ ಕಂಪನಿಯ ಭಾಗವಾದ ವೋಲ್ಟಾಸ್ ಲಿಮಿಟೆಡ್ ನ  ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿರುವ ಪ್ರದೀಪ್ ಬಕ್ಷಿ ಅವರು 2018 ರಿಂದ  ಕಂಪೆನಿಯನ್ನು ಮುನ್ನಡೆಸಿದ್ದಾರೆ.

ಪ್ರಸಿದ್ಧ ಟಾಟಾ ಗ್ರೂಪ್ ಕಂಪನಿಯ ಭಾಗವಾದ ವೋಲ್ಟಾಸ್ ಲಿಮಿಟೆಡ್ ನ  ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿರುವ ಪ್ರದೀಪ್ ಬಕ್ಷಿ ಅವರು 2018 ರಿಂದ  ಕಂಪೆನಿಯನ್ನು ಮುನ್ನಡೆಸಿದ್ದಾರೆ.  ಉದ್ಯಮ ವಲಯದಲ್ಲಿ ಸುಮಾರು ಮೂವತ್ತು ವರ್ಷಗಳ ಅನುಭವವನ್ನು ಹೊಂದಿರುವ ಬಕ್ಷಿ ಅವರು ವ್ಯವಹಾರವನ್ನು ಸ್ಥಿರವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಚಾಣಾಕ್ಷತನ ಕಂಪೆನಿಯ ವಿಸ್ತರಣೆ ಮತ್ತು ಆರ್ಥಿಕ ಯಶಸ್ಸಿಗೆ ಬೆನ್ನೆಲುಬಾಗಿದೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯಲು ಅಲೆದಾಟ, ಆದ್ರೆ ಇಲ್ಲಿ ದಾಖಲೆಯ 9 ಮಿಲಿಯನ್ ಮನೆಗಳು ಖಾಲಿ!

Latest Videos

ದೆಹಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಬಕ್ಷಿ ಅವರು 2001 ರಲ್ಲಿ ವೋಲ್ಟಾಸ್‌ಗೆ ತೆರಳುವ ಮೊದಲು ಎಲೆಕ್ಟ್ರೋಲಕ್ಸ್ ಕೆಲ್ವಿನೇಟರ್‌ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.  ವೋಲ್ಟಾಸ್‌ನಲ್ಲಿ ಹಲವಾರು ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಅವುಗಳಲ್ಲಿ ಪ್ರಮುಖವಾಗಿ ಏರ್ ಕೂಲಿಂಗ್ ಉತ್ಪನ್ನಗಳ ವ್ಯವಹಾರದ ಮುಖ್ಯಸ್ಥರಾಗಿದ್ದರು. ಅಲ್ಲಿ ಅವರು ವಿಭಾಗದ ಲಾಭ ಮತ್ತು ಮಾರಾಟವನ್ನು ಹೆಚ್ಚಿಸಲು ಗಣನೀಯವಾಗಿ ಶ್ರಮಿಸಿದರು.

ವೋಲ್ಟಾಸ್ ಲಿಮಿಟೆಡ್  ಮುಂಬೈ ಮೂಲದ ಬಹುರಾಷ್ಟ್ರೀಯ ಗೃಹೋಪಯೋಗಿ ಕಂಪನಿಯಾಗಿದೆ. ಇದನ್ನು 1954 ರಲ್ಲಿ ವೋಲ್ಕಾರ್ಟ್ ಬ್ರದರ್ಸ್ ಮತ್ತು ಟಾಟಾ ಸನ್ಸ್   ಜಂಟಿಯಾಗಿ ಆರಂಭಿಸಿತು.  ಜೂನ್ 15, 2024 ಅಂಕಿ ಅಂಶದ ಪ್ರಕಾರ ಕಂಪೆನಿಯು ರೂ 49,585 ಕೋಟಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

ರಾಧಿಕಾ ಮರ್ಚೆಂಟ್‌ ಆಪ್ತ ಸ್ನೇಹಿತೆ ಜಾನ್ವಿ ಕಪೂರ್‌ ಅಂಬಾನಿ ಕುಟುಂಬಕ್ಕೆ ಹತ್ತಿರದ ಸಂಬಂಧಿ, ಹೇಗೆ ಗೊತ್ತಾ!

ಮಾರ್ಚ್ 2024 ರಲ್ಲಿ ಕೊನೆಗೊಂಡ ಹಣಕಾಸು ವರ್ಷದಲ್ಲಿ ವೋಲ್ಟಾಸ್‌ನ ವಾರ್ಷಿಕ ವರದಿಯ ಪ್ರಕಾರ FY24 ರಲ್ಲಿ ಗೃಹೋಪಯೋಗಿ ಕಂಪನಿಯ ಸಿಇಒ ಪ್ರದೀಪ್ ಬಕ್ಷಿ 7.21 ಕೋಟಿ ವಾರ್ಷಿಕ ವೇತನವನ್ನು ಪಡೆದರು. ಇದರಲ್ಲಿ  1.25 ಕೋಟಿ ರೂ ವೇತನ, ರೂ 2.90 ಕೋಟಿ ಪರ್ಕ್‌ಗಳು ಮತ್ತು ಭತ್ಯೆಗಳು (ನಿವೃತ್ತಿ ಸವಲತ್ತುಗಳನ್ನು ಒಳಗೊಂಡು) ಮತ್ತು ರೂ. 3.06 ಕೋಟಿ ಕಮಿಷನ್‌ಗಳು, ಇವೆಲ್ಲವನ್ನೂ ಎಫ್‌ವೈ 25 ರಲ್ಲಿ ಪಾವತಿಸಲು ನಿರ್ಧರಿಸಲಾಗಿದೆ.  

click me!