
ಗುವಾಹಟಿ[ಜು.31]: ದಿಬ್ರೂಗಢ ಟೀ ಎಸ್ಟೇಟ್‌ನ ‘ಮನೋಹರಿ ಗೋಲ್ಡ್ ಟೀ’ ಪುಡಿ ಗುವಾಹಟಿ ಚಹಾ ಹರಾಜು ಕೇಂದ್ರದಲ್ಲಿ ಮಂಗಳವಾರ 1 ಕೇಜಿಗೆ 50 ಸಾವಿರ ರುಪಾಯಿ ಬೆಲೆಯಲ್ಲಿ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ.
ಸೌರಭ ಟೀ ಟ್ರೇಡರ್ಸ್ ಪ್ರೈವೇಟ್ ಲಿಮಿಟೆಡ್ 2 ಕೇಜಿ ಮನೋಹರಿ ಗೋಲ್ಡ್ ಚಹಾ ಪುಡಿಯನ್ನು ಖರೀದಿಸಿದೆ. ಸಾರ್ವಜನಿಕರ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಹರಾಜಾದ ವಿಶ್ವದ ಮೊದಲ ಚಹಾ ಪುಡಿ ಇದಾಗಿದೆ ಎಂದು ಜಿಟಿಎಸಿ ತಿಳಿಸಿದೆ.
ಸಾಂಪ್ರದಾಯಿಕ ಮನೋಹರಿ ಗೋಲ್ಡ್ ತಳಿಯ ಎಲೆಗಳನ್ನು ಮುಂಜಾನೆಯೇ ಕಟಾವು ಮಾಡಿ ಸಂಸ್ಕರಿಸಲಾಗುತ್ತದೆ. ಅತ್ಯಂತ ಪರಿಮಳಯುಕ್ತ ಸ್ವಾದ ಹೊಂದಿರುವ ಈ ಚಹಾ ಬಂಗಾರದ ಬಣ್ಣ ಹೊಂದಿರುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.