2025ರ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ; 2 ವಿಧದ ರಜೆಯ ಸಂಪೂರ್ಣ ಮಾಹಿತಿ

By Mahmad Rafik  |  First Published Nov 9, 2024, 11:16 AM IST

ಕೇಂದ್ರ ಸರ್ಕಾರ 2025ರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉದ್ಯೋಗಿಗಳು ತಮ್ಮ ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆಗೆ ಅನುಗುಣವಾಗಿ ಐಚ್ಛಿಕ ರಜೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.


ನವದೆಹಲಿ: ಕೇಂದ್ರ ಸರ್ಕಾರ ಮುಂದಿನ ವರ್ಷದ ಅಂದ್ರೆ 2025ರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡು ವಿಧದ ರಜಾದಿನಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಗೆಜೆಟೆಡ್/ಕಡ್ಡಾಯ ಮತ್ತು ನಿರ್ಬಂಧಿತ ರಜೆ ಎಂದು ವಿಂಗಡನೆ ಮಾಡಲಾಗಿದೆ. ಈ ಎಲ್ಲಾ ರಜೆಗಳಲ್ಲಿ ಪ್ರಮುಖ ಧಾರ್ಮಿಕ ಹಬ್ಬ ಮತ್ತು ರಾಷ್ಟ್ರೀಯ ದಿನಗಳು ಸಹ ಸೇರಿವೆ. ಗೆಜೆಟೆಡ್ ರಜಾದಿನಗಳು ಕಡ್ಡಾಯವಾಗಿದ್ದು, ನಿರ್ಬಂಧಿತ ರಜೆಗಳು ಉದ್ಯೋಗಿಯ ಇಚ್ಛೆಯ ಮೇಲೆ ನಿರ್ಧರಿತವಾಗುತ್ತದೆ. ಈ ಎಲ್ಲಾ ವಿಧದ ರಜಾದಿನಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಿಂದ 2025ರ ರಜಾದಿನಗಳನ್ನು ತಿಳಿದುಕೊಂಡು ಭವಿಷ್ಯದ ಕಾರ್ಯಕ್ರಮಗಳನ್ನು ಮುಂಚಿತವಾಗಿ ಪ್ಲಾನ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ,. 17 ಗೆಜೆಟೆಡ್ ಮತ್ತು 34 ನಿರ್ಬಂಧಿತ ರಜೆಗಳು ಸೇರಿವೆ. ಕ್ಯಾಲೆಂಡರ್‌ನಲ್ಲಿ 17 ಗೆಜೆಟೆಡ್ ರಜಾದಿನಗಳನ್ನು ಕಡ್ಡಾಯ ಎಂದು ರಜೆ ತೋರಿಸಲಾಗಿರುತ್ತದೆ. 

Tap to resize

Latest Videos

undefined

ಗಜೆಟೆಡ್ ರಜಾದಿನಗಳ ಪಟ್ಟಿ

ದಿನಾಂಕ ರಜೆ ಕಾರಣ ವಾರ
ಜನವರಿ 26 ಗಣರಾಜ್ಯೋತ್ಸವ ಭಾನುವಾರ
ಫೆಬ್ರವರಿ 26 ಮಹಾ ಶಿವರಾತ್ರಿ  ಬುಧವಾರ
ಮಾರ್ಚ್ 14 ಹೋಳಿ ಶುಕ್ರವಾರ
ಮಾರ್ಚ್ 31 ಈದ್-ಉಲ್-ಫಿತರ್ ಸೋಮವಾರ
ಏಪ್ರಿಲ್ 10  ಮಹಾವೀರ ಜಯಂತಿ ಗುರುವಾರ
ಏಪ್ರಿಲ್ 18 ಗುಡ್ ಫ್ರೈಡೆ ಶುಕ್ರವಾರ
ಮೇ 12 ಬುದ್ಧ ಪೂರ್ಣಿಮ ಸೋಮವಾರ
ಜೂನ್ 7 ಬಕ್ರೀದ್ ಶನಿವಾರ
ಜುಲೈ 6 ಮೊಹರಂ ಭಾನುವಾರ
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಶುಕ್ರವಾರ
ಆಗಸ್ಟ್ 16 ಕೃಷ್ಣ ಜನ್ಮಾಷ್ಠಮಿ ಶನಿವಾರ
ಸೆಪ್ಟೆಂಬರ್ 5 ಮಿಲಾದ್-ಉನ್-ನಬಿ ಶುಕ್ರವಾರ
ಅಕ್ಟೋಬರ್ 2 ಗಾಂಧಿ ಜಯಂತಿ ಶುಕ್ರವಾರ
ಅಕ್ಟೋಬರ್ 2 ದಸರಾ ಶುಕ್ರವಾರ
ಅಕ್ಟೋಬರ್ 20 ದೀಪಾವಳಿ ಸೋಮವಾರ
ನವೆಂಬರ್ 5 ಗುರು ನಾನಕ್ ಜಯಂತಿ ಬುಧವಾರ
ಡಿಸೆಂಬರ್ 25 ಕ್ರಿಸ್ಮಸ್ ಗುರುವಾರ

ಇದನ್ನೂ ಓದಿ: ಬಿಎಸ್‌ಎನ್‌ಎಲ್‌ಗೆ ಗುನ್ನಾ ಕೊಟ್ಟ ಜಿಯೋ; 10 ರೂಪಾಯಿಗೂ ಕಡಿಮೆ ಬೆಲೆಯಲ್ಲಿ 2 ಬಿಗ್ ಆಫರ್ ಕೊಟ್ಟ ಅಂಬಾನಿ

ಐಚ್ಛಿಕ ರಜಾದಿನಗಳ ಪಟ್ಟಿ
ನಿಯಮಗಳ ಪ್ರಕಾರ ಪ್ರತಿ ಉದ್ಯೋಗಿಗೆ 12 ಐಚ್ಛಿಕ ರಜಾದಿನಗಳನ್ನು ನೀಡಲಾಗಿರುತ್ತದೆ. ಆದರೆ ಈ 12ರಲ್ಲಿ 3ನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿರುತ್ತದೆ. ಉದ್ಯೋಗಿಗಳುಉ ತಮ್ಮ ವೈಯಕ್ತಿಕ ಧಾರ್ಮಿಕ, ಸಾಂಸ್ಕೃತಿಕ ಮತ್ತು ಕುಟುಂಬಕ್ಕಾಗಿ ಈ ರಜೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದಸರಾಗೆ ಒಂದು ಹೆಚ್ಚುವರಿ ರಜೆಯನ್ನು ಸೇರಿಸಿಕೊಳ್ಳಬಹುದು. ಇನ್ನುಳಿದಂತೆ ಯಾವ   ಹಬ್ಬಕ್ಕೆ ಐಚ್ಛಿಕ ರಜೆ ನೀಡಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ. 

ದಿನಾಂಕ ರಜೆ ವಾರ
ಜನವರಿ 1 ಹೊಸ ವರ್ಷದ ಆಚರಣೆ ಬುಧವಾರ
ಜನವರಿ 6 ಗುರು ಗೋಬಿಂದ್ ಸಿಂಗ್ ಜಯಂತಿ ಸೋಮವಾರ
ಜನವರಿ 14 ಮಕರ ಸಂಕ್ರಾಂತಿ/ಪೊಂಗಲ್/ಮಾಘ ಬಿಹು ಮಂಗಳವಾರ
ಫೆಬ್ರವರಿ 2 ಬಸಂತ್ ಪಂಚಮಿ ಭಾನುವಾರ
ಫೆಬ್ರವರಿ 12 ಗುರುರವಿ ದಾಸ್ ಜಯಂತಿ ಬುಧವಾರ
ಫೆಬ್ರವರಿ 19 ಶಿವಾಜಿ ಜಯಂತಿ ಬುಧವಾರ
ಫೆಬ್ರವರಿ 23 ಸ್ವಾಮಿ ದಯಾನಂದ ಸರಸ್ವತಿ ಜಯಂತಿ  ಭಾನುವಾರ
ಮಾರ್ಚ್ 13 ಹೋಳಿ ದಹನ ದಿನ  ಗುರುವಾರ
ಮಾರ್ಚ್ 14 ಡೋಲ್‌ಯಾತ್ರ ಶುಕ್ರವಾರ
ಏಪ್ರಿಲ್ 16 ರಾಮ ನವಮಿ ಭಾನುವಾರ
ಆಗಸ್ಟ್ 15 ಜನ್ಮಾಷ್ಠಮಿ ಶುಕ್ರವಾರ
ಆಗಸ್ಟ್ 27 ಗಣೇಶ ಚತುರ್ಥಿ ಬುಧವಾರ
ಸೆಪ್ಟೆಂಬರ್ 5 ಓಣಂ ಬುಧವಾರ
ಸೆಪ್ಟೆಂಬರ್ 29 ದಸರಾ ಮಂಗಳವಾರ
ಅಕ್ಟೋಬರ್ 1 ದಸರಾ ಮಹಾನವಮಿ ಬುಧವಾರ
ಅಕ್ಟೋಬರ್ 7 ವಾಲ್ಮೀಕಿ ಜಯಂತಿ ಮಂಗಳವಾರ
ಅಕ್ಟೋಬರ್ 10 ಕರ್ವಾ ಚೌಥ್ ಶುಕ್ರವಾರ
ಅಕ್ಟೋಬರ್ 20 ನರಕ ಚತುರರ್ದಶಿ ಸೋಮವಾರ
ಅಕ್ಟೋಬರ್ 22 ಗೋವರ್ಧನ ಪೂಜೆ ಬುಧವಾರ
ಅಕ್ಟೋಬರ್ 23 ಭಾಯಿ ದುಜಾ ಗುರುವಾರ
ಅಕ್ಟೋಬರ್ 28  ಛತ್ ಪೂಜಾ ಮಂಗಳವಾರ
ನವೆಂಬರ್ 24 ಗುರು ತೇಜ್ ಬಹದ್ಧೂರ್ ಜಯಂತಿ ಸೋಮವಾರ
ಡಿಸೆಂಬರ್ 24 ಕ್ರಿಸ್ಮಸ್ ಸಂಜೆ  ಬುಧವಾರ 

ಇದನ್ನೂ ಓದಿ: 15 ಗ್ರಾಮೀಣ ಬ್ಯಾಂಕ್‌ ಮುಚ್ಚಲು ಮುಂದಾಯ್ತಾ ಸರ್ಕಾರ? ಇಲ್ಲಿ ನಿಮ್ಮ ಖಾತೆ ಇದೆಯಾ?

click me!