ನಿವೃತ್ತಿ ನಂತ್ರದ ಜೀವನ ಅನೇಕರಿಗೆ ಕಷ್ಟ. ನಾನಾ ಸಮಸ್ಯೆಗಳನ್ನು ಜನರು ಎದುರಿಸ್ತಾರೆ. ಆರೋಗ್ಯ, ಜೀವನ ನಿರ್ವಹಣೆ ದೊಡ್ಡ ಸವಾಲು. ಆ ದಿನಗಳು ಚೆನ್ನಾಗಿರಬೇಕೆಂದ್ರೆ ನೀವು ಈ ಯೋಜನೆಯಲ್ಲಿ ಹಣ ಹೂಡಬೇಕು.
ನಿವೃತ್ತಿ ನಂತ್ರ ಹಣದ ಅವಶ್ಯಕತೆ ಹೆಚ್ಚಿರುತ್ತದೆ. ಕೈನಲ್ಲಿ ಶಕ್ತಿ ಇದ್ದಾಗ ಮೂರು ಹೊತ್ತಿನ ಊಟದ ಜೊತೆ ಐಷಾರಾಮಿ ಜೀವನವನ್ನು ನಾವು ಬಯಸ್ತೇವೆ. ಬಟ್ಟೆ, ಮನೆ, ಮಕ್ಕಳ ಶಿಕ್ಷಣ, ಮದುವೆಗೆ ಹಣವನ್ನು ಖರ್ಚು ಮಾಡ್ತೇವೆಯೇ ವಿನಃ ಭವಿಷ್ಯದ ಬಗ್ಗೆ ಹೆಚ್ಚು ಆಲೋಚನೆ ಮಾಡೋದಿಲ್ಲ. ನಿವೃತ್ತಿ ವಯಸ್ಸಿನಲ್ಲಿ ಬದುಕಿದ್ರೆ ನಂತ್ರ ಆಲೋಚನೆ ಮಾಡಿದರೆ ಆಯ್ತು ಎನ್ನುವವರೂ ಇದ್ದಾರೆ. ಸಾವು ನಮ್ಮ ಕೈನಲ್ಲಿಲ್ಲ. ಆದ್ರೆ ನಿವೃತ್ತಿ ನಂತ್ರ ಆರಾಮದಾಯಕ ಜೀವನ ನಡೆಸುವ ಆಯ್ಕೆ ನಮ್ಮ ಕೈನಲ್ಲಿದೆ. ನಾವು ಆರಂಭದಿಂದಲೇ ನಿವೃತ್ತಿ ಬಗ್ಗೆ ಆಲೋಚನೆ ಮಾಡಿ, ಉಳಿತಾಯ ಶುರು ಮಾಡಿದ್ರೆ ಮುಂದೆ ಸಮಸ್ಯೆ ಆಗೋದಿಲ್ಲ. ಮಕ್ಕಳ ದುಡಿಮೆ ಹಣದಿಂದ ಬದುಕುವ ಇಲ್ಲವೆ ವೃದ್ಧಾಶ್ರಮದಲ್ಲಿ ಕಾಲ ಕಳೆಯುವ ಅವಶ್ಯಕತೆ ಬರೋದಿಲ್ಲ. ಜೀವನದ ಕೊನೆ ಘಟ್ಟ ಸುಖಕರ, ಸಂತೋಷದಿಂದ ಕಳೆಯಬೇಕು ಎಂದಾದ್ರೆ ಈಗ್ಲೇ ಗಳಿಕೆಯ ಒಂದು ಭಾಗವನ್ನು ಉಳಿತಾಯ ಮಾಡಬೇಕು. ಆದ್ರೆ ಅನೇಕರ ಸಮಯ ಮೀರಿದೆ. ಆರಂಭದಲ್ಲಿ ಉಳಿತಾಯ ಸಾಧ್ಯವಾಗಿಲ್ಲ ಎನ್ನುವವರಿದ್ದಾರೆ. ನೀವೂ ಹಿರಿಯ ನಾಗರಿಕರಾಗಿದ್ದು, ಈಗ ಉಳಿತಾಯ ಬಯಸಿದ್ರೆ ನಿಮಗೂ ಸಾಕಷ್ಟು ಆಯ್ಕೆ ಇದೆ. ಅದ್ರಲ್ಲಿ ಅಂಚೆ ಕಚೇರಿಯ ಹಿರಿಯ ನಾಗರಿಕ ಉಳಿತಾಯ ಯೋಜನೆ ಯೋಗ್ಯವಾಗಿದೆ.
ಹಿರಿಯ ನಾಗರಿಕರಿಗೆ (Senior Citizen) ವಿನ್ಯಾಸಗೊಳಿಸಿದ ಯೋಜನೆ ಇದಾಗಿದೆ. ನಿಮ್ಮ ವಯಸ್ಸು ಆರವತ್ತು ಅಥವಾ ಅದಕ್ಕಿಂತ ಹೆಚ್ಚಿದ್ದರೆ ನೀವು ಈ ಯೋಜನೆಯಲ್ಲಿ ಉಳಿತಾಯ (savings) ಮಾಡಬಹುದು. ಈ ಉಳಿತಾಯ ಯೋಜನೆಯಲ್ಲಿ ಹಣ (money) ಹೂಡಿಕೆ ಮಾಡಲು ನಿಮ್ಮ ಬಳಿ ಲಕ್ಷಾಂತರ ರೂಪಾಯಿ ಇರಬೇಕು ಎಂದೇನಿಲ್ಲ. 1000 ರೂಪಾಯಿಯಿಂದ ನೀವು ಯೋಜನೆ ಶುರು ಮಾಡಬಹುದು.
ವಿಟಮಿನ್ ಡಿ ಕೊರತೆಗೆ ಪರಿಹಾರ.. ಬರ್ತಿದೆ ನೀರಿನ ಇಂಜೆಕ್ಷನ್
ನೀವು VRS ತೆಗೆದುಕೊಂಡವರಾಗಿದ್ದರೆ ನಿಮಗೆ ವಿನಾಯಿತಿ ಇದೆ. ನಿಮ್ಮ 55ನೇ ವಯಸ್ಸಿನಲ್ಲೇ ನೀವು ಅಂಚೆ ಕಚೇರಿಯ ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಹಣ ಹೂಡಬಹುದು. ಸೇನಾ ಸಿಬ್ಬಂದಿಗೆ ಈ ಯೋಜನೆಯಲ್ಲಿ ಮತ್ತಷ್ಟು ರಿಯಾಯಿತಿ ನೀಡಲಾಗಿದೆ. 5 ವರ್ಷಗಳ ಸಡಿಲಿಕೆ ಇದ್ದು, 50ನೇ ವಯಸ್ಸಿನಿಂದ ಹೂಡಿಕೆ ಆರಂಭಿಸಬಹುದು.
ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಸರ್ಕಾರಿ ಯೋಜನೆ. ಹಾಗಾಗಿ ಇಲ್ಲಿ ಯಾವುದೇ ಭಯವಿಲ್ಲ. ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಈ ಯೋಜನೆಯಲ್ಲಿ ಬಡ್ಡಿದರವನ್ನು ಸರ್ಕಾರ ನಿರ್ಧರಿಸುತ್ತದೆ. ಸದ್ಯ ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಶೇಕಡಾ 8.2ರ ದರದಲ್ಲಿ ಬಡ್ಡಿ ಸಿಗ್ತಿದೆ. ಈ ಬಡ್ಡಿ ಎಫ್ ಡಿಯಲ್ಲಿ ಸಿಗುವ ಬಡ್ಡಿಗಿಂತ ಹೆಚ್ಚಿದೆ. ನೀವು ಎಷ್ಟು ಹಣವನ್ನು ಹೂಡಿಕೆ ಮಾಡುತ್ತೀರಿ ಎಂಬ ಆಧಾರದ ಮೇಲೆ ನಿಮಗೆ ಬಡ್ಡಿ ಸಿಗುತ್ತದೆ. ನೀವು ಗರಿಷ್ಠ 30 ಲಕ್ಷ ರೂಪಾಯಿವರೆಗೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
2ನೇ ಬಾರಿ ಕ್ಯಾನ್ಸರ್ ತಡೆಗೆ ಟಾಟಾ ಇನ್‌ಸ್ಟಿಟ್ಯೂಟ್‌ನಿಂದ 100 ರೂಪಾಯಿಯ ಮಾತ್ರೆ
ತಿಂಗಳಿಗೆ ನಿಮಗೆ ಸಿಗುತ್ತೆ ಇಷ್ಟು ಹಣ : ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಒಟ್ಟಾಗಿ 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ವಾರ್ಷಿಕ 2.46 ಲಕ್ಷ ರೂಪಾಯಿ ಸಿಗುತ್ತದೆ . ನೀವು ತಿಂಗಳ ಲೆಕ್ಕದಲ್ಲಿ ಲೆಕ್ಕಾಚಾರ ಮಾಡಿದ್ರೆ ನಿಮಗೆ ತಿಂಗಳಿಗೆ 20,000 ರೂಪಾಯಿ ಸಿಗುತ್ತದೆ. ನೀವು ಹಣವನ್ನು ತ್ರೈಮಾಸಿಕವಾಗಿ ಕೂಡ ತೆಗೆದುಕೊಳ್ಳಬಹುದು. ಆಗ ನಿಮಗೆ 61,500 ರೂಪಾಯಿ ಸಿಗುತ್ತದೆ. ಒಂದ್ವೇಳೆ ನೀವು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಪ್ರತಿ ತ್ರೈಮಾಸಿಕದಲ್ಲಿ 10,250 ರೂಪಾಯಿ ಪಡೆಯಬಹುದು. ನಿಮಗೆ ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಕೂಡ ಲಭ್ಯವಿದೆ. ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ತೆರಿಗೆ ವಿನಾಯಿತಿ ಸಿಗುತ್ತದೆ.