
ನವದೆಹಲಿ : ‘ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್ಟಿ ಕಡಿತದ ಬಗ್ಗೆ ಯೋಚಿಸುವಂತೆ ಮೊದಲು ಹೇಳಿದ್ದರು. ಆ ಬಳಿಕ ಒಮ್ಮೆ ಬಜೆಟ್ ತಯಾರಿ ಸಂದರ್ಭದಲ್ಲಿ ಈ ಬಗ್ಗೆ ಜ್ಞಾಪಿಸಿದ್ದರು. ಅಂದಿನಿಂದಲೇ ಜಿಎಸ್ಟಿ ಕಡಿತಕ್ಕೆ ಚಿಂತನೆ ಆರಂಭಿಸಿದ್ದೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್ಟಿ 2.0 ತಯಾರಿ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ಜಿಎಸ್ಟಿ ಸರಳೀಕರಣದ ಹಂತಗಳು ಹೇಗೆ ಆರಂಭವಾದವು ಹಾಗೂ ಜಿಎಸ್ಟಿ ಸರಳೀಕರಣಕ್ಕೆ ನಾಂದಿ ಹಾಡಿದ್ದೇ ಮೋದಿ’ ಎಂಬ ಅಂಶ ಬಹಿರಂಗಪಡಿಸಿದರು.‘ರಾಜಸ್ಥಾನದ ಜೈಸಲ್ಮೇರ್‌ನಲ್ಲಿ 2024ರ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಕೊನೆಯ ಜಿಎಸ್ಟಿ ಕೌನ್ಸಿಲ್ ಸಭೆಗೂ ನರೇಂದ್ರ ಮೋದಿ ಒಮ್ಮೆ ಕರೆ ಮಾಡಿದ್ದರು.
‘ಏಕ್ ಬಾರ್ ಆಪ್ ಜಿಎಸ್ಟಿ ದೇಖ್ ಲೋ’ ಎಂದಿದ್ದರು. ‘ಜಿಎಸ್ಟಿ ಕಡಿತದ ಬಗ್ಗೆ ಒಮ್ಮೆ ಯೋಚಿಸಿ. ಅದರ ದರದ ಬಗ್ಗೆ ಯಾಕಿಷ್ಟು ಗೊಂದಲ? ವ್ಯವಹಾರಕ್ಕೆ ಸರಳ ರೀತಿಯಲ್ಲಿ ಅದನ್ನು ಬದಲಿಸಿ’ ಎಂದೂ ತಿಳಿಸಿದಿದ್ದರು. ಆ ಬಳಿಕ ಬಜೆಟ್‌ಗೂ ಮುನ್ನ ಸಭೆಯ ಸಂದರ್ಭದಲ್ಲಿಯೂ ಮೋದಿ ಮತ್ತೊಮ್ಮೆ ನನಗೆ ನೆನಪಿಸಿದ್ದರು. ‘ಅದರ (ಜಿಎಸ್ಸಿ) ಕುರಿತು ಕೆಲಸ ಮಾಡುತ್ತಿದ್ದೀರಾ?’ ಎಂದು ಕೇಳಿದ್ದರು. ಆಗಿನಿಮದಲೇ ನಾನು ಜಿಎಸ್ಟಿ ಸರಳೀಕರಣ ಸಿದ್ಧತೆ ಆರಂಭಿಸಿದ್ದೆ’ ಎಂದರು.
ಮೋದಿಗೆ ಸನ್ಮಾನ:
ಭಾನುವಾರ ನಡೆದ ಬಿಜೆಪಿ ಕಾರ್ಯಾಗಾರದಲ್ಲಿ ಜಿಎಸ್ಟಿ ಸುಧಾರಣೆಗಾಗಿ ಮೋದಿ ಅವರನ್ನು ಸನ್ಮಾನಿಸಲಾಯಿತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.