ವಿಮಾನ ಇಂಧ​ನಕ್ಕಿಂತ ಪೆಟ್ರೋಲ್‌ ಬೆಲೆ ದುಬಾ​ರಿ!

Published : Oct 18, 2021, 08:36 AM ISTUpdated : Oct 18, 2021, 08:52 AM IST
ವಿಮಾನ ಇಂಧ​ನಕ್ಕಿಂತ ಪೆಟ್ರೋಲ್‌ ಬೆಲೆ ದುಬಾ​ರಿ!

ಸಾರಾಂಶ

* ಎಟಿಎಫ್‌ಗೆ 79 ರೂ, ಪೆಟ್ರೋಲ್‌ಗೆ 110 ರೂ. * ವೈಮಾ​ನಿಕ ಇಂಧ​ನ​ಕ್ಕಿಂತ ಪೆಟ್ರೋಲ್‌ ಶೇ.33 ತುಟ್ಟಿ * ವಿಮಾನ ಇಂಧ​ನಕ್ಕಿಂತ ಪೆಟ್ರೋಲ್‌ ಬೆಲೆ ದುಬಾ​ರಿ! * ಮತ್ತೆ ಪೆಟ್ರೋಲ್‌, ಡೀಸೆಲ್‌ ದರ 35 ಪೈಸೆ ಏರಿ​ಕೆ

ನವದೆಹಲಿ(ಅ.18): ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್‌(Petrol) ಮತ್ತು ಡೀಸೆಲ್‌(Diesel) ದರವನ್ನು ಭಾನು​ವಾರ ತಲಾ 35 ಪೈಸೆಯಷ್ಟು ಏರಿಕೆ ಮಾಡಿವೆ. ತನ್ಮೂಲಕ ವಿಮಾನಗಳ(Flight) ಇಂಧ​ನ​ವಾದ ಏವಿಯೇಷನ್‌ ಟರ್ಬೈನ್‌ ಇಂಧನ (Aviation Turbine Fuel) ಕ್ಕಿಂತಲೂ ಕಾರು ಮತ್ತು ದ್ವಿಚಕ್ರ ವಾಹನ ಸವಾರರು ಪೆಟ್ರೋಲ್‌ಗೆ ಶೇ.33ರಷ್ಟು ಹೆಚ್ಚು ದರ ತೆರಬೇಕಾದ ಅನಿವಾರ್ಯತೆ ಎದುರಾಗಿದೆ.

ವಿಮಾನದ ಇಂಧನ ಎಟಿಎಫ್‌ಗೆ(ATF) ಒಂದು ಲೀಟ​ರ್‌ಗೆ 79 ರು. ಇದ್ದರೆ, ದೇಶಾದ್ಯಂತ ಪೆಟ್ರೋಲ್‌ ದರ 110 ರು. ಆಸುಪಾಸಿನಲ್ಲಿದೆ. ಅಂದರೆ ಪೆಟ್ರೋಲ್‌ ದರವು ವೈಮಾ​ನಿಕ ಇಂಧ​ನ​ಕ್ಕಿಂತತ ಶೇ.33ರಷ್ಟು ಹೆಚ್ಚು ದುಬಾ​ರಿ.

ಕಳೆದ 4 ದಿನಗಳಿಂದ ಇಂಧನ ದರ ಏರಿಕೆ ಪರ್ವ ಮುಂದುವರಿದಿದ್ದು, ಈ 4 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ 1.40 ರು. ಏರಿಕೆಯಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 109.53 ರು. ಮತ್ತು ಡೀಸೆಲ್‌ ದರ 100.37 ರು.ಗೆ ತಲುಪಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್‌ಗೆ 105.84 ರು. ಮತ್ತು ಡೀಸೆಲ್‌ಗೆ 94.57 ರು. ಹಾಗೂ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್‌ 111.77 ರು. ಮತ್ತು ಡೀಸೆಲ್‌ 102.52 ರು.ಗೆ ಜಿಗಿದಿದೆ.

ಇನ್ನು ದೇಶ​ದಲ್ಲೇ ಅತಿ ದುಬಾರಿ ದರ ರಾಜಸ್ಥಾನದ ಗಂಗಾನಗರದಲ್ಲಿದೆ. ಇಲ್ಲಿ ಪೆಟ್ರೋಲ್‌ 117.86 ರು. ಮತ್ತು ಡೀಸೆಲ್‌ಗೆ 105.95 ರು. ಇದೆ.

ಚುನಾವಣೆ ಬಳಿಕ ಪೆಟ್ರೋಲ್‌ ಬೆಲೆ ಇಳಿಕೆ?

ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚುನಾವಣೆ ಬಳಿಕ ಆರ್ಥಿಕ ಇಲಾಖೆ ಸಭೆ ನಡೆಸಲಾಗುವುದು. ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿದ್ದರೆ ತೈಲ ಬೆಲೆ ಇಳಿಕೆಗೆ ಅವಕಾಶ ಇದ್ದೇ ಇರುತ್ತದೆ ಎಂದು ಹೇಳಿದರು. ವಿವರ ಪುಟ 6

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬೆಳ್ಳಿ ಬೆಲೆ ಏರಿಕೆಯ ನಾಗಲೋಟ : ಚಿನ್ನದ ಬೆಲೆಯಲ್ಲಿಯೂ ಭಾರಿ ಹೆಚ್ಚಳ
ಭಾರತ - ಇಯು ನಡುವೆ ಶೀಘ್ರವೇ ಮದರ್‌ ಆಫ್‌ ಆಲ್‌ ಡೀಲ್‌