
ಬೆಂಗಳೂರು (ಜು.28) ಡಿಜಿಟಲ್ ಇಂಡಿಯಾದಲ್ಲಿ ಪ್ರತಿ ದಿನ ವಹಿವಾಟುಗಳು ಡಿಜಿಟಲ್ ಮೂಲಕವೇ ಹೆಚ್ಚಾಗಿ ನಡೆಯುತ್ತಿದೆ. ಕಚೇರಿಗೆ ತೆರಳುವುದು, ಕಾಫಿ, ಊಟ, ದಿನಸಿ ಖರೀದಿ ಸೇರಿದಂತೆ ಎಲ್ಲಾ ಖರೀದಿಗಳು, ಪಾವತಿಗಳು ಯುಪಿಎ ಮೂಲಕವೇ ಹೆಚ್ಚಾಗಿ ನಡೆಯುತ್ತಿದೆ. ಯುಪಿಐ ಮೂಲಕ ಪಾವತಿಯಲ್ಲಿ ಗ್ರಾಹಕರು ಹೆಚ್ಚಿನ ಸಮಯ ವ್ಯರ್ಥ ಮಾಡದಂತೆ ಪೇಟಿಎಂ ಹೊಸ ಫೀಚರ್ ನೀಡಿದೆ. ಪಾವತಿಗಳು, ಹಣ ಸ್ವೀತಿ ವೇಗವಾಗಿ ಮತ್ತು ಸುಲಭವಾಗಿಸಲು Paytm ತನ್ನ Home Screen Widgets ( ಹೋಮ್ ಸ್ಕ್ರೀನ್ ವಿಡ್‌ಜೆಟ್) ಪರಿಚಯಿಸಿದೆ.
Scan & Pay Widget ( ಸ್ಕ್ಯಾನ್ ಆ್ಯಂಡ್ ಪೇ) ಹಾಗೂ Receive Money Widget ( ರಿಸೀವ್ ಮನಿ ವಿಡ್‌ಜೆಟ್) ಮೂಲಕ ಈಗ ಬಳಕೆದಾರರು ಆಪ್ ತೆರೆಯದೇ ನೇರವಾಗಿ ಹೋಮ್ ಸ್ಕ್ರೀನ್‌ನಿಂದಲೇ ಪಾವತಿಗಳನ್ನು ಮಾಡಬಹುದು ಮತ್ತು ಹಣ ಸ್ವೀಕರಿಸಬಹುದು. ಈ ಹಿಂದೆ ಪ್ರಮುಖ ಪ್ರಶ್ನೆ ಎಂದರೆ ಪಾವತಿ ಯಶಸ್ವಿಯಾಗುತ್ತದೆಯೇ ಎಂಬುದಾಗಿತ್ತು. ಈಗ ಬಹುತೇಕ ಎಲ್ಲಾ UPI ಆಪ್‌ಗಳು ಪಾವತಿಯನ್ನು ಮಾಡುತ್ತವೆ. ಆದರೆ ಬಳಕೆದಾರರಿಗೆ ಪಾವತಿ ಪೇಜ್‌ಗೆ ಎಷ್ಟು ಬೇಗ ತಲುಪಬಹುದು ಎಂಬುದೇ ಮುಖ್ಯ ವ್ಯತ್ಯಾಸವಾಗಿದೆ.
ಈ ಬದಲಾವಣೆ ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ ಹಾಗೂ ಶಿವಮೊಗ್ಗದಲ್ಲಿಯೂ ಕಂಡುಬರುತ್ತಿದೆ. ದಿನಸಿ ಅಂಗಡಿಗಳು, ಪೆಟ್ರೋಲ್ ಬಂಕ್‌ಗಳು, ಕಾಫಿ ಅಂಗಡಿಗಳು, ಔಷಧ ಅಂಗಡಿಗಳು ಹಾಗೂ ವಿವಿಧ ವ್ಯಾಪಾರಸ್ಥರು Paytm ಮೂಲಕ ನಿಯಮಿತವಾಗಿ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುತ್ತಿದ್ದಾರೆ.
ಪ್ರತಿ ಬಾರಿ ಮೊಬೈಲ್ ಅನ್ಲಾಕ್ ಮಾಡಿ, ಆಪ್ ತೆರೆಯುವುದು ಹಾಗೂ QR ಸ್ಕ್ಯಾನರ್‌ಗೆ ಹೋಗುವುದು ಕೆಲವೇ ಕ್ಷಣಗಳ ಕೆಲಸವಾಗಿದ್ದರೂ, ದಿನದಲ್ಲಿ ಅನೇಕ ಬಾರಿ ಪಾವತಿ ಮಾಡುವವರಿಗೆ ಈ ಸಮಯ ಸೇರುತ್ತಾ ಹೋಗುತ್ತದೆ. Scan & Pay Widge ಒಂದೇ ಟ್ಯಾಪ್‌ನಲ್ಲೇ QR ಸ್ಕ್ಯಾನರ್ ತೆರೆಯುತ್ತದೆ. Receive Money Widget ಮೂಲಕ ವ್ಯಾಪಾರಿಗಳು ತಮ್ಮ Paytm QR ಕೋಡ್ ನೇರವಾಗಿ ಮೊಬೈಲ್ ಹೋಮ್ ಸ್ಕ್ರೀನ್‌ನಲ್ಲೇ ಪ್ರದರ್ಶಿಸಬಹುದು.
ಇದರ ಜೊತೆ ಇತರ ಕೆಲ ಫೀಚರ್‌ನ್ನು ಪೇಟಿಎಂ ನೀಡುತ್ತಿದೆ. ತಿಂಗಳ ಸಮ್ಮರಿ(ಎಐ ಆಧಾರಿತ), ಹೈಡ್ ಪೇಮೆಂಟ್, ಟೋಟಲ್ ಬ್ಯಾಲೆನ್ಸ್, ಕಾಲ್ಕುಲೇಟರ್, ಯುಪಿಐ ಸ್ಟೇಟ್‌ಮೆಂಟ್ ಡೌನ್ಲೋಡ್ ಸೇರಿದಂತೆ ಹಲವು ಟ್ರಾನ್ಸಾಕ್ಷನ್ ಸೌಲಭ್ಯ ನೀಡುತ್ತಿದೆ. ಜನರು ಇಂದು ಪ್ರಯಾಣ, ಶಾಪಿಂಗ್, ಆಹಾರ, ಬಿಲ್ ಪಾವತಿ ಹಾಗೂ ದೈನಂದಿನ ಖರೀದಿಗಳಿಗಾಗಿ ದಿನದ ಹಲವು ಸಮಯಗಳಲ್ಲಿ Paytm ಅನ್ನು ಬಳಸುತ್ತಿದ್ದಾರೆ. ನಮ್ಮ Home Screen Widgets ಮೂಲಕ Scan, Pay ಮತ್ತು Receive Money ಮಾಡಲು ಬೇಕಾಗುವ ಹಂತಗಳನ್ನು ಕಡಿಮೆ ಮಾಡಿದ್ದೇವೆ ಎಂದು ಪೇಟಿಎಂ ಹೇಳಿದೆ.
ಕರ್ನಾಟಕದಲ್ಲಿ ಮೊಬೈಲ್ ಪಾವತಿಗಳ ಬಳಕೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಡಿಜಿಟಲ್ ಪಾವತಿ ಆಪ್‌ಗಳ ನಡುವಿನ ಸ್ಪರ್ಧೆ ಈಗ ಕೇವಲ ವ್ಯವಹಾರ ಪೂರ್ಣಗೊಳಿಸುವುದರಲ್ಲ, ಅದನ್ನು ಎಷ್ಟು ವೇಗವಾಗಿ ಮತ್ತು ಸುಲಭವಾಗಿ ಮಾಡಬಹುದು ಎಂಬುದರತ್ತ ಹೆಚ್ಚು ಗಮನ ಹರಿಸುತ್ತಿದೆ. Paytm Home Screen Widgets ಈ ಅಗತ್ಯವನ್ನು ಪೂರೈಸುವ ಮತ್ತೊಂದು ಪ್ರಯತ್ನವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.