Parle-G: ಪ್ರತಿ ಮನೆಯ ನೆಚ್ಚಿನ ಪಾರ್ಲೆ ಜಿಗೆ 95 ವರ್ಷಗಳ ಸಂಭ್ರಮ, ಹೊಸ ದಾಖಲೆ ಬರೆದ ಕಂಪನಿ

Published : Jul 29, 2026, 12:19 PM IST
Parle G

ಸಾರಾಂಶ

ಭಾರತದ ಪ್ರತಿ ಮನೆಯಲ್ಲೂ ಪರಿಚಿತವಾಗಿರುವ ಪಾರ್ಲೆ-ಜಿ ಬಿಸ್ಕತ್ ತಯಾರಿಸುವ ಪಾರ್ಲೆ ಪ್ರೊಡಕ್ಟ್ಸ್ ಸಂಸ್ಥೆ ತನ್ನ ಯಶಸ್ವಿ ಪಯಣದ 95 ವರ್ಷಗಳನ್ನು ಪೂರ್ಣಗೊಳಿಸಿದೆ. ಈ ಸಂಭ್ರಮದ ಜೊತೆಗೆ ಕಂಪನಿ ಮತ್ತೊಂದು ಮಹತ್ವದ ಸಾಧನೆಯನ್ನೂ ದಾಖಲಿಸಿದೆ.

ಪಾರ್ಲೆ ಜಿ ಬಿಸ್ಕತ್‌ ಇಂದಿಗೂ ಅನೇಕರ ಫೆವರೆಟ್.‌ ಟೀ ಜೊತೆ ಬಿಸ್ಕತ್‌ ಬೇಕೇಬೇಕು. ಪಾರ್ಲೆ ಜಿ ತನ್ನ ಗುಣಮಟ್ಟದಿಂದ ಲಕ್ಷಾಂತರ ಜನರ ಮನಸ್ಸು ಗೆದ್ದಿದೆ. ಪಾರ್ಲೆ ಜಿ ಬಿಸ್ಕತ್‌ ಕಂಪನಿ ಪಾರ್ಲೆ ಪ್ರೊಡಕ್ಟ್‌ ಸಂಸ್ಥೆ ಈಗ ಯಶಸ್ವಿ 95 ವರ್ಷಗಳನ್ನು ಪೂರೈಸಿದೆ. ಕಂಪನಿಯ ಹಲವು ಜನಪ್ರಿಯ ಬ್ರ್ಯಾಂಡ್ಗಳು ವರ್ಷಕ್ಕೆ 1,000 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸುವ ಕ್ಲಬ್ಗೆ ಸೇರ್ಪಡೆಯಾಗಿವೆ. ಅವುಗಳಲ್ಲಿ ಪಾರ್ಲೆ-ಜಿ, ಹೈಡ್ ಅಂಡ್ ಸೀಕ್, ಮೊನಾಕೊ ಮತ್ತು ಮೆಲೋಡಿ ಪ್ರಮುಖವಾಗಿವೆ.

ಪಾರ್ಲೆ ಜಿ ದಾಖಲೆ

ಇವುಗಳಲ್ಲಿ ಪಾರ್ಲೆ-ಜಿ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಬಿಸ್ಕತ್ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬ್ರ್ಯಾಂಡ್ನ ವಾರ್ಷಿಕ ಆದಾಯವೇ 17,000 ಕೋಟಿ ರೂಪಾಯಿಗೂ ಹೆಚ್ಚು ಎಂದು ಕಂಪನಿ ತಿಳಿಸಿದೆ. ಕಂಪನಿಯ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮಯಂಕ್ ಶಾ ಅವರ ಪ್ರಕಾರ, ಕಾಲಕ್ಕೆ ತಕ್ಕಂತೆ ಪ್ಯಾಕೇಜಿಂಗ್, ಜಾಹೀರಾತು ಮತ್ತು ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದರಿಂದಲೇ ಪಾರ್ಲೆ ಹಲವು ತಲೆಮಾರಿನ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದಿದ್ದಾರೆ.

2024–25ನೇ ಹಣಕಾಸು ವರ್ಷದಲ್ಲಿ ಪಾರ್ಲೆ ಪ್ರೊಡಕ್ಟ್ಸ್ ಸುಮಾರು 15,570 ಕೋಟಿ ರೂಪಾಯಿ ಆದಾಯ ಗಳಿಸಿತ್ತು. 980 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿತ್ತು. ಎಫ್ಎಂಸಿಜಿ ಕ್ಷೇತ್ರದಲ್ಲಿ ಬ್ರಿಟಾನಿಯಾ ಸೇರಿದಂತೆ ದೊಡ್ಡ ಕಂಪನಿಗಳಿಗೆ ಪಾರ್ಲೆ ಪ್ರಬಲ ಪೈಪೋಟಿ ನೀಡುತ್ತಿದೆ.

ಇದರ ಜೊತೆಗೆ, 1929ರಲ್ಲಿ ಆರಂಭವಾದ ಈ ಕುಟುಂಬ ಆಧಾರಿತ ಕಂಪನಿ ಈಗ ಷೇರು ಮಾರುಕಟ್ಟೆಗೆ ಪ್ರವೇಶಿಸುವ ಪ್ಲಾನ್ ರೂಪಿಸಿದೆ. ಸುಮಾರು 1 ಬಿಲಿಯನ್ ಡಾಲರ್ ಮೌಲ್ಯದ ಐಪಿಒ ತರಲು ಕಂಪನಿ ಸಿದ್ಧತೆ ನಡೆಸುತ್ತಿದೆ. ಈ ಮೂಲಕ ಕಂಪನಿಯ ಮೌಲ್ಯ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಐಪಿಒ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬೆಂಗಳೂರಿನಿಂದ 10 ಗಂಟೆ ದೂರದಲ್ಲಿಯೇ ಸಿಗುತ್ತವೆ ಅತ್ಯಂತ ಕಡಿಮೆ ಬೆಲೆಗೆ ಮುತ್ತುಗಳು
Googleನ ಗಂಟೆಯ ಸಂಪಾದನೆ ಗೊತ್ತಾ? ಎಷ್ಟು ಸೆಕೆಂಡ್‌ಗೆ ಒಂದು ಕೋಟಿ ಹಣ ಗಳಿಸುತ್ತೆ?