
ನವದೆಹಲಿ[ಡಿ.26]: ಟರ್ಕಿ ಮತ್ತು ಈಜಿಪ್ಟ್ ದೇಶಗಳಿಂದ ಈರುಳ್ಳಿ ಆಮದಾಗುತ್ತಲೇ, ದೇಶೀಯ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದ್ದ ಈರುಳ್ಳಿ ಬೆಲೆ ಮತ್ತೆ ಏರಿಕೆಯಾಗುವ ಭೀತಿ ಕಾಡಿದೆ. ಕಾರಣ, ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಭಾರೀ ಪ್ರಮಾಣದಲ್ಲಿ ಈರುಳ್ಳಿ ರಫ್ತು ಮಾಡಿದ್ದು ಟರ್ಕಿ ದೇಶೀಯ ಮಾರುಕಟ್ಟೆಗೆ ಭಾರೀ ಹೊಡೆತ ನೀಡಿದ್ದು, ಅಲ್ಲಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿದೆ.
ಹೀಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವಿದೇಶಗಳಿಗೆ ಈರುಳ್ಳಿ ರಫ್ತು ಮಾಡುವುದರ ಮೇಲೆ ಟರ್ಕಿ ಸರ್ಕಾರ ನಿಷೇಧ ಹೇರಿದೆ. ಹೀಗಾಗಿ ಇಳಿಕೆಯ ಹಾದಿ ಕಂಡಿದ್ದ ಈರುಳ್ಳಿ ಬೆಲೆ ಮತ್ತೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಸಕ್ತ ವರ್ಷ ಭಾರೀ ಪ್ರವಾಹದಿಂದ ಬೆಳೆ ನಾಶವಾದ ಕಾರಣ ಮತ್ತು ಬಿತ್ತನೆಯೇ ಕಡಿಮೆ ಇದ್ದ ಕಾರಣ ದೇಶೀಯ ಉತ್ಪಾದನೆಯ ಕಡಿಮೆಯಾಗಿದೆ ಭಾರತದಲ್ಲಿ ಈರುಳ್ಳಿ ಬೆಲೆ ಕೆಜಿಗೆ 200 ರು.ವರೆಗೂ ತಲುಪಿತ್ತು. ಹೀಗಾಗಿ ಸರ್ಕಾರ ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ವಿವಿಧ ದೇಶಗಳಿಂದ 7070 ಟನ್ ಈರುಳ್ಳಿ ಆಮದು ಮಾಡಿಕೊಂಡು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಪೈಕಿ ಶೇ.50ರಷ್ಟುಪಾಲು ಟರ್ಕಿಯದ್ದಾಗಿತ್ತು.
ಭಾರತದಲ್ಲಿ ಪ್ರತಿ ವರ್ಷ 2.35 ಕೋಟಿ ಟನ್‌ಗಳಷ್ಟುಈರುಳ್ಳಿ ಬೆಳೆಯಲಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.