ಚೀನಾ ಹಿಂದಿಕ್ಕಿದ ಅಮೆರಿಕ ಇದೀಗ ಭಾರತದ ನಂ.1 ವ್ಯಾಪಾರ ಪಾಲುದಾರ

Published : May 30, 2022, 06:13 AM IST
ಚೀನಾ ಹಿಂದಿಕ್ಕಿದ ಅಮೆರಿಕ ಇದೀಗ ಭಾರತದ ನಂ.1 ವ್ಯಾಪಾರ ಪಾಲುದಾರ

ಸಾರಾಂಶ

* 2021-22ರಲ್ಲಿ ಉಭಯ ದೇಶಗಳ ನಡುವೆ 9.07 ಲಕ್ಷ ಕೋಟಿ ರು. ವಹಿವಾಟು * ಚೀನಾ ಹಿಂದಿಕ್ಕಿದ ಅಮೆರಿಕ ಇದೀಗ ಭಾರತದ ನಂ.1 ವ್ಯಾಪಾರ ಪಾಲುದಾರ

ನವದೆಹಲಿ(ಮೇ.30): ಚೀನಾವನ್ನು ಹಿಂದಿಕ್ಕಿರುವ ಅಮೆರಿಕ, 2021-22ನೇ ಸಾಲಿನಲ್ಲಿ ಭಾರತದ ನಂ.1 ವ್ಯಾಪಾರ ಪಾಲುದಾರ ದೇಶವಾಗಿ ಹೊಮ್ಮಿದೆ. ಇದು ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಸಂಬಂಧದ ಪ್ರತೀಕ ಎಂದು ಬಣ್ಣಿಸಲಾಗಿದೆ.

ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಅನ್ವಯ, 2020-21ರಲ್ಲಿ ಉಭಯ ದೇಶಗಳ ನಡುವೆ 6.61 ಲಕ್ಷ ಕೋಟಿ ರು.ವ್ಯಾಪಾರ ನಡೆದಿದ್ದರೆ, ಅದು 2021-22ರಲ್ಲಿ 9.07 ಲಕ್ಷ ಕೋಟಿ ರು.ಗೆ ತಲುಪಿದೆ. ಇನ್ನು ಇದೇ ಅವಧಿಯಲ್ಲಿ ಅಮೆರಿಕಕ್ಕೆ ಭಾರತದ ರಫ್ತು 5.78 ಲಕ್ಷ ಕೋಟಿ ರು.ಗೆ (2020-21ರಲ್ಲಿ 3.92 ಲಕ್ಷ ಕೋಟಿ ರು.) ಮತ್ತು ಆಮದು ಪ್ರಮಾಣ 3.29 ಲಕ್ಷ ಕೋಟಿ ರು.ಗೆ ತಲುಪಿದೆ (2020-21ರಲ್ಲಿ 2.20 ಲಕ್ಷ ಕೋಟಿ ರು.).

ಮತ್ತೊಂದೆಡೆ ಇದೇ ಅವಧಿಯಲ್ಲಿ ಭಾರತ ಮತ್ತು ಚೀನಾ ನಡುವಿನ ವಹಿವಾಟು 8.77 ಲಕ್ಷ ಕೋಟಿ ರು.ಗೆ (2020-21ರಲ್ಲಿ 6.55 ಲಕ್ಷ ಕೋಟಿ ರು.) ಗೆ ತಲುಪಿದೆ. ಚೀನಾಕ್ಕೆ ರಫ್ತಿನ ಪ್ರಮಾಣ 1.61 ಲಕ್ಷ ಕೋಟಿ ರು.ಗೆ (2020-21ರಲ್ಲಿ 1.60 ಲಕ್ಷ ಕೋಟಿ ರು.) ತಲುಪಿದ್ದರೆ, ಆಮದು 7.15 ಲಕ್ಷ ಕೋಟಿ ರು.ಗೆ (2020-21ರಲ್ಲಿ 4.95 ಲಕ್ಷ ಕೋಟಿ ರು.ಗೆ) ತಲುಪಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌