ಮತ್ತೊಂದು ಭರ್ಜರಿ ಆಫರ್ ಪ್ರಕಟಿಸಿದ ಕೇಂದ್ರ ಸರ್ಕಾರ| ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರದಿಂದ ಸಿಹಿ ಸುದ್ದಿ| ಖಾಸಗಿ ವಿಮಾನಯಾನ ಸಂಸ್ಥೆಯಲ್ಲೂ ಪ್ರಯಾಣಿಸುವ ಅವಕಾಶ| ಈಶಾನ್ಯ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ನೌಕರರಿಗೆ ಅನ್ವಯ| 7ನೇ ವೇತನ ಅಯೋಗದ ಶಿಫಾರಸ್ಸು|
ನವದೆಹಲಿ(ಫೆ.13): ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಬಂಪರ್ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ನೌಕರರ ವಿಮಾನ ಪ್ರಯಾಣದ ಈ ಹಿಂದಿನ ನಿಯಮಾವಳಿ ಬದಲಾಯಿಸಿದೆ.
ನೌಕರರ ಎಲ್ ಟಿಸಿ ಪ್ರಯೋಜನಗಳಲ್ಲಿ ಕೆಲವು ಬದಲಾವಣೆ ತಂದಿರುವ ಕೇಂದ್ರ ಸರ್ಕಾರ, ಈಶಾನ್ಯ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು ಇನ್ಮುಂದೆ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲೂ ಪ್ರಯಾಣಿಸುವ ಅವಕಾಶ ಒದಗಿಸಿದೆ.
ಈ ಹಿಂದೆ ಈ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರ ಸರ್ಕಾರಿ ನೌಕರರು, ಕೇವಲ ಏರ್ ಇಂಡಿಯಾ ವಿಮಾನಗಳಲ್ಲಷ್ಟೇ ಪ್ರಯಾಣಿಸಲು ಅವಕಾಶ ಇತ್ತು. ಆದರೆ ಈ ನಿಯಮವನ್ನು ಸಡಿಸಿಲಿ ಯಾವುದೇ ಖಾಸಗಿ ವಿಮಾನಯಾನ ಸಮಸ್ಥೆಯಲ್ಲೂ ಪ್ರಯಾಣಿಸುವ ಅವಕಾಶ ಒದಗಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಡಾ. ಜೀತೆಂದ್ರ ಸಿಂಗ್, ಕೇಂದ್ರ ಸರ್ಕಾರಿ ನೌಕರರು ಶೀಘ್ರವಾಗಿ ತಮ್ಮ ಕುಟುಂಬವನ್ನು ಕೂಡಿಕೊಳ್ಳಲು ಅನುವು ಮಾಡಿಕೊಡಲು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಈ ಯೋಜನೆ ಜಾರಿಗೆ ತಂದಿರುವುದಾಗಿ ತಿಳಿಸಿದ್ದಾರೆ.