
ಅಂಬಾನಿ ಕುಟುಂಬ (Ambani family) ಪ್ರತಿ ವರ್ಷದಂತೆ ಈ ವರ್ಷವೂ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಿದೆ. ಚೌತಿಯಂದು ಆಂಟಿಲಿಯಾಕ್ಕೆ ಗಣಪತಿಯನ್ನು ವೈಭವದಿಂದ ಸ್ವಾಗತ ಮಾಡಿದ್ದ ಅಂಬಾನಿ ಕುಟುಂಬ ಪಂಚಮಿಯಂದು ಗಣೇಶ ಮೂರ್ತಿ ಮೆರವಣಿಗೆ ಮಾಡಿ, ವಿಸರ್ಜನೆ ಮಾಡಿದೆ. ಮೆರವಣಿಗೆಯಲ್ಲಿ ಎಂದಿನಂತೆ ನೀತಾ ಅಂಬಾನಿ ಕಾಣಿಸಿಕೊಂಡಿದ್ದಾರೆ. ಮುಖೇಶ್ ಅಂಬಾನಿ (Mukesh Ambani) ಮನೆಯಲ್ಲಿ ಎರಡನೇ ಬಾರಿ ಗಣೇಶೋತ್ಸವ ಆಚರಣೆ ಮಾಡ್ತಿರುವ ರಾಧಿಕಾ ಮರ್ಚೆಂಟ್, ತಮ್ಮ ಸಿಂಪಲ್ ಲುಕ್, ಕ್ಯೂಟ್ ಸ್ಮೈಲ್ ನಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ.
ರಾಧಿಕಾ ಮರ್ಚೆಂಟ್ (Radhika Merchant) ಹಾಗೂ ಅನಂತ್ ಅಂಬಾನಿ (Anant Ambani) ಮೆರವಣಿಗೆಯ ಸಾರಥ್ಯ ವಹಿಸಿದ್ದರು. ರಾಧಿಕಾ ಗಣಪತಿ ಮೂರ್ತಿ ಕುಳಿತಿದ್ದ ಗಾಡಿಯಲ್ಲಿದ್ರೆ, ಅನಂತ್ ಅಂಬಾನಿ ನಡೆಯುತ್ತ ಮೆರವಣಿಗೆಯಲ್ಲಿ ಸಾಗಿದ್ರು. ಆರಂಭದಲ್ಲಿ ಗಣಪತಿ ಬಪ್ಪ ಮೋರಿಯಾ ಎಂಬ ಜಯಘೋಷದೊಂದಿಗೆ ಸಂಭ್ರಮಿಸಿದ ರಾಧಿಕಾ ಮರ್ಚೆಂಟ್ ಆ ನಂತ್ರ ಭಕ್ತಿರಿಗೆ ಪ್ರಸಾದ ಹಂಚುವಲ್ಲಿ ಬ್ಯುಸಿಯಾದ್ರು. ಪ್ರತಿಯೊಂದು ಕೆಲ್ಸವನ್ನು ಅತ್ಯಂತ ಉತ್ಸಾಹದಿಂದ ಮಾಡುವ ರಾಧಿಕಾ ಈ ಬಾರಿಯೂ ನಗು ಮರೆಯಲಿಲ್ಲ. ಸಿಂಪಲ್ ಕುರ್ತಾದಲ್ಲಿ ಕಾಣಿಸಿಕೊಂಡ ರಾಧಿಕಾ ಯಾವುದೇ ಆಭರಣ ಧರಿಸಿರಲಿಲ್ಲ. ಕೂದಲನ್ನು ಕಟ್ಟಿದ್ದ ರಾಧಿಕಾ ಮಂಗಳ ಸೂತ್ರ ಮಾತ್ರ ಧರಿಸಿದ್ದರು. ಗುಲಾಬಿ ಬಣ್ಣದ ಅನಾರ್ಕಲಿ ಕುರ್ತಾ ಹಾಕಿದ್ದ ಅವರು, ಮುಖಕ್ಕೆ ಕೇಸರಿ ಬಣ್ಣ ಬಳಿದುಕೊಂಡಿದ್ರು. ಇನ್ನು ಅನಂತ್ ಅಂಬಾನಿ ಕೂಡ ಅತ್ಯಂತ ಸಿಂಪಲ್ ಆಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಅಂಬಾನಿ ಕುಟುಂಬ ಅನೇಕ ವರ್ಷಗಳಿಂದ ಗಣಪತಿ ಪೂಜೆ ಮಾಡ್ತಿದೆ. ಪ್ರತಿ ಬಾರಿ ಮೆರವಣಿಗೆಯಲ್ಲಿ ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಕಾಣಿಸಿಕೊಳ್ತಾರೆ. ಈ ಬಾರಿಯೂ ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಮೆರವಣಿಗೆಯಲ್ಲಿ ಖುಷಿಯಿಂದ ಪಾಲ್ಗೊಂಡಿದ್ದರು. ಸಿಂಪಲ್ ಡ್ರೆಸ್ ನಲ್ಲಿ ಗಮನ ಸೆಳೆದ ನೀತಾ, ರಾಧಿಕಾಗೆ ಮುತ್ತಿಟ್ಟಿದ್ದು ಹೈಲೈಟ್. ಮೆರವಣಿಗೆಯಲ್ಲಿ ರಾಧಿಕಾ ಹಾಗೂ ಅನಂತ್ ಕ್ಯೂಟ್ ಫೈಟ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಹೂವಿನ ಎಸಳುಗಳನ್ನು ರಾಧಿಕಾ, ಅನಂತ್ ಮೈಗೆ ಹಾಕಿ ಎಂಜಾಯ್ ಮಾಡ್ತಿದ್ರೆ ಅನಂತ್ ಅಂಬಾನಿ ಕೂಡ ಒಂದಿಷ್ಟು ಹೂವನ್ನು ರಾಧಿಕಾ ಮೇಲೆ ಹಾಕಿದ್ದಾರೆ. ಈ ಮಧ್ಯೆ ರಾಧಿಕಾ ಬಾಡಿಗಾರ್ಡ್, ರಾಧಿಕಾ ಸುರಕ್ಷತೆ ಬಗ್ಗೆ ಕಾಳಜಿವಹಿಸಿದ್ದು ಅಭಿಮಾನಿಗಳಿಗೆ ಇಷ್ಟವಾಗಿದೆ.
ಇನ್ಸ್ಟಾಗ್ರಾಮ್, ಫೇಸ್ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಅಂಬಾನಿ ಕುಟುಂಬದ ಗಣಪತಿ ವಿಸರ್ಜನಾ ಮೆರವಣಿಗೆಯ ಅನೇಕ ವಿಡಿಯೋಗಳು ವೈರಲ್ ಆಗಿವೆ. ವಿಡಿಯೋ ನೋಡಿದ ನೆಟ್ಟಿಗರು, ರಾಧಿಕಾ ಸಿಂಪ್ಲಿಸಿಟಿಯನ್ನು ಈ ಬಾರಿಯೂ ಹೊಗಳಿದ್ದಾರೆ. ರಾಧಿಕಾ, ಅಂಬಾನಿ ಕುಟುಂಬದ ಪರಂಪರೆ ಮುನ್ನಡೆಸ್ತಾರೆ, ಅಂಬಾನಿ ಕುಟುಂಬದ ಪ್ರೀತಿಯ ಸೊಸೆ ಅಂತ ಅನೇಕರು ಕಮೆಂಟ್ ಮಾಡಿದ್ದಾರೆ. ಈ ಬಾರಿ ರಾಧಿಕಾ, ಅನಂತ್, ಮುಖೇಶ್ ಅಂಬಾನಿ ಹಾಗೂ ಅನಿತಾ ಅಂಬಾನಿ, ಆಕಾಶ್ ಅಂಬಾನಿ ಬಿಟ್ರೆ ಮತ್ತ್ಯಾರೂ ಮೆರವಣಿಗೆಯಲ್ಲಿ ಕಾಣಿಸಲಿಲ್ಲ. ಶ್ಲೋಕಾ, ಇಶಾ ಗಣಪತಿ ವಿಸರ್ಜನೆಯಲ್ಲಿ ಕಾಣಿಸಲಿಲ್ಲ.
ಇಷ್ಟು ಬೇಗ ವಿಸರ್ಜನೆ ಏಕೆ? : ಪ್ರತಿ ವರ್ಷ ನಾಲ್ಕೈದು ದಿನ ಮನೆಯಲ್ಲಿ ಗಣಪತಿ ಇಟ್ಟು ಪೂಜೆ ಮಾಡ್ತಿದ್ದ ಅಂಬಾನಿ ಕುಟುಂಬ ಈ ಬಾರಿ ಎರಡೇ ದಿನಕ್ಕೆ ಗಣಪತಿ ವಿಸರ್ಜನೆ ಮಾಡಿದೆ. ಇದು ಅನೇಕರ ಅನುಮಾನಕ್ಕೆ ಕಾರಣವಾಗಿದೆ. ಕೋಕಿಲಾ ಬೆನ್ ಆಸ್ಪತ್ರೆಯಲ್ಲಿದ್ದು, ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಅಪ್ ಡೇಟ್ ಇಲ್ಲ. ಅವ್ರ ಆರೋಗ್ಯವನ್ನು ಗಮನದಲ್ಲಿಟ್ಕೊಂಡು ಬೇಗ ಅಂಬಾನಿ ಕುಟುಂಬ ಗಣೇಶ ವಿಸರ್ಜನೆ ಮಾಡಿದೆ ಎನ್ನುವ ಶಂಕೆಯನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.