
ಮುಂಬೈ (ಆ.10) ಮುಕೇಶ್ ಅಂಬಾನಿ ರಿಲಯನ್ಸ್ ಜಿಯೋ ಹಲವು ಆಫರ್, ಕಡಿಮೆ ರೀಚಾರ್ಜ್, ಡೇಟಾ ಸೇರಿದಂತೆ ಹಲವು ಕಾರಣಗಳಿಂದ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಜಿಯೋ ವಿಶೇಷ ಆಫರ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಲೇ ಬಂದಿದೆ. 5ಜಿ ಸೇವೆ, ನೆಟ್‌ವರ್ಕ್ ಸೇರಿದಂತೆ ಹಲವು ಕಾರಣಗಳಿಂದ ಜಿಯೋ ಮೇಲೆ ಗ್ರಾಹಕರು ಅವಲಂಬಿತರಾಗಿದ್ದಾರೆ. ಇದೀಗ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಮತ್ತೊಂದು ದಾಖಲೆ ಬರೆದಿದೆ. ಜಿಯೋ ಇದೀಗ ವಿಶ್ವದಲ್ಲೇ ಅತೀ ದೊಡ್ಡ ಟೆಲಿಕಾಂ ಆಪರೇಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜಿಯೋ ಇದೀಗ ವಿಶ್ವದಲ್ಲೇ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಟೆಲಿಕಾಂ ಆಪರೇಟರ್.ಚೀನಾ, ಅಮೆರಿಕ ಸೇರಿದಂತೆ ಇತರ ಎಲ್ಲಾ ದೇಶಗಳ ಅತೀ ದೊಡ್ಡ ಟೆಲಿಕಾಂ ನೆಟ್‌ವರ್ಕ್ ಹಿಂದಿಕ್ಕಿರುವ ಜಿಯೋ ಇದೀಗ ದೊಡ್ಡ ಟೆಲಿಕಾಂ ಆಪರೇಟರ್ ಆಗಿ ಹೊರಹೊಮ್ಮಿದೆ. ಜಿಯೋ ಬಳಕೆದಾರರ ಸಂಖ್ಯೆ ಬರೋಬ್ಬರಿ 480 ಮಿಲಿಯನ್. 191 ಮಿಲಿಯನ್ 5ಜಿ ಬಳಕೆದಾರರನ್ನು ಜಿಯೋ ಹೊಂದಿದೆ.
ಇತ್ತೀಚೆಗೆ ರಿಲಯನ್ಸ್ ಜಿಯೋ ಅಮೆರಿಕದ ಟಿ ಮೊಬೈಲ್ ಟೆಲಿಕಾಂ ನೆಟ್‌ವರ್ಕ್ ಹಿಂದಿತ್ತು. ಫಿಕ್ಸೆಡ್ ವೈರ್ಲೆಸ್ ಆಕ್ಸೆಸ್ ಸೇವಾ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ನಂಬರ್ ಕಂಪನಿಯಾಗಿ ಹೊರಹೊಮ್ಮಿತ್ತು. ಇದಕ್ಕೂ ಮೊದಲು ಅಮೆರಿಕದ ಟಿ ಮೊಬೈಲ್ ನಂಬರ್ ಕಂಪನಿಯಾಗಿತ್ತು. ಆದರೆ ಜಿಯೋ ಫಿಕ್ಸೆಡ್ ವೈರ್ಲೆಸ್ ಆಕ್ಸೆಸ್ ಫೈಬರ್ ಸೇವೆಯಲ್ಲಿ 74 ಲಕ್ಷ ಗ್ರಾಹಕರ ಮೂಲಕ ಅಮೆರಿಕದ ಟಿ ಮೊಬೈಲ್ ಹಿಂದಿಕ್ಕಿ ಇತಿಹಾಸ ರಚಿಸಿತ್ತು.
ರಿಲಯನ್ಸ್ ಜಿಯೋ 5ಜಿ ಸೇವೆಗೆ ವಿಸ್ತರಣೆಗೊಳ್ಳುತ್ತಿದೆ. ಸದ್ಯ 191 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಜಿಯೋ 5ಜಿ ಸೇವೆ ಭಾರತದ 17 ನಗರದಲ್ಲಿ ಸೇವೆ ನೀಡುತ್ತಿದೆ. ಇದೀಗ ಈ 5ಜಿ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲು ರಿಲಯನ್ಸ್ ಜಿಯೋ ಮುಂದಾಗಿದೆ. ಈ ಮೂಲಕ ಜಿಯೋ ದೇಶದ ಪ್ರತಿಯೊಬ್ಬರಿಗೆ ಹೈಸ್ಪೀಡ್ ನೆಟ್‌ವರ್ಕ್ ಕಲ್ಪಿಸಲು ಸಜ್ಜಾಗಿದೆ.
ಭಾರತದಲ್ಲಿ ಡೇಟಾ, ಇಂಟರ್ನೆಟ್ ಕ್ರಾಂತಿ ಮಾಡಿರುವ ರಿಲಯನ್ಸ್ ಜಿಯೋ ಇದೀಗ ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸೇವೆ ನೀಡಲು ತಯಾರಿ ಮಾಡಿದೆ. ಸ್ಯಾಟಲೈಟ್ ಕಮ್ಯೂನಿಕೇಶನ್ (ಸ್ಯಾಕ್ಟಮ್) ಮೂಲಕ ಹೈಸ್ಪೀಡ್ 6ಜಿ ಇಂಟರ್ನೆಟ್ ಸೇವೆ ನೀಡಲು ರಿಲಯನ್ಸ್ ಜಿಯೋ ಮುಂದಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.