Mukesh Ambani: ಅಮೆರಿಕದಲ್ಲಿ ಅಂಬಾನಿ ಸಾಮ್ರಾಜ್ಯ, ಐಷಾರಾಮಿ ಹೋಟೆಲ್ ತೆಕ್ಕೆಗೆ!

By Suvarna NewsFirst Published Jan 9, 2022, 8:43 PM IST
Highlights

* ರಿಲಯನ್ಸ್ ಉದ್ಯಮ ಸಾಮ್ರಾಜ್ಯ ಮತ್ತಷ್ಟು ವಿಸ್ತರಣೆ
* ನ್ಯೂಯಾರ್ಕ್ ನ ಐಷಾರಾಮಿ ಹೋಟೆಲ್ ರಿಲಯನ್ಸ್ ತೆಕ್ಕೆಗೆ
* ಐಕಾನಿಕ್ ಐಷಾರಾಮಿ ಹೋಟೆಲ್ ಮಾಂಟ್ರಿಯಲ್ ಓರಿಯೆಂಟಲ್ ನ ಶೇ. 73.37 ರಷ್ಟು ಷೇರು ಖರೀದಿ
* ಲಂಡನ್ ನಂತರ ನ್ಯೂಯಾರ್ಕ್ ನಲ್ಲಿಯೂ ರಿಲಯನ್ಸ್ ಸಾಮ್ರಾಜ್ಯ

ಮುಂಬೈ(ಜ. 09)   ರಿಲಯನ್ಸ್  (Reliance) ಮೂಲಕ ಉದ್ಯಮ ಸಾಮ್ರಾಜ್ಯನ್ನು ಮುಕೇಶ್ ಅಂಬಾನಿ (Mukesh Ambani) ವಿಸ್ತರಣೆ ಮಾಡುತ್ತಲೇ ಇದ್ದಾರೆ.  ಲಂಡನ್ ನಲ್ಲಿ ಸ್ಟೋಕ್ ಪಾರ್ಕ್ ಎಸ್ಟೇಟ್ ಖರೀದಿಸಿದ್ದ ಅಂಬಾನಿ ಈಗ ಅಮೆರಿಕದ (USA) ನ್ಯೂಯಾರ್ಕ್(New York) ನಗರದಲ್ಲಿ ಐಷರಾಮಿ  ಮ್ಯಾಂಡರಿನ್ ಓರಿಯೆಂಟಲ್  ಹೋಟೆಲ್ ಖರೀದಿ ಮಾಡಿದ್ದಾರೆ.

ಐಕಾನಿಕ್ ಐಷಾರಾಮಿ ಹೋಟೆಲ್ ಮಾಂಟ್ರಿಯಲ್ ಓರಿಯೆಂಟಲ್ ನ ಶೇ. 73.37 ರಷ್ಟು ಷೇರುಗಳನ್ನು 98.15 ಮಿಲಿಯನ್ ಡಾಲರ್ ಗಳಿಗೆ ರಿಲಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್ ಮೆಂಟ್ ಆಂಡ್ ಹೋಲ್ಡಿಂಗ್ ಲಿಮಿಟೆಡ್ ಖರೀದಿ ಮಾಡಿದೆ. ಕಂಪನಿಗೆ ಸಂಬಂಧಿಸಿದ ಶೇ. 100 ಶೇರು ಖರೀದಿಗೂ ಆಲೋಚನೆ ಮಾಡಿದ್ದೇವೆ ಎಂದು ತಿಳಿಸಿದೆ.

Latest Videos

ಹೊಟೆಲ್ ಉದ್ಯಮದಲ್ಲಿ ರಿಲಯನ್ಸ್ ಈಗಾಗಲೇ ಹೆಜ್ಜೆ ಇಟ್ಟು ಆಗಿದೆ.  ಓಬೇರಾಯ್ ಹೋಟೆಲ್ಸ್ ನಲ್ಲಿ ರಿಲಯನ್ಸ್ ಈಗಾಗಲೇ ಶೇ. 19  ರಷ್ಟು ಪಾಲು ಹೊಂದಿದೆ. ನೀತಾ ಅಂಬಾನಿ ಕಾರ್ಯಕಾರಿಯ ನಿರ್ದೇಶಕರಲ್ಲಿ ಒಬ್ಬರು.  ಒಟ್ಟಿನಲ್ಲಿ ಲಂಡನ್ ಮತ್ತು ನ್ಯೂಯಾರ್ಕ್ ನಲ್ಲಿ ಭಾರತೀಯ ಕಂಪನಿಯ ಹೋಟೆಲ್ ತೆರೆದಂತೆ ಆಗಿದೆ.

ಕೊಲಂಬಸ್ ಸೆಂಟರ್  ಲಕ್ಸುರಿ ಜೊಟೆಲ್ ಪ್ರಪಂಚದಲ್ಲಿ ದೊಡ್ಡ ಹೆಸರು ಮಾಡಿದ್ದು ರಿಲಯನ್ಸ್ ತೆಕ್ಕೆಗೆ ಬಂದಂತೆ ಆಗಿದೆ. ನಕೆಲ ದಾಖಲಾತಿಗಳ ಕೆಲಸ ಬಾಕಿ ಇದ್ದು ಉಳಿದರುವ 26.63 ಶೇ. ಶೇರುಗಳನ್ನು ರಿಲಯನ್ಸ್ ಖರೀದಿ  ಮಾಡಲಿದೆ. 

ಹೋಟೆಲ್ ವಿಶೇಷತೆಗಳು: 2003ಲ್ಲಿ ಸ್ಥಾಪಿಸಲಾದ ಮ್ಯಾಂಡರಿನ್ ಓರಿಯೆಂಟಲ್ ಹೋಟೆಲ್ ವಿಶ್ವದ ಅತ್ಯಂತ ಜನಪ್ರಿಯ ಹೋಟೆಲ್ ಗಳಲ್ಲಿ ಒಂದು. , ಪೋರ್ಬ್ಸ್ ಫೈವ್ ಸ್ಟಾರ್ ಸ್ಪಾ ಪ್ರಶಸ್ತಿಗಳಿ ಇದಕ್ಕೆ ಸಂದಿವೆ  ಮುಕೇಶ್ ಅಂಬಾನಿ ಇದೇ ಹೋಟೆಲ್ ನ ಬಹುಪಾಲು ಷೇರುಗಳನ್ನು ಖರೀದಿಸಿರುವುದರಿಂದ ಸಹಜವಾಗಿಯೇ ಆಸ್ತಿ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ.

ರಿಲಯನ್ಸ್‌ಗೆ ಶೀಘ್ರ ಉತ್ತರಾಧಿಕಾರಿ: ಖುದ್ದು ಅಂಬಾನಿ ಸುಳಿವು

ಓಬೇರಾರ್ ಗೆ ಸೇರಿದ ಮುಂಬೈನಲ್ಲಿರುವ ಅತ್ಯಾಧುನಿಕ ಕನ್ವೆಷನ್ ಸೆಂಟರ್, ಹೆೋಟೆಲ್, ಮನೆ ರಿಲಯನ್ಸ್ ಪಾಲಾಗಿದೆ. ಕೆಲವು ದಿನಗಳ ಹಿಂದೆ ಲಂಡನ್ ಬಕ್ಕಿಂಗ್ ಹ್ಯಾಮ್ ಸ್ಟೋಕ್ ಪಾರ್ಕ್ ನಲ್ಲಿ 300 ಎಕರೆ ಭೂಮಿ ಖರೀದಿಸಿತ್ತು. 300 ಎಕರೆ ಪ್ರದೇಶದಲ್ಲಿ 49 ಬೆಡ್ ರೂಂಗಳ ಮನೆಗೆ ವಿಶೇಷವಾಗಿ 592 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಲಾಗಿತ್ತು. 

ಜಿಯೋ ಮೂಲಕ ಟೆಲಿಕಾಂ ಕ್ಷೇತ್ರದ ದಿಗ್ಗಜನಾಗಿರುವ ರಿಲಯನ್ಸ್ ಇದೀಗ 5 ಜಿ ಸೇವೆಗಳನ್ನು ನೀಡಲು ತನ್ನ ದೃಷ್ಟಿ ನೆಟ್ಟಿದೆ. ಈ ನಡುವೆ  ಐಷಾರಾಮಿ ಹೋಟೆಲ್ ಉದದ್ಯಮದಲ್ಲಿಯೂ ಕಾಲಿರಿಸಿದೆ. 

ಆಸ್ತಿ ಬೆಳೆಯುತ್ತಲೇ ಇದೆ: ಸತತ 14 ವರ್ಷಗಳಿಂದ ಭಾರತದ ನಂ.1 ಶ್ರೀಮಂತ, 4 ವರ್ಷಗಳಿಂದ ಏಷ್ಯಾದ(Asia) ನಂ.1 ಸಿರಿವಂತ ಎಂಬ ಹಿರಿಮೆ ಹೊಂದಿರುವ ರಿಲಯನ್ಸ್‌ ಸಮೂಹದ ಅಧ್ಯಕ್ಷ ಮುಕೇಶ್‌ ಅಂಬಾನಿ(Mukesh Ambani) ಪಡೆದುಕೊಳ್ಳುತ್ತಲೇ ಬಂದಿದ್ದರು. 100 ಶತಕೋಟಿ ಡಾಲರ್‌ (7.50 ಲಕ್ಷ ಕೋಟಿ) ಆಸ್ತಿ ಹೊಂದಿರುವ ವಿಶ್ವದ 11 ಭಾರೀ ಶ್ರೀಮಂತರ ಪಟ್ಟಿಸೇರಿಕೊಂಡಿದ್ದರು.

ಇದುವರೆಗೆ 10 ಶ್ರೀಮಂತರು ಮಾತ್ರವೇ 100 ಶತಕೋಟಿ ಡಾಲರ್‌ ಪಟ್ಟಿಯಲ್ಲಿದ್ದರು. ಅವರೆಂದರೆ ಟೆಸ್ಲಾದ ಎಲಾನ್‌ ಮಸ್ಕ್‌, ಅಮೆಜಾನ್‌ನ ಜೆಫ್‌ ಬೆಜೋಸ್‌, ಲೂಯಿಸ್‌ ವ್ಯೂಟನ್‌ನ ಬೆರ್ನಾರ್ಡ್‌ ಅರ್ನಾಲ್ಟ್‌, ಮೈಕ್ರೋಸಾಫ್ಟ್‌ನ ಬಿಲ್‌ಗೇಟ್ಸ್‌, ಗೂಗಲ್‌ನ ಲ್ಯಾರಿಪೇಜ್‌, ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್‌, ಗೂಗಲ್‌ನ ಸೆರ್ಗೆಯ್‌ ಬ್ರಿನ್‌, ಒರಾಕಲ್‌ನ ಲ್ಯಾರಿ ಎಲ್ಲಿಸನ್‌, ಹೂಡಿಕೆದಾರ ಸ್ಟೀವ್‌ ಬಲ್ಮಾರ್‌, ಹೂಡಿಕೆದಾರ ವಾರನ್‌ ಬಫೆಟ್‌ ಪಟ್ಟಿಯಲ್ಲಿ ಇದ್ದಾರೆ. 

 

click me!