ಅನಂತ್-ರಾಧಿಕಾ ಅದ್ಧೂರಿಯಲ್ಲಅತೀ ಕಂಜೂಸ್‌ ಮದುವೆ, ಇದು ನಿಜ ಅಂಬಾನಿ ಜಿಪುಣರಲ್ಲೇ ಜಿಪುಣ, ಕಾರಣಗಳು ಹಲವು!

By Gowthami K  |  First Published Jul 17, 2024, 10:01 PM IST

ಬರೋಬ್ಬರಿ ರೂ 5000 ಕೋಟಿ ಜಾಸ್ತಿ ಹಣವನ್ನು ಮದುವೆಗಾಗಿ ಅಂಬಾನಿ ಖರ್ಚು ಮಾಡಿದ್ದಾರೆ. ಆದರೆ ಇದೊಂದು ಕಂಜೂಸ್‌ ಮದುವೆ ಅಂತ ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳು ಇಲ್ಲಿದೆ.


ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ಭರ್ಜರಿಯಾಗಿ ನಡೆದಿದೆ. ಬರೋಬ್ಬರಿ ರೂ 5000 ಕೋಟಿ ಜಾಸ್ತಿ ಹಣವನ್ನು ಮದುವೆಗಾಗಿ ಅಂಬಾನಿ ಖರ್ಚು ಮಾಡಿದ್ದಾರೆ. ಆದರೆ ಇದೊಂದು ಕಂಜೂಸ್‌ ಮದುವೆ ಅಂತ ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳು ಕೂಡ ಇದೆ.

ಮದುವೆಯಲ್ಲಿ ಖರ್ಚು ಮಾಡಿದ್ದು ಯಾವುದಕ್ಕೆಲ್ಲ ಅಂದರೆ, 100 ವಿಮಾನಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದಕ್ಕೆ ಜಸ್ಟೀನ್ ಬೀಬರ್‌ ಗೆ 83 ಕೋಟಿ, ರಿಯಾನಾಗೆ 73 ಕೋಟಿ , ಅದ್ಧೂರಿ ಡೆಕೋರೇಷನ್ ಗೆ , ಚಿನ್ನ , ಬೆಳ್ಳಿ, ವಜ್ರ , ರತ್ನಗಳಿಂದ ಕಸೂತಿ ಮಾಡಿದ ಬಟ್ಟೆಗಳಿಗೆ ಕೋಟಿಗಟ್ಟಲೆ ಖರ್ಚಾಗಿದೆ.

Tap to resize

Latest Videos

ಮೈಸೂರು ಕೆಫೆ ಓನರ್‌ ಗುರುತಿಸಿ ರಾಧಿಕಾಳನ್ನು ಕರೆದು ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅನಂತ್ ಅಂಬಾನಿ!

ಆದರೆ ಇಲ್ಲಿ ಎಲ್ಲರೂ ತಿಳಿದು ಕೊಳ್ಳಬೇಕಾಗಿರುವ ಪ್ರಮುಖ ಅಂಶವಿದೆ. ಅಂಬಾನಿಯ ಒಟ್ಟು ಆಸ್ತಿ ಮೌಲ್ಯ 9 ಲಕ್ಷ ಕೋಟಿಗೂ ಅಧಿಕವಾಗಿದೆ. ಅಂದರೆ ಈ ಮದುವೆಗೆ ಅಂಬಾನಿ ಖರ್ಚು ಮಾಡಿರುವ ಹಣ ಅವರ ಒಟ್ಟು ಆಸ್ತಿಯ ಕೇವಲ 0.5% ಆಗಿದೆ. ಅಂದರೆ ಮದುವೆಗೆ ಖರ್ಚು ಮಾಡಿರುವ 5000 ಕೋಟಿಯನ್ನು ಅಂಬಾನಿ ಕೇವಲ 20 ದಿನದಲ್ಲಿ ಸಂಪಾದನೆ ಮಾಡಿ ಬಿಡುತ್ತಾರೆ. ಇನ್ನು ಜಿಯೋ ರೀಚಾರ್ಜ್ ಪ್ಲಾನ್‌ ಕೂಡ ಜಾಸ್ತಿ ಮಾಡಲಾಗಿದೆ. ಜಿಯೋವನ್ನು ಜಾಗತಿಕವಾಗಿ ಪ್ರಚಾರ ಪಡೆದಿದೆ. ಹಾಗೆ ನೋಡಿದರೆ ಅಂಬಾನಿ 15 ದಿನದಲ್ಲೇ ಮದುವೆಗೆ ಖರ್ಚಾದ ಹಣವನ್ನು ಸಂಪಾದಿಸಬಹುದು.

ಹೀಗಾಗಿ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ಅಂಬಾನಿ ಶ್ರೀಮಂತಿಕೆಗೆ ಇದೇನು ಅಂತಹ ಅದ್ಧೂರಿ ಅಲ್ಲವೇ ಅಲ್ಲ. ಮಾತ್ರವಲ್ಲ  ಮದುವೆಯಲ್ಲೂ ಬಿಸಿನೆಸ್‌ ಬಗ್ಗೆಯೇ ತಲೆ ಉಪಯೋಗಿಸಿರುವ ಅಂಬಾನಿ ಅಂತರಾಷ್ಟ್ರೀಯ ವಸ್ತ್ರವಿನ್ಯಾಸಕಾರರಿಗೆ ಬಟ್ಟೆ ಡಿಸೈನ್‌ ಗೆ ಕೊಟ್ಟಿದ್ದಾರೆ. ವಿದೇಶದ ಶ್ರೀಮಂತ ಮಾತ್ರವಲ್ಲ ಎಲ್ಲಾ ಕ್ಷೇತ್ರದ ದಿಗ್ಗಜರನ್ನು ಕರೆಯುವ ಮೂಲಕ ಭವಿಷ್ಯ ವ್ಯವಹಾರದ ಬಗ್ಗೆ ಕೂಡ ಚಿಂತಿಸಿದ್ದಾರೆ. ಇದರೊಂದಿಗೆ ಬ್ಯಾಂಡೆಡ್‌ ಗಿಫ್ಟ್ ಗಳು, ವಿವಿಧ ಉಡುಗೊರೆಗಳನ್ನು ನೀಡುವ ಮೂಲಕ ಅಲ್ಲೂ ಪ್ರಮೋಷನ್‌ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಕೆಲವು ಬ್ರಾಂಡ್‌ ಗಳ ಪ್ರಮೋಷನ್ ಈ ಮದುವೆಯಲ್ಲಿ ನಡೆದಿರುವುದಂತೂ ಸುಳ್ಳಲ್ಲ. ಈ ಮೂಲಕ ಅಂಬಾನಿ ಇಲ್ಲೂ ತನ್ನ ತಲೆ ಉಪಯೋಗಿಸಿದ್ದಾರೆ.

ವಿಶ್ವದ ಅತಿದೊಡ್ಡ ಮಾವು ಬೆಳೆಗಾರ ಮುಕೇಶ್ ಅಂಬಾನಿ, ಇದರ ಹಿಂದಿದೆ ಒಂದು ರೋಚಕ ಕಥೆ!

ಈ ಮದುವೆಯಿಂದ ಮದುವೆಗೆ ಖರ್ಚಾಗುವ ಬದಲು ಅದೆಷ್ಟೋ ಲಾಭವೇ ಆಗಿದೆ ಎನ್ನುವುದು ಮಾರುಕಟ್ಟೆ ವಿಶ್ಲೇಷಕರಿಂದ ಬಂದಿರುವ ಅಭಿಪ್ರಾಯವಾಗಿದೆ. ಮಾತ್ರವಲ್ಲ ಈ ಎಲ್ಲಾ ಆಚರಣೆಗಳ ನಡುವೆ, ಮುಖೇಶ್ ಅಂಬಾನಿ ವ್ಯವಹಾರಕ್ಕೆ  ಸ್ವಲ್ಪವೂ ಹಾನಿಯಾಗಿಲ್ಲ. ವಾಸ್ತವವಾಗಿ  ಕಳೆದ 10 ದಿನಗಳಲ್ಲಿ 25,000 ಕೋಟಿ ರೂ. ಲಾಭವಾಗಿದೆ. ಅನಂತ್ ಮತ್ತು ರಾಧಿಕಾ ಅವರ ವಿವಾಹದ ಶುಭ ದಿನದಂದು ರಿಲಯನ್ಸ್ ಷೇರುಗಳು  ಏರಿಕೆ ಕಂಡಿದ್ದವು.

ಅಂಬಾನಿ ಮಗನ ಮದುವೆಯನ್ನು ಇನ್ನೂ ಅದ್ಧೂರಿಯಾಗಿ  ಮಾಡಬಹುದಿತ್ತು. ಆದರೆ ಅಂತರಾಷ್ಟ್ರೀಯ ಸ್ನೇಹ ಸಂಬಂಧದ ಜೊತೆಗೆ ಅಂಬಾನಿ ಈ ಮೂಲಕ ಮಿಡಲ್‌ ಕ್ಲಾಸ್ ಮತ್ತು ಲೋವರ್ ಮಿಡಲ್‌ ಕ್ಲಾಸ್‌ ಜನರಿಗೆ ಸಂದೇಶ ನೀಡುತ್ತಿದ್ದಾರೆ. ಸಾಲ ಮಾಡಿ ಮದುವೆ ಮಾಡಬೇಡಿ. ಸಂಪಾದಿಸಿದ ಆಸ್ತಿಯಲ್ಲಿ ಎಷ್ಟನ್ನು ಖರ್ಚು ಮಾಡಬೇಕು ಎಂಬುದನ್ನು ಅಂಬಾನಿ ನೋಡಿ ಕಲಿಯಿರಿ. ಭಾರತದ ಜನರ ಬಡತನಕ್ಕೆ ಅಂಬಾನಿ ಕಾರಣ ಅಲ್ಲ. ಭಾರತವನ್ನು ಆಳಿದ ವಿವಿಧ ರಾಜಕೀಯ ಪಕ್ಷಗಳೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ ಗಳು, ಟ್ರೋಲ್ ಮಾಡಲಾಗುತ್ತಿದೆ. 

ಇಷ್ಟು ಮಾತ್ರವಲ್ಲ ಅಂಬಾನಿ  ಕುಟುಂಬದ ಸದಸ್ಯರು ಧರಿಸಿರವ ಬಟ್ಟೆಗಳು ನೂರಾರು ಕೋಟಿ ಮೌಲ್ಯದ್ದಾಗಿತ್ತು. ಅವೆಲ್ಲವನ್ನು ಅಪ್ಪಟ ಚಿನ್ನ ಮತ್ತು ಬೆಳ್ಳಿಯ ಹೊದಿಕೆಯಿಂದ ಬೆಲೆಬಾಳುವ ಸ್ಟೋನ್ ಗಳಿಂದ  ಮಾಡಲಾಗಿತ್ತು. ಇದಲ್ಲದೆ ಆಭರಣ ಪ್ರಿಯರಾದ ನೀತಾ ಅಂಬಾನಿ ಅವರು ತಮ್ಮ ಮಗನ ಮದುವೆಗೆ ತಮ್ಮ ವೈಯಕ್ತಿಕ ಸಂಗ್ರಹದಿಂದ  180 ಕ್ಯಾರೇಟ್‌ ವಜ್ರದ ನೆಕ್ಲೇಸ್‌ ಧರಿಸಿದ್ದರು. ಮಗಳು, ಸೊಸೆಯಂದಿರು ಕೂಡ ದುಬಾರಿ ಬೆಲೆಬಾಳುವ 100 ಕ್ಯಾರೆಟ್‌ನ ವಜ್ರಾಭರಣವನ್ನು ಧರಿಸಿದ್ದು, ಭಾರತೀಯ ರಾಜಪ್ರಭುತ್ವದ ಡಿಸೈನ್ ಇದಾಗಿತ್ತು. ಆದರೆ ಅಂಬಾನಿ ಕುಟುಂಬದ ಹೆಣ್ಣು ಮಕ್ಕಳು ರಾಣಿಯರಂತೆ ಕಂಗೊಳಿಸಿದರೆ. ಗಂಡು ಮಕ್ಕಳೆಲ್ಲ ಬೆಲೆಬಾಳುವ ಬಟ್ಟೆಗಳನ್ನು ಧರಿಸಿದ್ದರು ಹೊರತು ಯಾವುದೇ ಬಂಗಾರ ಧರಿಸಿರಲಿಲ್ಲ. ಮುಕೇಶ್ ಅಂಬಾನಿಯಂತು ಎಷ್ಟು ಸಿಂಪಲ್ ಎಂದರೆ ಕೈಗೆ ಒಂದು ಉಂಗುರ, ಬ್ರಾಸ್‌ಲೈಟ್‌ ಕೂಡ ಧರಿಸಿರಲಿಲ್ಲ. ಇದು ಕೂಡ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. 

ಇದಲ್ಲದೆ  ಭಾರತದಲ್ಲಿ ಸಿಗುವ ಎಲ್ಲಾ ಬಗೆಯ ವೈವಿದ್ಯಮಯ ಆಹಾರವನ್ನು ಅತಿಥಿಗಳಿಗೆ ಉಣಬಡಿಸಲಾಗಿತ್ತು. ಮೂರು ದಿನ ಅಂದರೆ ಜುಲೈ 12,13,14ರಂದು ನಡೆದ ಮದುವೆ ಇಂದ್ರ ಲೋಕದಂತೆ ಶೃಂಗಾರಗೊಂಡಿತ್ತು. ಮದುವೆಯಲ್ಲಿ 14 ಸಾವಿರಕ್ಕೂ ಅಧಿಕ ಅತಿಥಿಗಳು ಆಗಮಿಸಿ ನೂತನ ವಧುವರರನ್ನು ಆಶೀರ್ವದಿಸಿದ್ದರು. 

ಇನ್ನು ಮದುವೆಗೂ ಮುನ್ನ ಮಗ ಮತ್ತು ಸೊಸೆಗೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದುಬೈನಲ್ಲಿ ಬರೋಬ್ಬರಿ  640 ಕೋಟಿ ರೂ ಮೌಲ್ಯದ ವಿಲ್ಲಾ ಉಡುಗೊರೆಯಾಗಿ ನೀಡಿದ್ದರು. ಇಲ್ಲಿನ ಪಾಮ್‌ ಜುಮರೈದಲ್ಲಿರುವ ದುಬೈನ ಅತಿ ದುಬಾರಿ ವಿಲ್ಲಾವಾಗಿದ್ದು ಬರೋಬ್ಬರಿ 3 ಸಾವಿರ ಚ,ಅ ಪ್ರದೇಶದಲ್ಲಿ ನಿರ್ಮಾಣವಾಗಿದೆ. 10 ಕೊಠಡಿ, 70 ಮೀ ಉದ್ದದ ಖಾಸಗಿ ಬೀಚ್‌ ಜೊತೆಗೆ ಅತ್ಯಾಕರ್ಷಕ ಒಳಾಂಗಣ ವಿನ್ಯಾಸವನ್ನು ಈ ವಿಲ್ಲಾ ಹೊಂದಿದೆ ಎನ್ನಲಾಗಿದೆ.

click me!