ಮನೆಯಲ್ಲಿ ಕಡುಬಡತನ, ಸಿಗದ ಐಐಟಿ ಸೀಟು ಆದ್ರೂ 1,10,000 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಛಲಗಾರ

By Suvarna News  |  First Published Jan 24, 2024, 12:19 PM IST

ಕೆಲವರು ಜೀವನದಲ್ಲಿ ಅದೆಷ್ಟೇ ಕಷ್ಟಗಳು ಎದುರಾದರೂ ಭಯಪಡೋದಿಲ್ಲ. ಇದಕ್ಕೆ ಗಿರೀಶ್ ಮಾತ್ರುಭೂತಂ ಅತ್ಯುತ್ತಮ ನಿದರ್ಶನ. ಸ್ವಂತ ಪರಿಶ್ರಮದಿಂದ 1,10,000 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಇವರ ಕಥೆ ಹಲವರಿಗೆ ಸ್ಫೂರ್ತಿದಾಯಕ. 
 


Business Desk: ಜೀವನದಲ್ಲಿ ಆಸೆ ಪಟ್ಟಿದ್ದೆಲ್ಲ ಸಿಗೊಲ್ಲ. ಆದರೆ, ಕೆಲವೊಮ್ಮೆ ನಾವು ಆಸೆ ಪಟ್ಟಿದ್ದಕ್ಕಿಂತ ಉತ್ತಮ ಆಯ್ಕೆ ಬದುಕಿಲ್ಲಿ ಮುಂದೊಂದು ದಿನ ಸಿಕ್ಕೇಸಿಗುತ್ತದ. ಗಿರೀಶ್ ಮಾತ್ರುಭೂತಂ ಅವರ ವಿಚಾರದಲ್ಲೂ ಇದು ನಿಜವಾಗಿದೆ. ತಿರುಚಿಯಲ್ಲಿ ಹುಟ್ಟಿ ಬೆಳೆದ ಗಿರೀಶ್  ಅವರಿಗೆ ಐಐಟಿಯಲ್ಲಿ ಓದಬೇಕೆಂಬ ಹಂಬಲವಿತ್ತು. ಆದರೆ, ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಆಗ ಅನೇಕರು ಗಿರೀಶ್ ಅವರನ್ನು ನೋಡಿ ಲೇವಾಡಿ ಮಾಡಿದ್ದರು. ಆದರೆ, ಐಐಟಿಯಲ್ಲಿ ಸೀಟು ಸಿಗದಿದ್ದರೆ ಏನಾಯ್ತಂತೆ ಅಲ್ಲಿ ಓದಿದವರಿಗಿಂತಲೂ ಉನ್ನತ ಸಾಧನೆಯನ್ನು ಗಿರೀಶ್ ಮಾಡಿದ್ದಾರೆ. ಅವರೀಗ 1,10,000 ಕೋಟಿ ರೂ. ಮೌಲ್ಯದ ಕಂಪನಿಯ ಮಾಲೀಕರು. ಒಂದು ಕಾಲದಲ್ಲಿ ಕಾಲೇಜಿಗೆ ಹೋಗಲು ಕೂಡ ಇವರ ಬಳಿ ಹಣವಿರಲಿಲ್ಲ. ಸಂಬಂಧಿಕರ ಬಳಿ ಸಾಲ ಪಡೆದು ಆ ಹಣದಿಂದ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ್ದರು. ಆದರೆ, ಇಂದು ಗಿರೀಶ್ ದೇಶದ ಶ್ರೀಮಂತ ಉದ್ಯಮಿಗಳಲ್ಲೊಬ್ಬರು. ಇವರ ಯಶಸ್ಸಿನ ಕಥೆ ಹಲವರಿಗೆ ಪ್ರೇರಣೆದಾಯಕ.

ಎಂಬಿಎ ಮಾಡಲು ಸಾಲ
ಗಿರೀಶ್ ಅವರಿಗೆ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆಯಬೇಕೆಂಬ ಬಯಕೆಯಿತ್ತು. ಆದರೆ, ಐಐಟಿ ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಊರಿಗೆ ಸಮೀಪದ ಷಣ್ಮುಗ ಆರ್ಟ್ಸ್, ಸೈನ್ಸ್, ಟೆಕ್ನಾಲಜಿ ಹಾಗೂ ರಿಸರ್ಚ್ ಅಕಾಡೆಮಿಯಲ್ಲಿ ಶಿಕ್ಷಣ ಪೂರ್ಣಗೊಳಿಸಿದರು. ಪದವಿ ಪೂರ್ಣಗೊಂಡ ಬಳಿಕ ಗಿರೀಶ್ ಎಂಬಿಎ ಮಾಡಲು ನಿರ್ಧರಿಸಿದರು. ಆದರೆ, ಆಗ ಅವರ ಬಳಿ ಹಣವಿರಲಿಲ್ಲ. ಹೀಗಾಗಿ ಸಂಬಂಧಿಕರ ಬಳಿ ಸಾಲ ಪಡೆದು ಮದ್ರಾಸ್ ವಿಶ್ವ ವಿದ್ಯಾಲಯದಿಂದ ಗಿರೀಶ್ ಎಂಬಿಎ ಪೂರ್ಣಗೊಳಿಸಿದರು. 

Tap to resize

Latest Videos

ಉನ್ನತ ಹುದ್ದೆ ತೊರೆದು ಚಹಾ ಮಾರಲು ಪ್ರಾರಂಭಿಸಿದ ಐಐಟಿ ಪದವೀಧರ, ಈಗ ಈತನ ಸಂಸ್ಥೆ ಮೌಲ್ಯ 2,050 ಕೋಟಿ!

ಸ್ವಂತ ಉದ್ಯಮ ಸ್ಥಾಪಿಸಲು ಉದ್ಯೋಗಕ್ಕೆ ಗುಡ್ ಬೈ
ಶಿಕ್ಷಣ ಪೂರ್ಣಗೊಂಡ ಬಳಿಕ ಗಿರೀಶ್ ಝಹೋ ಎಂಬ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜ್ಮಂಟ್ ಉಪಾಧ್ಯಕ್ಷರ ಹುದ್ದೆಯಲ್ಲಿ 10 ವರ್ಷಗಳಿಗೂ ಅಧಿಕ ಕಾಲ ಕಾರ್ಯನಿರ್ವಹಿಸಿದರು. ಆ ಬಳಿಕ ಅವರು ಸ್ವಂತ ಕಂಪನಿ ಸ್ಥಾಪಿಸುವ ಉದ್ದೇಶದಿಂದ ಝುಹೋ ಸಂಸ್ಥೆಯಲ್ಲಿನ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. 2010ರಲ್ಲಿ ಗಿರೀಶ್ 'ಫ್ರೆಶ್ ವರ್ಕ್' ಪ್ರಾರಂಭಿಸಿದರು. ತಮಿಳುನಾಡಿನ ಹವಾನಿಯಂತ್ರಿತ ಉಗ್ರಾಣದಿಂದ ಗಿರೀಶ್ ಕಂಪನಿ ಪ್ರಾರಂಭಿಸಿದರು.  ಗಿರೀಶ್ ಈ ಸ್ಥಳವನ್ನು ಕೇವಲ 100 ಡಾಲರ್ ಗೆ ಬಾಡಿಗೆಗೆ ಪಡೆದಿದ್ದರು. ಈ ಕಂಪನಿ 2011ರಲ್ಲಿ ಎಸೆಲ್ ನಿಂದ (Accel) ತನ್ನ ಮೊದಲ ಅನುದಾನ ಪಡೆದಿತ್ತು. ಎಸೆಲ್ ಈ ಸಂಸ್ಥೆಯಲ್ಲಿ 10 ಲಕ್ಷ ರೂ. ಹೂಡಿಕೆ ಮಾಡಿತ್ತು. ಸಾಕಷ್ಟು ಕಠಿಣ ಪರಿಶ್ರಮಗಳ ಬಳಿಕ ಇಂದು ಈ ಕಂಪನಿ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಯುನಿಕಾರ್ನ್ ಗಳಲ್ಲಿ ಒಂದಾಗಿದೆ. 2021ರಲ್ಲಿ ಅಮೆರಿಕದ NASDAQನಲ್ಲಿ 13 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಲಿಸ್ಟೆಡ್ ಆಗಿತ್ತು. 

ಮಾರಾಟ, ಉತ್ಪಾದನೆ, ಮಾರ್ಕೆಟಿಂಗ್, ಮಾನವ ಸಂಪನ್ಮೂಲ ಹಾಗೂ ಐಟಿ ಫೀಲ್ಡ್ಸ್ ಬೆಂಬಲ ನೀಡುವ ಸಾಫ್ಟ್ ವೇರ್ ಸಾಧನಗಳನ್ನು ಹೊಂದಿರುವ ಗ್ರಾಹಕರಿಗೆ ಗಿರೀಶ್ ಅವರ ಕಂಪನಿ  ವೇದಿಕೆ ಕಲ್ಪಿಸುತ್ತಿದೆ. ಇನ್ನು ಗಿರೀಶ್ ತಮ್ಮ ಕಂಪನಿಯ ಮುಖ್ಯ ಕಚೇರಿಯನ್ನು ಚೆನ್ನೈನಿಂದ ಕ್ಯಾಲಿಫೋರ್ನಿಯಾದ ಸ್ಯಾನ್ ಮ್ಯಾಟೆಯೋಗೆ ಸ್ಥಳಾಂತರಿಸಿದ್ದಾರೆ. ಇವರ ಸಂಸ್ಥೆ 120 ಕಂಪನಿಗಳ 50,000ಕ್ಕೂ ಅಧಿಕ ಕಂಪನಿಗಳಿಗೆ ಸೇವೆ ನೀಡುತ್ತಿದೆ. 

ಪದವಿ ಇಲ್ಲ.. ಜೇಬಿನಲ್ಲಿ ಐವತ್ತೇ ರೂಪಾಯಿ ಇದ್ರೂ 10,000 ಕೋಟಿ ವ್ಯವಹಾರ ನಡೆಸಿದ ವ್ಯಕ್ತಿ

ಗಿರೀಶ್ ಅವರ 500ರಷ್ಟು ಉದ್ಯೋಗಿಗಳು ಕೋಟ್ಯಧೀಶರಾಗಿದ್ದಾರೆ. ಇವರಲ್ಲಿ 70ಷ್ಟು ಉದ್ಯೋಗಿಗಳು 30 ವರ್ಷಕ್ಕಿಂತ ಕೆಳಗಿನ ವಯಸ್ಸಿನವರಾಗಿದ್ದಾರೆ. ಫೋರ್ಬ್ಸ್ ವರದಿ ಅನ್ವಯ 2021ಕ್ಕೆ ಅನ್ವಯಿಸುವಂತೆ ಗಿರೀಶ್ ಅವರ ಅಂದಾಜು ನಿವ್ವಳ ಸಂಪತ್ತು 5,819 ಕೋಟಿ ರೂ. ಅವರ ಕಂಪನಿಯ ಮೌಲ್ಯ 1,08,068 ರೂ. 

click me!