ಲಾಸಲ್ಲೇ ಲಾಭ ಸೂತ್ರ ಕಂಡುಕೊಂಡ ದಂಪತಿಗೆ ಅಮ್ಮನ ಆಶೀರ್ವಾದ: ಮಜಾ ಉಪ್ಪಿನಕಾಯಿ ಯಶೋಗಾಥೆ!

Published : Jul 18, 2025, 11:28 AM ISTUpdated : Jul 18, 2025, 12:57 PM IST
maja uppinakayi

ಸಾರಾಂಶ

ಸೋಲೆ ಗೆಲುವಿನ ಮೆಟ್ಟಿಲು ಅನ್ನೋ ಮಾತು ಇಂಥವರನ್ನು ನೋಡಿಯೇ ಹುಟ್ಟಿರಬೇಕು. ಬಣ್ಣ ಬಣ್ಣದ ಕ್ಯಾಪ್ಸಿಕಂ ಬೆಳೆದು ಯಾರೂ ಕೊಳ್ಳೋರಿಲ್ಲದೆ ನಷ್ಟದಲ್ಲಿದ್ದಾಗ ಹುಟ್ಟಿದ ಬ್ಯಾಂಡ್ 'ಮಜಾ' ಉಪ್ಪಿನಕಾಯಿ.

ಸೋಲೆ ಗೆಲುವಿನ ಮೆಟ್ಟಿಲು ಅನ್ನೋ ಮಾತು ಇಂಥವರನ್ನು ನೋಡಿಯೇ ಹುಟ್ಟಿರಬೇಕು. ಬಣ್ಣ ಬಣ್ಣದ ಕ್ಯಾಪ್ಸಿಕಂ ಬೆಳೆದು ಯಾರೂ ಕೊಳ್ಳೋರಿಲ್ಲದೆ ನಷ್ಟದಲ್ಲಿದ್ದಾಗ ಹುಟ್ಟಿದ ಬ್ಯಾಂಡ್ 'ಮಜಾ' ಉಪ್ಪಿನಕಾಯಿ. 3 ಸಾವಿರದಲ್ಲಿ ಶುರುವಾದ ಮಜಾ ಉಪ್ಪಿನಕಾಯಿಗೆ ಅಪ್ಪ-ಅಮ್ಮನ ಆಶೀರ್ವಾದ ಹಾಗೂ ಸರ್ಕಾರದ ಸಹಕಾರದಿಂದ ಈಗ ಪ್ರತಿ ತಿಂಗಳು 1 ಟನ್ ಮಾರುವ ಹಂತಕ್ಕೆ ಬೆಳೆದಿದೆ. ಅಮೆಜಾನ್, ಸೋಡೆಕ್ಸ್ ಆನ್‌ಲೈನಲ್ಲಿ ಬೇಡಿಕೆಯಲ್ಲಿ ರುವ ಮಜಾ ಉಪ್ಪಿನಕಾಯಿ, ಚಟ್ಟಿ ಪುಡಿ ಉದ್ಯಮದ ಹಿಂದೆ ರೋಚಕತೆ ಇದೆ. ಎಂಎಸ್ಸಿ ಬಯೋಟೆಕ್ ಪದವೀಧರೆ ವೆಂಕಟ ನಾಗಲಕ್ಷ್ಮೀ ಹಾಗೂ ಶಿವಾರೆಡ್ಡಿ ದಂಪತಿ ಕಂಪನಿ ಉದ್ಯೋಗಿಗಳು. ಮದುವೆಗೆ ಮುನ್ನ ವೆಂಕಟನಾಗಲಕ್ಷ್ಮೀ ಐಟಿಸಿ ಕಂಪನಿ ಸಂಶೋಧನಾ ವಿಭಾಗದಲ್ಲಿ ಆಹಾರ ಉತ್ಪನ್ನ ತಯಾರಿಕೆ, ಸಂಶೋಧನೆ, ಬ್ರ್ಯಾಂಡಿಂಗ್ ಜ್ಞಾನ ಪಡೆದಿ ದ್ದರು. ಬಳ್ಳಾರಿ ಜಿಲ್ಲೆ ಶಿರಗುಪ್ಪದವರಾದ ವೆಂಕಟನಾಗ ಲಕ್ಷ್ಮೀ, ಆಂಧ್ರ ಗುಂಟೂರಿನ ಶಿವಾರೆಡ್ಡಿ ಜತೆ ವಿವಾಹ ವಾದ ನಂತರ 3 ವರ್ಷ ಕೆಲಸದಿಂದ ಬ್ರೇಕ್ ಪಡೆದುಕೊಂಡರು.

ಸ್ವಂತ ಕಂಪನಿಯ ಕನಸು: ಮತ್ತೆ ಕೆಲಸದ ಬದಲು ಸ್ವಂತದ್ದೇನಾದರೂ ಮಾಡೋ ಆಸೆಯಿಂದ ತೋಟಗಾರಿಕೆ ಇಲಾಖೆ ಸಹಕಾರ ಪಡೆದು ದಾಬಸ್‌ಪೇಟೆ ಬಳಿ ಇದ್ದ ತಂದೆ ಜಮೀನಿನಲ್ಲಿ ಪಾಲಿ ಹೌಸ್ ಮಾಡಿದರು. ಮೊದಲಿಗೆ ಅಲಂಕಾರಿಕಾ ಹೂವು ಬೆಳೆದರು. 2ನೇ ಬೆಳೆಯಾಗಿ ಹಳದಿ, ಕೆಂಪು ಕ್ಯಾಪ್ಸಕಂ ಬೆಳೆದರು. ಕೊರೊನಾ ಆವರಿಸಿ ಹಳದಿ ಕ್ಯಾಪ್ಪಿಕಂ ಮಾರಲು ಕಷ್ಟವಾಯಿತು. ಉಪ್ಪಿನಕಾಯಿ ಕಂಪನಿ ಕೆಂಪು ಕ್ಯಾಪಿಕಂ ಕೊಳ್ಳಲು ಮುಂದಾಯಿತು. ಆ ಫ್ಯಾಕ್ಟರಿಗೆ ಕ್ಯಾಪ್ತಿಕಂ ಕೊಡಲು ಹೋದಾಗ, ನಾವು ಬೆಳೆದದ್ದನ್ನು ನಾವೇ ಉತ್ಪನ್ನ ಮಾಡಬೇಕು ಅನ್ನೋ ದೃಢ ನಿರ್ಧಾರಕ್ಕೆ ಬಂದರು. ವೆಂಕಟನಾಗಲಕ್ಷ್ಮೀ ತಾಯಿ ಗಂಗಾಭವಾನಿ ಅವರ ಉಪ್ಪಿನಕಾಯಿ ಭಾರೀ ರುಚಿ ಇತ್ತು. ಅಮ್ಮನ ಜತೆ 3 ಸಾವಿರ ಖರ್ಚಿನಲ್ಲಿ ಶುಂಠಿ, ಟೊಮೆಟೋ, ಮಾವಿ ನಉಪ್ಪಿನಕಾಯಿ ಸಿದ್ದವಾಯಿತು. ಕೈಯಲ್ಲೇ ಲೇಬಲ್ ಬರೆದು 3 ಕೆ.ಜಿ ಉಪ್ಪಿನಕಾಯಿಯನ್ನು ಗೆಳತಿಯ ಸೂಪರ್ ಮಾರ್ಕೆಟಲ್ಲಿ ಮಾರಲು ಇಡಲಾಯಿತು. ವಾರದಲ್ಲೇ ಬೇಡಿಕೆ ಬಂತು. ಮತ್ತೆ 50 ಗ್ರಾಂ.ನ ಸಣ್ಣ ಪ್ಯಾಕೇಜ್ ಮಾಡಿ, ಹಾಲಿನ ಬೂತ್‌ಗಳು, ಪಾಕ್ ೯ಗಳಲ್ಲಿ ಮಾರಿ, ರುಚಿ ನೋಡಿದವರ ಪ್ರತಿಕ್ರಿಯೆ ಪಡೆದರು. ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ತರಬೇತಿ ಸಿಕ್ಕಿತು.

ನೆರವಿಗೆ ಧಾವಿಸಿದ ಕಪೆಕ್: ಇದೇ ಸಂದರ್ಭದಲ್ಲಿ ಪಾಲಿ ಹೌಸ್ ಮಾಡುವಾಗ ನೆರವು ನೀಡಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿ ರಾಮಮೂರ್ತಿ ಅವರು ಹಾಪ್‌ ಕಾಮ್ಸ್ ಪ್ರಧಾನ ವ್ಯವಸ್ಥಾಪಕರಾಗಿದರು. ಒಮ್ಮೆ ಲಾಲ್‌ಬಾಗ್‌ನಲ್ಲಿ ಸಿಕ್ಕಿ ಉಪ್ಪಿನ ಕಾಯಿಯ ಮಾಹಿತಿ, ಸ್ಯಾಂಪಲ್ ಪಡೆದರು. ಕರೆ ಮಾಡಿ ನಮ್ಮ ಬೋರ್ಡ್ ಮೀಟಿಂಗ್ ದಿನ ಸ್ಯಾಂಪಲ್ ತರಲು ಹೇಳಿದರು. ಬೋರ್ಡ್ನನ ತೀರ್ಮಾನದಂತೆ ಹಾಪ್ ಕಾಮ್ಸ್ ಮಳಿಗೆಗಳಲ್ಲೂ ಮಜಾ ಉಪ್ಪಿನ ಕಾಯಿಗೆ ಜಾಗ ಸಿಕ್ಕಿತು. ಬೇಡಿಕೆ ಹೆಚ್ಚತೊಡಗಿದಾಗ ಹೊಸ ಮಷಿನರಿ ಹಾಕಲು ಬಂಡವಾಳ, ಜಾಗದ ಯೋಚನೆ ಬರುವಷ್ಟರಲ್ಲಿ ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕಪೆಕ್)ದ ಮಾಹಿತಿ ಸಿಕ್ಕಿತು. ಕಪೆಕ್ ಅಧಿಕಾರಿಗಳು ಪಿಎಂಎಫ್‌ಎಂಇ ಯೋಜನೆ, ಮಷಿನರಿ, ತರಬೇತಿ ಮಾಹಿತಿ ನೀಡಿದರು. ಪ್ರಾಜೆಕ್ಟ್ ರಿಪೋರ್ಟ್ ಮಾಡಿಸಿ, ಸಾಲ ಕೊಡಿಸಿದರು. ದೆಹಲಿಯ ವರ್ಲ್ಡ್ ಫುಡ್ ಇಂಡಿಯಾ ಮೇಳದಲ್ಲಿ ಮಳಿಗೆ ನೀಡಿದರು. ದೆಹಲಿ, ಜೈಪುರ, ಹರಿಯಾಣ, ಡಾರ್ಜಿಲಿಂಗ್‌ನಲ್ಲಿ ನಮ್ಮ ಉಪ್ಪಿನಕಾಯಿ ಮಾರಾಟವಾಗುತ್ತಿದೆ. 220 ಲಕ್ಷ ದಲ್ಲಿ ಬಳ್ಳಾರಿಯ ಶಿರಗುಪ್ಪದಲ್ಲಿ ಫ್ಯಾಕ್ಟರಿ ಶುರುವಾ ಯಿತು. ಕ10 ಲಕ್ಷ ಸಬ್ಸಿಡಿ ಸಿಕ್ಕಿತು ಎಂದು ವೆಂಕಟನಾಗ ಲಕ್ಷ್ಮೀ 'ಕನ್ನಡಡಪ್ರಭ'ಕ್ಕೆ ಉದ್ಯಮಿ ಜರ್ನಿ ವಿವರಿಸಿದರು.

ಅಪ್ಪ ಜಗಮೋಹನರಾವ್, ಅಮ್ಮ ಗಂಗಾಭವಾನಿ ಉಪ್ಪಿನಕಾಯಿ ತಯಾರಿ ನೋಡಿಕೊಳ್ಳುತ್ತಾರೆ. ಎಲ್ಲಾ ಕಚ್ಚಾಪದಾರ್ಥ ಸ್ಥಳೀಯರಿಂದಲೇ ಖರೀದಿಸುತ್ತೇವೆ. ಕಪೆಕ್‌ನವರಿಂದಲೇ ಅಮೆಜಾನ್, ಸೋಡೆಕ್ಸ್ ಅವಕಾಶ ಸಿಕ್ಕಿದೆ. ಸೊಡೆಕ್ಸ್‌ಗೆ ತಿಂಗಳಿಗೆ 300 ಕೇಜಿವರೆಗೂ ಉಪ್ಪಿನ ಕಾಯಿ ನೀಡುತ್ತಿದ್ದೇವೆ. ತಿಂಗಳಿಗೆ 1 ಟನ್ ಮಾರಾಟವಾ ಗುತ್ತಿದೆ. ನಾವು ಈಗ ಹಾಕಿರುವ ಮಷಿನರಿಗೆ 9 ಟನ್‌ವರೆಗೂ ತಯಾರಿಸುವ ಸಾಮರ್ಥ್ಯವಿದೆ. ವಾರ್ಷಿಕ 215 ಲಕ್ಷದ ವಹಿವಾಟನ್ನು ವರ್ಷದಲ್ಲಿ ಕೆ65 ಲಕ್ಷಕ್ಕೇ ರಿಸುವ ಗುರಿ ಇದೆ. 4 ಜನರಿಗೆ ಉದ್ಯೋಗ ನೀಡಿದ್ದೇವೆ. ನಮ್ಮ ಪತಿ ಮಾರುಕಟ್ಟೆ ವಿಸ್ತರಿಸಲು ತೊಡಗಿಸಿಕೊಂಡಿದ್ದಾರೆ ಎಂದರು ವೆಂಕಟನಾಗಲಕ್ಷ್ಮೀ. ಶುಂಠಿ, ಮಾವಿನಕಾಯಿ, ಟೊಮೆಟೋ ಸೇರಿದಂತೆ 7 ಬಗೆಯ ಉಪ್ಪಿನಕಾಯಿ, 5 ಬಗೆಯ ಚಟ್ಟಿ ಪುಡಿಗಳು ಮಜಾ ಬ್ಯಾಂಡ್ ನಲ್ಲಿ ತಯಾರಾಗುತ್ತಿವೆ. ಹೊಸ ಬಗೆಯ ಉಪ್ಪಿನಕಾಯಿ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಮಜಾ ನೇಚರ್‌ಫುಡ್ಸ್ ವೆಬ್‌ಸೈಟ್‌ನಲ್ಲಿಯೂ ಖರೀದಿ ಸಾಧ್ಯ. ಒಮ್ಮೆ ನಮ್ಮ ಉಪ್ಪಿನಕಾಯಿಗಳನ್ನು ಖರೀದಿಸಿದವರು ಮತ್ತೆ ಖರೀದಿಸುತ್ತಿದ್ದಾರೆ. ಕಪೆಕ್ ಹೊಸಮಾರ್ಕೆಟ್ ಅವಕಾಶ ನೀಡುತ್ತಿದೆ. ಕಪೆಕ್‌ ಇಲ್ಲದಿದ್ದರೆ1 ವರ್ಷದಲ್ಲಿ ಇಷ್ಟು ಬೆಳೆಯಲುಸಾಧ್ಯವಾಗುತ್ತಿರಲಿಲ್ಲ ಎಂದರು ವೆಂಕಟನಾಗಲಕ್ಷ್ಮೀ. ಮಜಾ ನೇಚರ್‌ಫುಡ್ಸ್ ಉತ್ಪನ್ನಗಳಿಗೆ ಸಂಪರ್ಕಿಸಿ -9686374225.

15 ಲಕ್ಷ ರು. ಸಬ್ಸಿಡಿ ಪಡೆಯಿರಿ: ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರು. ವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶ ವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಲಾಭ ಪಡೆಯಬಹುದು. ಆಹಾರ ಉದ್ಯಮಿ ಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ತ್‌ಲೈನ್ ಸಂಪರ್ಕಿಸಿ - 080 -22271192 & 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ. www.kappec.karnataka.gov.inನಲ್ಲೂ ಲಭ್ಯ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!