ಒಂದೇ ಪಾಲಿಸಿಯಲ್ಲಿ ಗಂಡ-ಹೆಂಡ್ತಿ ಇಬ್ಬರಿಗೂ ರಕ್ಷಣೆ: ಜೂನ್ 1 ರಿಂದ ಖರೀದಿಗೆ ಸಿಗಲಿವೆ ಎಲ್‌ಐಸಿಯ ಸೂಪರ್ ಪ್ಲಾನ್‌ಗಳು!

Published : May 27, 2026, 05:10 PM IST
LIC

ಸಾರಾಂಶ

ಭಾರತೀಯ ಜೀವ ವಿಮಾ ನಿಗಮ (LIC) ದಂಪತಿಗಳಿಗಾಗಿ 'ನ್ಯೂ ಜೀವನ್ ಸಾಥಿ' ಹೆಸರಿನ ಎರಡು ಹೊಸ ಜಂಟಿ ಜೀವ ವಿಮಾ ಯೋಜನೆಗಳನ್ನು (ಪ್ಲಾನ್ 888 ಮತ್ತು 889) ಬಿಡುಗಡೆ ಮಾಡಿದೆ. ಈ ಯೋಜನೆಗಳು ಉಳಿತಾಯ ಮತ್ತು ರಕ್ಷಣೆಯ ಜೊತೆಗೆ ಸಿಂಗಲ್ ಪ್ರೀಮಿಯಂ ಹಾಗೂ ಲಿಮಿಟೆಡ್ ಪ್ರೀಮಿಯಂ ಪಾವತಿ ಆಯ್ಕೆ ಒದಗಿಸುತ್ತವೆ.

ಮುಂಬೈ (ಮೇ 27): ಭಾರತೀಯ ಜೀವ ವಿಮಾ ನಿಗಮ (LIC of India) ವಿಮಾ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ. ಎಲ್‌ಐಸಿಯ ಸಿಇಒ ಮತ್ತು ಎಂಡಿ ಆಗಿರುವ ಶ್ರೀ ಆರ್. ದೊರೈಸ್ವಾಮಿ ಅವರು ಬುಧವಾರ ಮುಂಬೈನಲ್ಲಿ ‘ಎಲ್‌ಐಸಿ ನ್ಯೂ ಜೀವನ್ ಸಾಥಿ - ಸಿಂಗಲ್ ಪ್ರೀಮಿಯಂ’ (ಪ್ಲಾನ್ 888) ಮತ್ತು ‘ಎಲ್‌ಐಸಿ ನ್ಯೂ ಜೀವನ್ ಸಾಥಿ - ಲಿಮಿಟೆಡ್ ಪ್ರೀಮಿಯಂ’ (ಪ್ಲಾನ್ 889) ಎಂಬ ಎರಡು ಹೊಸ ಆಕರ್ಷಕ ಯೋಜನೆಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಇವೆರಡೂ ನಾನ್-ಪಾರ್ (ಲಾಭರಹಿತ), ನಾನ್-ಲಿಂಕ್ಡ್ (ಷೇರು ಮಾರುಕಟ್ಟೆ ಆಧಾರಿತವಲ್ಲದ), ವೈಯಕ್ತಿಕ ಮತ್ತು ಉಳಿತಾಯ ಯೋಜನೆಗಳಾಗಿವೆ. ಮುಖ್ಯವಾಗಿ, ಇವು ದಂಪತಿಗಳಿಗೆ ಉಳಿತಾಯ ಮತ್ತು ಗರಿಷ್ಠ ರಕ್ಷಣೆ ಎರಡನ್ನೂ ಒಟ್ಟಿಗೆ ನೀಡುವ ಜಂಟಿ ಜೀವ ವಿಮಾ (Joint Life Plans) ಯೋಜನೆಗಳಾಗಿವೆ.

ಎರಡೂ ಯೋಜನೆಗಳಲ್ಲಿರುವ ಸಾಮಾನ್ಯ ವೈಶಿಷ್ಟ್ಯಗಳು (Common Features)

ಜಂಟಿ ವಿಮಾ ಸೌಲಭ್ಯ: ಇವು ಜಂಟಿ ಜೀವ ವಿಮಾ ಯೋಜನೆಗಳಾಗಿದ್ದು, ವಿವಾಹಿತ ವ್ಯಕ್ತಿ ಮತ್ತು ಅವರ ಸಂಗಾತಿಯನ್ನು ಒಂದೇ ಪಾಲಿಸಿಯ ಅಡಿಯಲ್ಲಿ ರಕ್ಷಣೆ ಮಾಡಲಾಗುತ್ತದೆ

ಕನಿಷ್ಠ ವಿಮಾ ಮೊತ್ತ (Basic Sum Assured): ಈ ಯೋಜನೆಗಳಲ್ಲಿ ಕನಿಷ್ಠ ಮೂಲ ವಿಮಾ ಮೊತ್ತ ₹3,00,000 ಆಗಿದೆ. ಗರಿಷ್ಠ ವಿಮಾ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ. ಇದು ಮಂಡಳಿ ಅನುಮೋದಿಸಿದ ಅಂಡರ್‌ರೈಟಿಂಗ್ ನೀತಿಯ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.

ವಯೋಮಿತಿ: ಪಾಲಿಸಿ ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ ವಯೋಮಿತಿಯು ಪಾಲಿಸಿದಾರರು ಆಯ್ಕೆ ಮಾಡುವ ಪಾಲಿಸಿಯ ಆಯ್ಕೆಗಳ ಆಧಾರದ ಮೇಲೆ ಬದಲಾಗುತ್ತದೆ.

ಡೆತ್ ಬೆನಿಫಿಟ್ ಆಯ್ಕೆಗಳು: ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಎರಡು ‘ಡೆತ್ ಬೆನಿಫಿಟ್ ಆಪ್ಷನ್‌’ಗಳಲ್ಲಿ ರಿಸ್ಕ್ ಕವರ್ ಅನ್ನು ಆಯ್ಕೆ ಮಾಡಿಕೊಳ್ಳುವ ಫ್ಲೆಕ್ಸಿಬಲಿಟಿ ನೀಡಲಾಗುದೆ.

ಸಾಲದ ಸೌಲಭ್ಯ ಮತ್ತು ರೈಡರ್ಸ್: ತುರ್ತು ಹಣಕಾಸಿನ ಅಗತ್ಯಗಳಿಗಾಗಿ ಈ ಪಾಲಿಸಿಗಳ ಮೇಲೆ ಸಾಲದ ಸೌಲಭ್ಯ ಲಭ್ಯವಿದೆ. ಇದರೊಂದಿಗೆ ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ Optional Riders ಪಡೆದು ವಿಮಾ ರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.

ವಿಶೇಷ ರಿಯಾಯಿತಿ (Rebate): ಎಲ್‌ಐಸಿಯ ಪ್ರಸ್ತುತ ಪಾಲಿಸಿದಾರರಿಗೆ ಹಾಗೂ ಮರಣ ಹೊಂದಿದ ಪಾಲಿಸಿದಾರರ ನಾಮಿನಿಗಳು/ಫಲಾನುಭವಿಗಳಿಗೆ ಪ್ರೀಮಿಯಂನಲ್ಲಿ ವಿಶೇಷ ರಿಯಾಯಿತಿ ಸಿಗಲಿದೆ.

ಪೇಮೆಂಟ್‌ ಮತ್ತು ಡೆತ್‌ ಬೆನಿಫಿಟ್‌

ಮೆಚ್ಯೂರಿಟಿ ಬೆನಿಫಿಟ್ (ಪಾಲಿಸಿ ಅವಧಿ ಮುಕ್ತಾಯದ ಲಾಭ): ಪಾಲಿಸಿ ಚಾಲ್ತಿಯಲ್ಲಿದ್ದಾಗ, ಪಾಲಿಸಿಯ ಅವಧಿಯ ಕೊನೆಯಲ್ಲಿ ದಂಪತಿಗಳಲ್ಲಿ ಕನಿಷ್ಠ ಒಬ್ಬರು ಬದುಕುಳಿದಿದ್ದರೂ ಸಹ, ಮೂಲ ವಿಮಾ ಮೊತ್ತದೊಂದಿಗೆ (Basic Sum Assured) ಒಟ್ಟುಗೂಡಿದ ಗ್ಯಾರಂಟಿ ಎಡಿಷನ್‌ಗಳನ್ನು (Accrued Guaranteed Additions) ಪಾವತಿಸಲಾಗುತ್ತದೆ.

ಡೆತ್ ಬೆನಿಫಿಟ್ (ಮರಣದ ಪ್ರಯೋಜನ): ಪಾಲಿಸಿ ಅವಧಿಯಲ್ಲಿ ದಂಪತಿಗಳಲ್ಲಿ ಮೊದಲ ವ್ಯಕ್ತಿ ಮರಣ ಹೊಂದಿದಾಗ 'ಡೆತ್ ಬೆನಿಫಿಟ್ ವಿಮಾ ಮೊತ್ತ'ವನ್ನು ಪಾವತಿಸಲಾಗುತ್ತದೆ. ಅದೇ ಪಾಲಿಸಿ ಅವಧಿಯಲ್ಲಿ ಎರಡನೇ ವ್ಯಕ್ತಿಯೂ ಮರಣ ಹೊಂದಿದರೆ, ಮತ್ತೊಮ್ಮೆ 'ಡೆತ್ ಬೆನಿಫಿಟ್ ವಿಮಾ ಮೊತ್ತ'ದೊಂದಿಗೆ ಒಟ್ಟುಗೂಡಿದ ಗ್ಯಾರಂಟಿ ಎಡಿಷನ್‌ಗಳನ್ನು ಪಾವತಿಸಲಾಗುತ್ತದೆ.

ಕಂತುಗಳಲ್ಲಿ ಹಣ ಪಡೆಯುವ ಅವಕಾಶ: ಪಾಲಿಸಿದಾರರು ತಮ್ಮ ಮೆಚ್ಯೂರಿಟಿ ಅಥವಾ ಡೆತ್ ಬೆನಿಫಿಟ್ ಮೊತ್ತವನ್ನು ಒಟ್ಟಿಗೆ ಪಡೆಯುವ ಬದಲಿಗೆ ಕಂತುಗಳ (Instalments) ರೂಪದಲ್ಲಿ ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು.

ಎಲ್‌ಐಸಿ ನ್ಯೂ ಜೀವನ್ ಸಾಥಿ - ಸಿಂಗಲ್ ಪ್ರೀಮಿಯಂ (ಪ್ಲಾನ್ 888) ವಿಶೇಷತೆಗಳು

ಒಂದೇ ಬಾರಿ ಪ್ರೀಮಿಯಂ: ಈ ಯೋಜನೆಯಡಿ ಪ್ರೀಮಿಯಂ ಅನ್ನು ಕೇವಲ ಒಂದು ಬಾರಿ ಮಾತ್ರ ಪಾವತಿಸಬೇಕು (Single Premium).

ಸ್ಥಿರ ಗ್ಯಾರಂಟಿ ಎಡಿಷನ್: ಪಾಲಿಸಿಯ ಸಂಪೂರ್ಣ ಅವಧಿಯುದ್ದಕ್ಕೂ ಪ್ರತಿ ವರ್ಷಕ್ಕೆ, ಪ್ರತಿ ₹1,000 ಮೂಲ ವಿಮಾ ಮೊತ್ತಕ್ಕೆ ₹70 ರ ದರದಲ್ಲಿ ಗ್ಯಾರಂಟಿ ಎಡಿಷನ್‌ಗಳನ್ನು (Guaranteed Additions) ನೀಡಲಾಗುತ್ತದೆ.

ಪಾಲಿಸಿ ಅವಧಿಯನ್ನು (Policy Term) ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ವಿವಿಧ ಆಯ್ಕೆಗಳು ಲಭ್ಯವಿವೆ.

ಎಲ್‌ಐಸಿ ನ್ಯೂ ಜೀವನ್ ಸಾಥಿ - ಲಿಮಿಟೆಡ್ ಪ್ರೀಮಿಯಂ (ಪ್ಲಾನ್ 889) ವಿಶೇಷತೆಗಳು

ಸೀಮಿತ ಅವಧಿಯ ಪ್ರೀಮಿಯಂ: ಈ ಯೋಜನೆಯಡಿ ಪಾಲಿಸಿದಾರರು ಸೀಮಿತ ಅವಧಿಗೆ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಗ್ರಾಹಕರು ಆಯ್ಕೆ ಮಾಡಿಕೊಳ್ಳುವ 10, 15, 20 ಮತ್ತು 25 ವರ್ಷಗಳ ಪಾಲಿಸಿ ಅವಧಿಗೆ ಅನುಗುಣವಾಗಿ, ಪ್ರೀಮಿಯಂ ಪಾವತಿಸುವ ಅವಧಿಯು (Premium Paying Term) 5, 10 ಅಥವಾ 15 ವರ್ಷಗಳಾಗಿರಬಹುದು.

ಶೇಕಡಾ 7 ರಷ್ಟು ಗ್ಯಾರಂಟಿ ಎಡಿಷನ್: ಪಾಲಿಸಿಯ ಇಡೀ ಅವಧಿಯುದ್ದಕ್ಕೂ ಪ್ರತಿ ವರ್ಷ, ಪಾವತಿಸಿದ ಒಟ್ಟು ವಾರ್ಷಿಕ ಪ್ರೀಮಿಯಂನ (Total Tabular Annual Premium) ಶೇ. 7 ರ ದರದಲ್ಲಿ ಗ್ಯಾರಂಟಿ ಎಡಿಷನ್‌ಗಳನ್ನು ನೀಡಲಾಗುತ್ತದೆ.

ಪ್ರೀಮಿಯಂ ಮನ್ನಾ ಸೌಲಭ್ಯ: ಪ್ರೀಮಿಯಂ ಪಾವತಿಸುವ ಅವಧಿಯಲ್ಲಿ ದಂಪತಿಗಳಲ್ಲಿ ಮೊದಲ ವ್ಯಕ್ತಿ ಮರಣ ಹೊಂದಿದರೆ, ಉಳಿದ ಅವಧಿಯ ಪ್ರೀಮಿಯಂ ಅನ್ನು ಸಂಪೂರ್ಣವಾಗಿ ಮನ್ನಾ (Premium Waiver Benefit) ಮಾಡಲಾಗುತ್ತದೆ.

ಖರೀದಿಸುವುದು ಹೇಗೆ

ಈ ಯೋಜನೆಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಗ್ರಾಹಕರು ಮಾರಾಟ ಕರಪತ್ರಗಳನ್ನು ಗಮನಿಸಬಹುದು ಅಥವಾ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ (www.licindia.in) ಗೆ ಭೇಟಿ ನೀಡಬಹುದು. ಈ ಯೋಜನೆಗಳನ್ನು ಎಲ್‌ಐಸಿ ಪರವಾನಗಿ ಪಡೆದ ಏಜೆಂಟರು, ಕಾರ್ಪೊರೇಟ್ ಏಜೆಂಟರು, ಬ್ರೋಕರ್‌ಗಳು, ಇನ್ಶೂರೆನ್ಸ್ ಮಾರ್ಕೆಟಿಂಗ್ ಸಂಸ್ಥೆಗಳ ಮೂಲಕ ಆಫ್‌ಲೈನ್ ಆಗಿ ಹಾಗೂ ಎಲ್‌ಐಸಿ ವೆಬ್‌ಸೈಟ್ ಮೂಲಕ ನೇರವಾಗಿ ಆನ್‌ಲೈನ್ ಆಗಿಯೂ ಖರೀದಿಸಬಹುದಾಗಿದೆ. ಗ್ರಾಹಕರು ಈ ಎರಡೂ ಹೊಸ ‘ನ್ಯೂ ಜೀವನ್ ಸಾಥಿ’ ಯೋಜನೆಗಳನ್ನು ಮುಂಬರುವ 2026 ರ ಜೂನ್ 1 ರಿಂದ ಖರೀದಿಸಲು ಲಭ್ಯವಿರಲಿವೆ ಎಂದು ತಿಳಿಸಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅತಿಯಾದ ಇಂಧನ ವೆಚ್ಚ, ದೇಶೀಯ ವಿಮಾನ ಸೇವೆ ಕಡಿತ ಮಾಡಿದ ಏರ್‌ ಇಂಡಿಯಾ
₹175450000000 ಕೋಟಿ ಸಂಪತ್ತಿನಿಂದ ಶೂನ್ಯಕ್ಕೆ ಕುಸಿದ ಕಂಪನಿ! ಸ್ಟಾರ್ಟ್ಅಪ್‌ ಹೀರೋ Byju Raveendran ಗೆ ಏನಾಯ್ತು?