
ಸಾಧನೆ ಮಾಡ್ಬೇಕೆಂದು ಕನಸು ಕಾಣುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಕಷ್ಟಗಳನ್ನು ಎದುರಿಸಿ, ಸಮಸ್ಯೆಯ ಮಧ್ಯೆಯೇ ಮುನ್ನುಗ್ಗಿ ಸಾಧಿಸಿ ತೋರಿಸುವವರ ಸಂಖ್ಯೆ ಅತಿ ವಿರಳ. ಭಾರತದಲ್ಲಿ ಈಗ್ಲೂ ಅನೇಕ ಕಡೆ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯವಿಲ್ಲ. ಮಹಿಳೆ ಸ್ವತಂತ್ರ್ಯವಾಗಿ ದುಡಿಯುತ್ತಾಳೆ ಎಂದಾಗ ಆಕೆಯನ್ನು ಬೆಂಬಲಿಸುವವರ ಸಂಖ್ಯೆ ಕಡಿಮೆಯಿದೆ. ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಸಾಧಿಸಬಹುದು ಎಂಬುದನ್ನು ತೋರಿಸಿದ ಮಹಿಳೆಯರು ನಮ್ಮಲ್ಲಿ ಅನೇಕರಿದ್ದಾರೆ. ಅದ್ರಲ್ಲಿ ಸಮೀಕ್ಷಾ ದಿನೇಶ್ ಕಾಪ್ಕರ್ ಕೂಡ ಸೇರಿದ್ದಾರೆ. ಸುಮೀಕ್ಷಾ ದಿನೇಶ್ ಕಾಪ್ಕರ್ ಯಾರು, ಅವರು ಯಶಸ್ವಿ ಉದ್ಯಮಿಯಾಗಿದ್ದು ಹೇಗೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.
ದೊಡ್ಡ ಕಂಪನಿ (Company) ತೆರೆದು ಸಾವಿರಾರು ಜನರಿಗೆ ಉದ್ಯೋಗ (Employment ) ನೀಡಬೇಕೆಂದೇನಿಲ್ಲ. ನಿಮ್ಮ ಮನೆಯಲ್ಲಿಯೇ ವ್ಯವಹಾರ (Business) ಶುರು ಮಾಡಿ, ಸುತ್ತಮುತ್ತಲಿನವರಿಗೆ ಕೆಲಸ ನೀಡಿ, ಸಾಕಷ್ಟು ಹಣ (Money) ಸಂಪಾದನೆ ಮಾಡ್ಬಹುದು ಎಂಬುದಕ್ಕೆ ಸುಮೀಕ್ಷಾ ದಿನೇಶ್ ಕಾಪ್ಕರ್ ಉದಾಹರಣೆ. ಅವರು ಸೆಣಬಿನ ಚೀಲಗಳನ್ನು ಮಾರಾಟ ಮಾಡಿ ಆದಾಯ ಗಳಿಸ್ತಿದ್ದಾರೆ.
ಸುಮೀಕ್ಷಾ ದಿನೇಶ್ ಕಾಪ್ಕರ್ ಯಾರು? : ಸಮೀಕ್ಷಾ ದಿನೇಶ್ ಕಾಪ್ಕರ್ ಮಹಾರಾಷ್ಟ್ರದ ಸಂಭಾಜಿ ನಗರದ ನಿವಾಸಿ. ಕೊರೊನಾ ಸಮಯದಲ್ಲಿ ಅವರ ಪತಿ ಕೆಲಸ ಕಳೆದುಕೊಂಡ್ರಂತೆ. ಇದ್ರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಿತ್ತಂತೆ. ಈ ಸಂದರ್ಭದಲ್ಲಿ ಜನ್ ಶಿಕ್ಷಣ ಸಂಸ್ಥಾನದಿಂದ ಸೆಣಬಿನ ಚೀಲಗಳನ್ನು ತಯಾರಿಸುವ ಕೋರ್ಸ್ ಮಾಡಿದ ಸಮೀಕ್ಷಾ ಈಗ ಯಶಸ್ವಿ ಉದ್ಯಮಿಯಾಗಿದ್ದಾರೆ.
ವೇಟರ್ ಆಗಿದ್ದ ಮಹಿಳೆ ಇಂದು 105 ಕೋಟಿ ರೂ. ಸಂಪಾದಿಸುವ ಬ್ಲಾಗರ್!
ಏನಿದು ಕೋರ್ಸ್ ? : 2018 ರಲ್ಲಿ ಶಿಕ್ಷಣ ಸಚಿವಾಲಯವು ಜನ್ ಶಿಕ್ಷಣ ಸಂಸ್ಥಾನದ ಯೋಜನೆಯನ್ನು ಪ್ರಾರಂಭಿಸಿತು. ನಂತರ ಅದನ್ನು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯಕ್ಕೆ ವರ್ಗಾಯಿಸಿದೆ. ಈ ಕೋರ್ಸ್‌ನಲ್ಲಿ ಸೆಣಬಿನ ಚೀಲ ತಯಾರಿಕೆ ಬಗ್ಗೆಯೂ ಹೇಳಿಕೊಡಲಾಗುತ್ತದೆ. ಸಮೀಕ್ಷಾ ಇಲ್ಲಿ ಬಹಳಷ್ಟನ್ನು ಕಲಿತಿದ್ದಾರಂತೆ. ಸೆಣಬಿನ ಚೀಲಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಸಣ್ಣ ಅಥವಾ ಭಾರವಾದ ವಸ್ತುಗಳನ್ನು ಸಾಗಿಸಲು ಇದು ಯೋಗ್ಯವಾಗಿದೆ. ಇದನ್ನು ಅನೇಕ ಉದ್ದೇಶಗಳಿಗೆ ಪ್ರತಿದಿನ ಬಳಸಬಹುದು ಎನ್ನುತ್ತಾರೆ ಸಮೀಕ್ಷಾ. ಸಂಭಾಜಿ ನಗರ ಪ್ರದೇಶದಲ್ಲಿ ಸೆಣಬಿನ ಚೀಲ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳು ಲಭ್ಯವಿರಲಿಲ್ಲವಂತೆ. ಹಾಗಾಗಿ ಕೋಲ್ಕತ್ತಾದಿಂದ ಸೆಣಬನ್ನು ತರಿಸಿಕೊಳ್ಳಬೇಕಾಯ್ತಂತೆ. ಇದಕ್ಕೆ ವೆಚ್ಚ ಹೆಚ್ಚು. ಆದ್ರೆ ಕೆಲಸ ಬಿಡದೆ ಮಾಡಿದ್ದರಿಂದ ಈ ಹಂತಕ್ಕೆ ಬಂದಿದ್ದೇನೆ ಎನ್ನುತ್ತಾರೆ ಸಮೀಕ್ಷಾ.
ಸಮೀಕ್ಷಾಗೆ ಸಿಕ್ತು ಕುಟುಂಬದ ಬೆಂಬಲ : ಸ್ವಂತ ಉದ್ಯಮ ಶುರು ಮಾಡ್ತೇನೆಂದು ಎಂದು ಭಾವಿಸಿರಲಿಲ್ಲ ಎನ್ನುವ ಸಮೀಕ್ಷಾಗೆ ಕುಟುಂಬಸ್ಥರ ಸಂಪೂರ್ಣ ಬೆಂಬಲ ಸಿಕ್ಕದೆಯಂತೆ. ಇಬ್ಬರು ಮಕ್ಕಳು ವೆಬ್ಸೈಟ್ ನಲ್ಲಿ ಹೆಸರು ನೋಂದಾಯಿಸಿ ಬ್ಯಾಗ್ ಮಾರಾಟ ಮಾಡುವ ಬಗ್ಗೆ ಮಾಹಿತಿ ನೀಡಿದ್ದರಂತೆ. ಮನೆಯ ಉಳಿದ ಸದಸ್ಯರು ಕೂಡ ಸಹಕಾರಿ ನೀಡಿದ್ದರಂತೆ.
ಯಂತ್ರದ ಬಗ್ಗೆ, ಸೆಣಬಿನ ಬಗ್ಗೆ ಮಾಹಿತಿ ಸರಿಯಾಗಿರಬೇಕು. ವ್ಯಾಪಾರ ಶುರು ಮಾಡಿದ ನಂತ್ರ ಮಾರ್ಕೆಟಿಂಗ್ ಬಗ್ಗೆಯೂ ಜ್ಞಾನ ಇರಬೇಕು ಎನ್ನುತ್ತಾರೆ ಸಮೀಕ್ಷಾ. 700 -800 ಆರ್ಡರ್ ಪಡೆಯುವ ಇವರಿಗೆ ಕಸ್ಟಮೈಸ್ ಆರ್ಡರ್ ಹೆಚ್ಚಾಗಿ ಬರುತ್ತದೆಯಂತೆ. ಅದನ್ನು ಹೆಚ್ಚು ಕಾಳಜಿಯಿಂದ ಮಾಡ್ಬೇಕಾಗುತ್ತದೆ ಎನ್ನುತ್ತಾರೆ ಸಮೀಕ್ಷಾ. ಸಾಲ ಮಾಡಿ ಉದ್ಯಮ ಶುರು ಮಾಡಿದ ಸಮೀಕ್ಷಾ ಪ್ರಕಾರ, ಮಹಿಳೆ ವ್ಯಾಪಾರ ಶುರು ಮಾಡ್ಬೇಕೆಂದ್ರೆ ಆಕೆಗೆ ಯಾರ ಬೆಂಬಲವೂ ಅಗತ್ಯವಿಲ್ಲ. ಕೆಲಸ ಮಾಡಲು ಹಾಗೂ ಅದನ್ನು ಮುಂದುವರಿಸಲು ಆಕೆ ಸಮರ್ಥಳು ಎನ್ನುತ್ತಾರೆ ಸಮೀಕ್ಷಾ.
Business Ideas : ಮನೆ ಮನೆ ಬೆಳಗಿಸಿ ನಿಮ್ಮ ಖಾತೆಯಲ್ಲಿ ಹಣ ಸೇರಿಸಿ
ಆರಂಭದಲ್ಲಿ ಯಂತ್ರದ ಶಬ್ಧ ಅಕ್ಕಪಕ್ಕದವರಿಗೆ ತೊಂದರೆ ನೀಡಿತ್ತಂತೆ. ಈಗ ಎಲ್ಲವೂ ಸರಿಯಾಗಿದೆ ಎನ್ನುತ್ತಾರೆ ಸಮೀಕ್ಷಾ. ಬದಲಾವಣೆಗೆ ತೆರೆದುಕೊಳ್ಳಬೇಕು. ಸಲಹೆ ಪಡೆದು ವ್ಯಾಪಾರ ಶುರು ಮಾಡ್ಬೇಕು. ಸ್ಟಾರ್ಟ್ ಅಪ್ ಗಳು ಯಶಸ್ವಿಯಾಗುತ್ತದೆ. ಆರಂಭದಲ್ಲಿಯೇ ಲಾಭ ನಿರೀಕ್ಷಿಸುವ ಬದಲು ನಿಮ್ಮ ಕೆಲಸ ನೀವು ಮಾಡಿ. ನಮ್ಮನ್ನು ನಾವು ನಂಬಿದ್ರೆ ಎಲ್ಲ ಸಾಧ್ಯ ಎನ್ನುತ್ತಾರೆ ಸಮೀಕ್ಷಾ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.