ಧಂತೇರಸ್ ದಿನ ಚಿನ್ನ ಖರೀದಿಸೋ ಮುನ್ನ ಈ ವಿಷಯಗಳ ಕಡೆ ಇರಲಿ ಗಮನ

By Suvarna News  |  First Published Nov 6, 2023, 1:02 PM IST

ದೀಪಾವಳಿ ಹತ್ತಿರ ಬರ್ತಿದೆ. ಹಬ್ಬದ ತಯಾರಿ ಜೋರಾಗಿ ನಡೆದಿದೆ. ಧನ್ತೇರಸ್ ದಿನ ಬಂಗಾರ ಖರೀದಿಗೆ ಜನರು ಹಣ ಲೆಕ್ಕ ಹಾಕ್ತಿದ್ದಾರೆ. ನೀವೂ ಚಿನ್ನ ಖರೀದಿಗೆ ಮನಸ್ಸು ಮಾಡಿದ್ರೆ ಕೆಲ ವಿಷ್ಯಗಳನ್ನು ಮರೆಯಬೇಡಿ.
 


ದೀಪಾವಳಿಯನ್ನು ಭಾರತದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ದೀಪಾವಳಿ ಹಿಂದುಗಳ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದು. ಮನೆ ತುಂಬ ದೀಪ ಬೆಳಗಿ, ರಂಗೋಲಿ ಹಾಕಿ, ಮನೆಯನ್ನು ಅಲಂಕರಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ, ಪರಸ್ಪರ ಉಡುಗೊರೆ ನೀಡಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿ ಹತ್ತಿರ ಬರ್ತಾ ಇದ್ದು, ಎಲ್ಲೆಡೆ ತಯಾರಿ ಕೂಡ ಜೋರಾಗಿ ನಡೆದಿದೆ. ದೀಪಾವಳಿ ಐದು ದಿನಗಳ ಹಬ್ಬ. ಈ ಐದು ದಿನದಲ್ಲಿ ಒಂದು ದಿನವನ್ನು ಧನ್ತೇರಸ್ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ. 

ಧನ್ತೇರಸ್ (Dhanteras) ದಿನದಂದು ಲೋಹದ ಖರೀದಿಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಲೋಹವನ್ನು ಖರೀದಿ ಮಾಡ್ತಾರೆ. ಚಿನ್ನ – ಬೆಳ್ಳಿ ಖರೀದಿಗೆ ಮಹತ್ವ ನೀಡ್ತಾರೆ. ಧನ್ತೇರಸ್ ದಿನ ಲೋಹಗಳ ಖರೀದಿ ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಧನ್ತೇರಸ್ ಗಾಗಿಯೇ ಚಿನ್ನ (Gold) ದಂಗಡಿಗಳಲ್ಲಿ ವಿಶೇಷ ಕೊಡುಗೆಗಳಿರುತ್ತವೆ. ಆ ದಿನ ನೀವೂ ಚಿನ್ನದ ಆಭರಣ ಅಥವಾ ನಾಣ್ಯ (Coin)  ಖರೀದಿ ಮಾಡುವ ಆಲೋಚನೆ ಮಾಡಿದ್ದರೆ ಚಿನ್ನ ಖರೀದಿಗೆ ಮುನ್ನ ಕೆಲ ಸಂಗತಿಯನ್ನು ತಿಳಿದುಕೊಳ್ಳಿ.

Tap to resize

Latest Videos

ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಕೆಲಸ ಮಾಡಲು ಬಿಲಿಯನೇರ್‌ ಮುಕೇಶ್ ಅಂಬಾನಿ ಪಡೆಯೋ ಸ್ಯಾಲರಿ ಎಷ್ಟ್ ಗೊತ್ತಾ?

ಧನ್ತೇರಸ್ ದಿನ ಚಿನ್ನ ಖರೀದಿ ಮುನ್ನ ಇದು ನೆನಪಿರಲಿ : 

ಶುದ್ಧತೆ (Purity) : ಚಿನ್ನದಲ್ಲೂ ಈಗ ಮೋಸ ನಡೆಯುತ್ತಿದೆ. ಶುದ್ಧವಲ್ಲದ ಚಿನ್ನ ನೀಡಿ ನಿಮಗೆ ಮೋಸ ಮಾಡುವ ಜನರಿದ್ದಾರೆ. ಹಾಗಾಗಿ ಚಿನ್ನ ಖರೀದಿ ಮೊದಲು ನೀವು ಶುದ್ಧತೆಯನ್ನು ಮೊದಲು ಗಮನಿಸಬೇಕು. ಶುದ್ಧತೆಯನ್ನು ಕ್ಯಾರೆಟ್‌ನಲ್ಲಿ ಅಳೆಯಲಾಗುತ್ತದೆ. 24 ಕ್ಯಾರೆಟ್ ಚಿನ್ನವು ಶುದ್ಧವಾಗಿರುತ್ತದೆ. ಆದ್ರೆ ಚಿನ್ನ ಹೆಚ್ಚು ಬಾಳಿಕೆ ಬರಬೇಕು ಎನ್ನುವ ಕಾರಣಕ್ಕೆ  ಚಿನ್ನಕ್ಕೆ ಕೆಲ ಲೋಹಗಳನ್ನು ಬೆರೆಸಲಾಗುತ್ತದೆ. ಹೆಚ್ಚಿನ ಆಭರಣಗಳನ್ನು 22 ಕ್ಯಾರೆಟ್‌ ನಿಂದ ತಯಾರಿಸಲಾಗುತ್ತದೆ. ನೀವು ಯಾವ ಚಿನ್ನ ಖರೀದಿ ಮಾಡಲು ಬಯಸ್ತೀರಿ ಎಂಬುದನ್ನು ಮೊದಲು ನಿರ್ಧರಿಸಿ. ನಂತ್ರ ಆ ಚಿನ್ನ ಶುದ್ಧವಾಗಿದೆಯೇ ಎಂಬುದನ್ನು ಪತ್ತೆ ಮಾಡಿ. ಚಿನ್ನದ ಶುದ್ಧತೆಯನ್ನು, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಹಾಲ್ಮಾರ್ಕ್ ಶುದ್ಧತೆ ಮೂಲಕ ಪತ್ತೆ ಹಚ್ಚಬೇಕು. 

30 ವರ್ಷ ನಂತರ ಕುಂಭದಲ್ಲಿ ಶನಿ,2024 ರಲ್ಲಿಈ ರಾಶಿಗೆ ಜಾಕ್‌ಪಾಟ್‌

ಬೆಲೆಯ ಬಗ್ಗೆ ಜ್ಞಾನವಿರಲಿ : ಚಿನ್ನದ ಬೆಲೆ ಪ್ರತಿ ದಿನ ಬದಲಾಗುತ್ತದೆ. ಒಂದು ನಗರದಿಂದ ಇನ್ನೊಂದು ನಗರಕ್ಕೆ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ. ನೀವು ಚಿನ್ನ ಖರೀದಿಗೆ ಮೊದಲು ಆ ದಿನದ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಪರಿಶೀಲಿಸಿ. ಇಲ್ಲವೆಂದ್ರೆ ನೀವು ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ.

ಬಿಲ್ (Billing) ಹಾಗೂ ವಿಮೆ (Insurance) ಬಗ್ಗೆ ಗಮನವಿರಲಿ : ಚಿನ್ನ ಖರೀದಿ ಮಾಡಿದ ನಂತ್ರ ನೀವು ಬಿಲ್ ಹಾಗೂ ವಿಮೆ ಬಗ್ಗೆಯೂ ಗಮನ ಹರಿಸಬೇಕು. ತೂಕ, ಶುದ್ಧತೆ ಮತ್ತು ಮೇಕಿಂಗ್ ಚಾರ್ಜ್‌ಗಳಂತಹ ವಿಷಯಗಳು ಬಿಲ್ ನಲ್ಲಿ ಇರುವ ಕಾರಣ, ನಿಮಗೆ ಈ ಬಿಲ್ ಅಗತ್ಯವಿರುತ್ತದೆ. ಅಲ್ಲದೆ  ನಿಮ್ಮ ಹೂಡಿಕೆಯನ್ನು ರಕ್ಷಿಸಲು ಚಿನ್ನದ ವಿಮೆ ಪಡೆಯುವುದ ಕೂಡ ಮುಖ್ಯ. ವಿಮಾ ಕಂಪನಿಗಳು ಆಭರಣ ಮತ್ತು ಅಮೂಲ್ಯ ಲೋಹಗಳಿಗಾಗಿ ವಿಮೆ ಪಾಲಿಸಿಯನ್ನು ಹೊಂದಿವೆ.

ಮರಳಿ ಮಾರಾಟದ ಬಗ್ಗೆ ಮಾಹಿತಿ (Resale Value): ನೀವು ಖರೀದಿಸಿದ ಚಿನ್ನವನ್ನು ಮರಳಿ ಮಾರಾಟ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಅಂಗಡಿಯವರು ಈ ಬಗ್ಗೆ ತಮ್ಮದೇ ನಿಯಮ ಹೊಂದಿರುತ್ತಾರೆ. ಅದನ್ನು ಕೇಳಿ ತಿಳಿದುಕೊಳ್ಳಿ. ತುರ್ತು ಪರಿಸ್ಥಿತಿಯಲ್ಲಿ ಚಿನ್ನ ಮಾರಾಟಕ್ಕೆ ಇದು ನೆರವಾಗುತ್ತದೆ.

ಯಾವ ಚಿನ್ನ ಖರೀದಿ? (Quality of Gold) : ಚಿನ್ನ ನಾನಾ ರೀತಿಯಲ್ಲಿ ಲಭ್ಯವಿದೆ. ಆಭರಣ, ನಾಣ್ಯ, ಬಾರ್ ನಲ್ಲಿ ನೀವು ಯಾವ ಪ್ರಕಾರದ ಚಿನ್ನ ಖರೀದಿ ಮಾಡ್ತೀರಿ ಎಂಬುದನ್ನು ಧನ್ತೇರಸ್ ದಿನ ಅಂಗಡಿಗೆ ಹೋಗುವ ಮೊದಲೇ ನಿರ್ಧರಿಸಿಕೊಳ್ಳಿ. 
 

click me!