ಜಿಎಸ್ಟಿ ಸಂಗ್ರಹ: ಗುಜರಾತ್‌ ಹಿಂದಿಕ್ಕಿ ಕರ್ನಾಟಕ ನಂ.2..!

Published : Oct 12, 2022, 06:39 AM IST
ಜಿಎಸ್ಟಿ ಸಂಗ್ರಹ: ಗುಜರಾತ್‌ ಹಿಂದಿಕ್ಕಿ ಕರ್ನಾಟಕ ನಂ.2..!

ಸಾರಾಂಶ

ಆರೇ ತಿಂಗಳಲ್ಲಿ 59035 ಕೋಟಿ ಕಲೆಕ್ಷನ್‌, ಕಳೆದ ವರ್ಷಕ್ಕಿಂತ ಶೇ.60 ಹೆಚ್ಚು ಸಂಗ್ರಹ

ನವದೆಹಲಿ(ಅ.12):  ಪ್ರಸಕ್ತ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ಭರ್ಜರಿ 59,035 ಕೋಟಿ ರು.ನಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹಿಸುವ ಮೂಲಕ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸಿದ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನಕ್ಕೆ ಏರಿದೆ. ಇದರಿಂದಾಗಿ ಈವರೆಗೂ 2ನೇ ಸ್ಥಾನದಲ್ಲಿದ್ದ ಗುಜರಾತ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರೆ, ಮಹಾರಾಷ್ಟ್ರದ ಮೊದಲ ಸ್ಥಾನದ ಹಿರಿಮೆ ಅಬಾಧಿತವಾಗಿ ಮುಂದುವರೆದಿದೆ. ನೇರ ತೆರಿಗೆ ಸಂಗ್ರಹದಲ್ಲಿ ಕರ್ನಾಟದ ರಾಜಧಾನಿ ಬೆಂಗಳೂರು ರಾಜಧಾನಿ ದೆಹಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರಿದ ಸುದ್ದಿಯ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ. ನೇರ ತೆರಿಗೆ ಸಂಗ್ರಹದಲ್ಲಿ ವಾಣಿಜ್ಯ ರಾಜಧಾನಿ ಮುಂಬೈ ಮೊದಲ ಸ್ಥಾನದಲ್ಲಿದೆ.

ಕರ್ನಾಟಕ ನಂ.2:

ಪ್ರಸಕ್ತ ಹಣಕಾಸು ವರ್ಷದ ಮೊದಲ 6 ತಿಂಗಳು ಕಾಲವೂ ಜಿಎಸ್‌ಟಿ ಸಂಗ್ರಹದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಕರ್ನಾಟಕವು ಗುಜರಾತ್‌ ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೆ ಏರಿದೆ. ಮೊದಲ 6 ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 1.32 ಲಕ್ಷ ಕೋಟಿ ರು., ಕರ್ನಾಟಕದಲ್ಲಿ 59,035 ಕೋಟಿ ರು. ಮತ್ತು ಗುಜರಾತ್‌ನಲ್ಲಿ 56,679 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ.

ತೆರಿಗೆದಾರರೇ ಗಮನಿಸಿ, ಅಕ್ಟೋಬರ್ 1ರಿಂದ ಈ ಎರಡು ನಿಯಮಗಳಲ್ಲಿ ಬದಲಾವಣೆ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಶೇ.60ರಷ್ಟುಭರ್ಜರಿ ಏರಿಕೆಯಾಗಿದೆ. ಈ ಏರಿಕೆ ಪ್ರಮಾಣದಲ್ಲಿ ರಾಷ್ಟ್ರೀಯ ಸರಾಸರಿ ಶೇ.44ರಷ್ಟಿದೆ. ಪಟ್ಟಿಯಲ್ಲಿ ಕರ್ನಾಟಕ ಕಳೆದ ವರ್ಷ 3ನೇ ಸ್ಥಾನದಲ್ಲಿತ್ತು.

ಶಿಖಾ ಹರ್ಷ:

ತೆರಿಗೆ ಪಾವತಿಯಲ್ಲಿ ವರ್ತಕರು ನಿಯಮ ಪಾಲಿಸಿದ್ದು ಮತ್ತು ಪಾವತಿ ವ್ಯವಸ್ಥೆ ಮೇಲೆ ಅಧಿಕಾರಿಗಳು ತೀವ್ರ ನಿಗಾ ಇಟ್ಟಿದ್ದು, ತೆರಿಗೆ ಸಂಗ್ರಹದಲ್ಲಿ ಭಾರೀ ಏರಿಕೆಗೆ ಕಾರಣ ಎಂದು ಕರ್ನಾಟಕದ ವಾಣಿಜ್ಯ ತೆರಿಗೆ ಆಯುಕ್ತೆ ಸಿ.ಶಿಖಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಾಪ್‌ 3 ರಾಜ್ಯ

ಮಹಾರಾಷ್ಟ್ರ 132544 ಕೋಟಿ
ಕರ್ನಾಟಕ  59035 ಕೋಟಿ
ಗುಜರಾತ್‌  56679 ಕೋಟಿ
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!