
ಮಲ್ಟಿಫ್ಲೆಕ್ಸ್‌ಗಳು ಸಿನಿಮಾ ಟಿಕೆಟ್ ದರವನ್ನು ಏಕಾಏಕಿ ಹೆಚ್ಚಿಸುತ್ತವೆ. ಇದರಿಂದ ಜನರು ಥಿಯೇಟರ್‌ನತ್ತ ಅಷ್ಟಾಗಿ ಮುಖ ಮಾಡುತ್ತಿಲ್ಲ. ಇದರ ನಿಯಂತ್ರಣ ಮಾಡಬೇಕು ಎಂಬ ಮಾತು ಕೇಳಿಬರುತ್ತಲಿತ್ತು. ಬೇರೆ ರಾಜ್ಯಗಳಲ್ಲಿ ಏಕಮಾತ್ರದ ಟಿಕೆಟ್ ದರ ಇದ್ದರೂ ಕೂಡ, ಕರ್ನಾಟಕದಲ್ಲಿ ಮಾತ್ರ ಯಾವುದೇ ನೀತಿ-ನಿಯಮ ಇರಲಿಲ್ಲ. ಈಗ ಬಜೆಟ್‌ನಲ್ಲಿ ಸಿನಿ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ.
ಸಿನಿಮಾ ಟಿಕೆಟ್ ದರ 200 ರೂಪಾಯಿ!
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 16ನೇ ಬಜೆಟ್ ಮಂಡಿಸಿದ್ದಾರೆ. ಕನ್ನಡ ಚಲನಚಿತ್ರ ಪ್ರೋತ್ಸಾಹಕ್ಕಾಗಿ OTT ವೇದಿಕೆ ಸೃಷ್ಟಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್, ಎಲ್ಲಾ ಚಿತ್ರಮಂದಿರಗಳಲ್ಲಿ 200 ರೂಪಾಯಿ ಟಿಕೆಟ್ ದರ ಫಿಕ್ಸ್ ಮಾಡೋದಾಗಿ ಹೇಳಿದ್ದಾರೆ.
ಸಿನಿಮಾ ಟಿಕೆಟ್ ದರ ಹೆಚ್ಚಾಗಿದ್ದಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಯ್ತ? | K Manju | Vishnu Priya Movie
ಈ ಹಿಂದೆ ಬಜೆಟ್‌ನಲ್ಲಿ ಘೋಷಣೆಯಾಗಿದ್ರು ಯಾಕೆ ಜಾರಿ ಆಗಲಿಲ್ಲ?
ಈ ಬಗ್ಗೆ ಗೃಹಸಚಿವ ಜಿ ಪರಮೇಶ್ವರ್ ಮಾತನಾಡಿ, "ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರ ನಿಗದಿ ಮಾಡುವ ಅಧಿಕಾರವನ್ನು ಥಿಯೇಟರ್ ಮಾಲೀಕರಿಗೆ ನೀಡಲಾಗಿದೆ. ದರವನ್ನು ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೂ ಇದೆ. ಅಗತ್ಯ ಬಿದ್ದರೆ ಅದನ್ನು ಬಳಸಲೂಬಹುದು. 2018ರ ಬಜೆಟ್‌ನಲ್ಲಿ ಏಕರೂಪ ದರ ಜಾರಿ ಮಾಡೋದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಆಮೇಲೆ 2018ರ ಅಧಿಸೂಚನೆಯೂ ಬಂದಿತ್ತು” ಎಂದು ಹೇಳಿದ್ದಾರೆ.
ಈಗೀಗ ಮಧ್ಯರಾತ್ರಿ ಗುಡ್‌ನೈಟ್ ಮೆಸೇಜ್ ಬಂದರೂ ಬೆಚ್ಚಿ ಬೀಳ್ತೀನಿ: ಕಿಚ್ಚ ಸುದೀಪ್ ಮನದಾಳದ ಮಾತು
ಯಾಕೆ ಏಕಮಾತ್ರದ ಟಿಕೆಟ್ ದರ ಫಿಕ್ಸ್ ಮಾಡಬೇಕು?
“ಕರ್ನಾಟಕ ರಾಜ್ಯದಲ್ಲಿ 200 ರೂಪಾಯಿ ನಿಗದಿ ಮಾಡಿದ್ದರು. ಆದರೆ ಥಿಯೇಟರ್ ಮಾಲೀಕರು ಕೋರ್ಟ್‌ಗೆ ಹೋಗಿ ತಡೆ ತಂದಿದ್ದರು. ಆಮೇಲೆ ಸರ್ಕಾರ ಆ ಆದೇಶ ವಾಪಾಸ್ ಪಡೆಯಿತು. ಆದರೆ ಈಗ ಮತ್ತೆ ಆ ರೀತಿ ಕ್ರಮ ಕೈಗೊಳ್ಳಬೇಕಿದೆ. 100-150 ಸೀಟ್ ಇರುವ ಮಲ್ಟಿಫ್ಲೆಕ್ಸ್‌ಗಳ ಟಿಕೆಟ್ ಬೆಲೆ ಜಾಸ್ತಿ ಇರುತ್ತದೆ. ಅಲ್ಲಿ ಸಿಗುವ ತಿಂಡಿ-ತಿನಿಸು, ನೀರಿನ ಬೆಲೆ ಕೂಡ ಸಿಕ್ಕಾಪಟ್ಟೆ ಇರುತ್ತದೆ. ಹೀಗಾಗಿ ಇದನ್ನೆಲ್ಲ ನಿಯಂತ್ರಣ ಮಾಡಬೇಕಿದೆ" ಎಂದು ಅವರು ಮಾಧ್ಯಮದ ಮುಂದೆ ಹೇಳಿದ್ದರು.
ರಾಜ್ಯದಲ್ಲಿ 650 ಥಿಯೇಟರ್‌ಇದೆ, ಈಗಾಗಲೇ 100 ಥಿಯೇಟರ್ ಮುಚ್ಚಿದೆ. 150 ಥಿಯೇಟರ್‌ಮುಚ್ಚುವ ಸ್ಥಿತಿಯಲ್ಲಿದೆ.
RRR ಮೊದಲ ದಿನದ ಕಲೆಕ್ಷನ್ ರು.200- ರು.250 ಕೋಟಿ!
ಅತಿಯಾದ ಟಿಕೆಟ್ ದರದಿಂದ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ವಾ?
ಅಂದಹಾಗೆ ಬೇರೆ ಭಾಷೆಯ ಸಿನಿಮಾಗಳು ರಾಜ್ಯದಲ್ಲಿ ರಿಲೀಸ್ ಆದಾಗ ಮಲ್ಟಿಫ್ಲೆಕ್ಸ್‌ಗಳು ಒಂದು ಟಿಕೆಟ್‌ಗೆ ಸಾವಿರಕ್ಕೂ ಅಧಿಕ ರೂಪಾಯಿ ನಿಗದಿ ಮಾಡಿದ ಉದಾಹರಣೆ ಕೂಡ ಸಾಕಷ್ಟಿದೆ. ಸ್ಟಾರ್ ಸಿನಿಮಾಗಳ ಟಿಕೆಟ್ ದರ ಜಾಸ್ತಿ ಆಗಿದೆ ಎಂದು ಸಿನಿ ಪ್ರಿಯರು ಈಗ ಒಟಿಟಿಗೆ ಬಂದಮೇಲೆ ಸಿನಿಮಾ ನೋಡೋಣ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ. ಸಿನಿಮಾ ಟಿಕೆಟ್ ದರ ಜೊತೆಗೆ ತಿಂಡಿ-ತಿನಿಸಿನ ದರ, ವಾಹನ ಪಾರ್ಕಿಂಗ್ ಸೇರಿ ಅಧಿಕ ಹಣ ಖರ್ಚಾಗುವುದು. ಈ ಕಾರಣದಿಂದಲೂ ಜನರು ಥಿಯೇಟರ್‌ನತ್ತ ಮುಖ ಮಾಡೋದು ಕಮ್ಮಿ ಮಾಡುತ್ತಿದ್ದಾರೆ ಎನ್ನಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.