ಮೈಸೂರಿಗೆ ಬಂಪರ್ ಕೊಡುಗೆ ಕೊಟ್ಟ ಸಿಎಂ ಸಿದ್ದರಾಮಯ್ಯ; ಆದ್ರೆ, ಬಾದಾಮಿ ಕ್ಷೇತ್ರವನ್ನೇ ಮರೆತುಬಿಟ್ರಾ?

By Sathish Kumar KH  |  First Published Feb 16, 2024, 2:48 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆ ಮೈಸೂರಿಗೆ ಭರ್ಜರಿ ಕೊಡುಗೆಗಳನ್ನು ನೀಡಿದ್ದಾರೆ. ಆದರೆ, ತಮಗೆ ರಾಜಕೀಯ ಜೀವನದ ಉಳಿವಿಗೆ ಕಾರಣವಾದ ಬಾದಾಮಿ ಕ್ಷೇತ್ರಕ್ಕೆ ಕೊಡುಗೆ ನೀಡುವುದನ್ನೇ ಮರೆತುಬಿಟ್ಟಿದ್ದಾರೆ.


ಬೆಂಗಳೂರು (ಫೆ.16): ಮುಖ್ಯಮಂತ್ರಿ ಸಿದ್ದರಾಮಯ್ಯ 2024ರ ಕರ್ನಾಟಕ ಬಜೆಟ್‌ನಲ್ಲಿ ತಮ್ಮ ತವರು ಜಿಲ್ಲೆ ಮೈಸೂರಿಗೆ ಭರ್ಜರಿ ಕೊಡುಗೆಯನ್ನು ನೀಡಿದ್ದಾರೆ. ಆದರೆ, ತಮಗೆ ಕಷ್ಟಕಾಲದಲ್ಲಿ ಕೈ ಹಿಡಿದು ರಾಜಕೀಯ ಜೀವನ ಉಳಿಸಿದ್ದ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರವನ್ನೇ ಮರೆತಂತೆ ಕಾಣುತ್ತಿದೆ. ಮೈಸೂರಿಗೆ ಕೊಟ್ಟ ಕೊಡುಗೆ ಶೇ.50ರಷ್ಟು ಯೋಜನೆಗಳನ್ನು ಬಾಗಲಕೋಟೆಗೆ ನೀಡಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆ ಮೈಸೂರು ಜಿಲ್ಲೆಗೆ ಭರ್ಜರಿ ಕೊಡುಗೆಯನ್ನು ನೀಡಿದ್ದಾರೆ. ನೀರಾವರಿ ಯೋಜನೆ, ಮೂಲ ಸೌಕರ್ಯ, ಶಾಲಾ-ಕಾಲೇಜುಗಳ ಅಭಿವೃದ್ಧಿ, ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವುದು ಸೇರಿ ಹಲವು ಅಭಿವೃದ್ಧಿ ಯೋಜನೆಗಳನ್ನು ಕೊಡುಗೆ ನೀಡಿದ್ದಾರೆ. ಇದರಲ್ಲಿ ಮೈಸೂರು ನಗರದ ಅಭಿವೃದ್ಧ ಹಾಗೂ ಜಿಲ್ಲೆಯ ಜನತೆಗೆ ಅನುಕೂಲಕರ ಯೋಜನೆಗಳನ್ನು ನೀಡಿದ್ದಾರೆ. ಈ ಮೂಲಕ ತಮ್ಮನ್ನು ಆಯ್ಕೆ ಮಾಡಿದ ಜಿಲ್ಲೆಯ ಜನತೆಗೆ ಋಣ ತೀರಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ.

Latest Videos

undefined

ಕರ್ನಾಟಕ ಬಜೆಟ್ 2024: ಕೃಷಿ ಸಂಬಂಧಿತ ಎಲ್ಲ ಇಲಾಖೆಗಳ ಸಮನ್ವಯಕ್ಕೆ'ಕೃಷಿ ಅಭಿವೃದ್ಧಿ ಪ್ರಾಧಿಕಾರ' ರಚನೆ

ತವರು ಜಿಲ್ಲೆ ಮೈಸೂರಿಗೆ ಸಿಎಂ ಕೊಡುಗೆ ಏನು?

  • - ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ -54 ಕೋಟಿ ರೂ. ಅನುದಾನ
  • - ಮಹಾರಾಣಿ ವಾಣಿಜ್ಯ/ಕಲಾ ಕಾಲೇಜು ಹಾಸ್ಟೆಲ್ ನಿರ್ಮಾಣ -116 ಕೋಟಿ ರೂ. ಅನುದಾನ
  • - ಮೈಸೂರು ನಗರಕ್ಕೆ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ
  • - ಮೈಸೂರು ಹೊರವಲಯದ ಜಂಕ್ಷನ್ ನಲ್ಲಿ ಮೆರಲ್ಸೇತುವೆಗಳ ನಿರ್ಮಾಣ
  • - ಕುಕ್ಕರಹಳ್ಳಿ -ಕೆಆರೆಸ್ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ
  • - ಮೈಸೂರಿನಲ್ಲಿ ಬಯೋಸಿಎನ್‌ಜಿ ಘಟಕ ನಿರ್ಮಾಣ
  • - ಮೈಸೂರು ವಿಭಾಗದಲ್ಲಿ ನೂತನ ಜವಳಿ ಪಾರ್ಕ್ ನಿರ್ಮಾಣ
  • - ಮೈಸೂರಿನ ವಕೀಲರ ಭವನ ಪೂರ್ಣ ಭರವಸೆ
  • - ಕೆಆರ್ ನಗರದ ಕೆಸ್ತೂರು ಕೊಪ್ಪಲು ಏತ ನೀರಾವರಿ ಯೋಜನೆ
  • - ನಂಜನಗೂಡು-ದೇವನೂರು ಏತ ನೀರಾವರಿ ಯೋಜನೆ
  • - ಹುಣಸೂರಿನ ಮರದೂರು ನಾಲಾ ಅಭಿವೃದ್ಧಿ
  • - ಮೈಸೂರಿನ ನೆಪ್ರೋ ಯೂರಾಲಜಿ ಆಸ್ಪತ್ರೆ ಉನ್ನತೀಕರಣ, 40 ಬೆಡ್ ಗಳಿಂದ 100 ಬೆಡ್ ಗಳ ಹೆಚ್ಚಳ
  • - ಮೈಸೂರಿನಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಹೊಸ ಘಟಕ
  • - ಕೆ.ಆರ್. ಆಸ್ಪತ್ರೆ ಆವರಣದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೊರ ರೋಗಿಗಳ ವಿಭಾಗ ಆರಂಭ

ರಾಜಕೀಯ ಜೀವನ ಉಳಿಸಿದ ಬಾದಾಮಿ ಕ್ಷೇತ್ರ:
ಕಳೆದ ವಿಧಾನಸಭಾ ಚುನಾವಣೆ ವೇಳೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವುದು ಖಚಿತವಾದ ಬೆನ್ನಲ್ಲಿಯೇ ಮತ್ತೊಂದು ಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. 5 ವರ್ಷಗಳ ಕಾಲ ರಾಜಕೀಯ ಜೀವನ ಕೊಟ್ಟ ಬಾದಾಮಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದೊಡನೆ ಮರೆತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮಾಜಿ ಕ್ಷೇತ್ರಕ್ಕೆ ಈ ಬಾರಿ ಯೋಜನೆಗಳನ್ನೇ ಕೊಟ್ಟಿಲ್ಲ. 

ರಾಜ್ಯದಲ್ಲಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿಗೆ ಗ್ರೀನ್ ಸಿಗ್ನಲ್; ಆದರ್ಶ ವಿದ್ಯಾಲಯಗಳಲ್ಲಿ ಪಿಯು ಕಾಲೇಜು ಆರಂಭ

ಬಾಗಲಕೋಟೆ ಜಿಲ್ಲೆಗೆ ಕೊಟ್ಟ ಬೆರಳೆಣಿಕೆ ಕೊಡುಗೆಗಳು:  

  • ಬಾಗಲಕೋಟೆ ಜಿಲ್ಲೆಯ ಮೆಳ್ಳಿಗೇರಿ-ಹಲಗಲಿ, ಸಸಾಲಟ್ಟಿ ಶಿವಲಿಂಗೇಶ್ವರ, ಶಿರೂರು, ಹನವಾಳ ಏತ ನೀರಾವರಿ ಯೋಜನೆಗಳ ಅನುಷ್ಠಾನ.
  • ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (ಐಪಿಹೆಚ್‌ಎಲ್) ಸ್ಥಾಪನೆ.
  • ಐಹೊಳೆಯಲ್ಲಿ ಸುಸಜ್ಜಿತ ಹೋಟೆಲ್ ನಿರ್ಮಾಣ.
  • ರೋರಿಚ್ ಹಾಗೂ ದೇವಿಕಾರಾಣಿ ಎಸ್ಟೇಟ್‌ನಲ್ಲಿ ಮೂಲಸೌಕರ್ಯ ಒದಗಿಸುವುದು.
click me!