3 ಲಕ್ಷ 71 ಸಾವಿರ ಕೋಟಿ ಗಾತ್ರದ ಬಜೆಟ್‌ ಮಂಡನೆ, ಸಾಲ ಎಷ್ಟು? ಸ್ವೀಕೃತಿಗಳೆಷ್ಟು?

By Suvarna News  |  First Published Feb 16, 2024, 10:43 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ 15ನೇ ಆಯ-ವ್ಯಯ ಮಂಡನೆ ಮಾಡಿದ್ದು, ಕರ್ನಾಟಕ ಬಜೆಟ್‌ 2024-2025ರ ಗಾತ್ರ  3 ಲಕ್ಷ 71 ಸಾವಿರದ 383 ಕೋಟಿ  ಎಂದು ತಿಳಿಸಿದ್ದಾರೆ. ಇದು 2023ರಲ್ಲಿ ಸಿದ್ದರಾಮಯ್ಯ ಮಂಡಿಸಿದ 3.27 ಲಕ್ಷ ಕೋಟಿಗಿಂತ ದೊಡ್ಡದಾಗಿದೆ.


ಬೆಂಗಳೂರು (ಫೆ.16): ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ 15ನೇ ಆಯ-ವ್ಯಯ ಮಂಡನೆ ಮಾಡಿದ್ದು, ಕರ್ನಾಟಕ ಬಜೆಟ್‌ 2024-2025ರ ಗಾತ್ರ  3 ಲಕ್ಷ 71 ಸಾವಿರದ 383 ಕೋಟಿ  ಎಂದು ತಿಳಿಸಿದ್ದಾರೆ. ಇದು 2023ರಲ್ಲಿ ಸಿದ್ದರಾಮಯ್ಯ ಮಂಡಿಸಿದ 3.27 ಲಕ್ಷ ಕೋಟಿಗಿಂತ ದೊಡ್ಡದಾಗಿದೆ. 2024-25ರ ಆಯವ್ಯಯದಲ್ಲಿ ಒಟ್ಟು 3,68,674 ಕೋಟಿ ರೂ.ಗಳ ಸ್ವೀಕೃತಿಯನ್ನು ಅಂದಾಜು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕ ಬಜೆಟ್ ಲೈವ ಬ್ಲಾಗ್

Tap to resize

Latest Videos

undefined

2024-25ನೇ ಸಾಲಿನಲ್ಲಿ ಒಟ್ಟು 2,90,531 ಕೋಟಿ ರೂ.ಗಳ ರಾಜಸ್ವ ವೆಚ್ಚ, 55,877 ಕೋಟಿ ರೂ.ಗಳ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 24,974 ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡು, ಒಟ್ಟು ಬಜೆಟ್‌  ವೆಚ್ಚವು 3,71,383 ಕೋಟಿ ರೂ.ಗಳಾಗುತ್ತದೆಂದು ಸಿದ್ದರಾಮಯ್ಯ ತನ್ನ ಮಂಡನೆಯಲ್ಲಿ ತಿಳಿಸಿದ್ದಾರೆ.

2024-25ರಲ್ಲಿ ರಾಜಸ್ವ ಕೊರತೆ 27,354 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. ವಿತ್ತೀಯ ಕೊರತೆ 82,981 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದ್ದು, ರಾಜ್ಯದ ಜಿ.ಎಸ್.ಡಿ.ಪಿಯ ಶೇ.2.95ರಷ್ಟಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಯು 2024-25ರ ಅಂತ್ಯಕ್ಕೆ 6,65,095 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಜಿ.ಎಸ್.ಡಿ.ಪಿಯ  23.680 ತಲುಪಲಿದೆ ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.

ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ..?
 
* ಶಿಕ್ಷಣ - 44,422 ಕೋಟಿ
* ಮಹಿಳಾ ಮತ್ತು ಮಕ್ಕಳ ಕಲ್ಯಾಣ - 34,406 ಕೋಟಿ
* ಇಂಧನ - 23, 159 ಕೋಟಿ
* ಗ್ರಾಮೀಣಾಭಿವೃದ್ಧಿ ಪಂಚಾಯರ್ ರಾಜ್ - 21,160 ಕೋಟಿ
* ಒಳಾಡಳಿತ ಮತ್ತು ಸಾರಿಗೆ- 19,777 ಕೋಟಿ
* ನೀರಾವರಿ - 19,179 ಕೋಟಿ
* ನಗರಾಭಿವೃದ್ಧಿ ಮತ್ತು ವಸತಿ - 18,155 ಕೋಟಿ
* ಕಂದಾಯ - 16,170 ಕೋಟಿ
* ಆರೋಗ್ಯ - 15,145 ಕೋಟಿ
* ಸಮಾಜ ಕಲ್ಯಾಣ - 13,334 ಕೋಟಿ
* ಲೋಪಯೋಗಿ - 10,424 ಕೋಟಿ
* ಆಹಾರ ಮತ್ತು ನಾಗರೀಕ ಸರಬರಾಜು - 9,963 ಕೋಟಿ
* ಕೃಷಿ ಮತ್ತು ತೋಟಗಾರಿಕೆ - 6688 ಕೋಟಿ
* ಪಶುಸಂಗೋಪನೆ ಮತ್ತು ಮೀನುಗಾರಿಕೆ - 3307 ಕೋಟಿ
* ಇತರೆ - 1,24,593 ಕೋಟಿ

click me!