
ಮುಕೇಶ್ ಅಂಬಾನಿಯವರ ಇ-ಕಾಮರ್ಸ್ ಸಂಸ್ಥೆ ಜಿಯೋಮಾರ್ಟ್ 2023 ರ ಹಬ್ಬದ ಋತುವಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಹಬ್ಬದ ಸಂದರ್ಭದಲ್ಲಿ ಇ-ಕಾಮರ್ಸ್ ಮಾರಾಟದಲ್ಲಿ 90,000 ಕೋಟಿ ರೂಪಾಯಿಗಳನ್ನು ತಲುಪುವ ನಿರೀಕ್ಷೆಯೊಂದಿಗೆ, ರಿಲಯನ್ಸ್ ರಿಟೇಲ್ ಆರ್ಮ್ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕ್ರಿಕೆಟರ್ ಎಂಎಸ್ ಧೋನಿ ಅವರನ್ನು ಆಯ್ಕೆ ಮಾಡಿದೆ. ಭಾರತವು 2023 ರ ODI ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವ ಸಂದರ್ಭದಲ್ಲಿ ಧೋನಿಯನ್ನು ಅಂಬಾಸಿಡರ್ ಆಗಿ ಆಯ್ಕೆ ಮಾಡಿದ್ದು, ರಿಲಯನ್ಸ್ ತನ್ನ ಪ್ರತಿಸ್ಪರ್ಧಿಳಿಗೆ ಟಕ್ಕರ್ ಕೊಡಲು ಮುಂದಾಗಿದೆ
ಧೋನಿ ಹೊಸ ಹುರುಪಿನೊಂದಿಗೆ ತಮ್ಮ ಪ್ರೀತಿಪಾತ್ರರ ಜೊತೆ ಸಂತೋಷ, ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಎಲ್ಲಾ ಕ್ಷಣಗಳನ್ನು ಆಚರಿಸಲು ನಿರ್ಧರಿಸಿದ್ದಾರೆ ಎಂದು ಮುಖೇಶ್ ಅಂಬಾನಿ ಕಂಪನಿ ಹೇಳಿದೆ.
ಇಶಾ ಅಂಬಾನಿ ಅತ್ತಿಗೆ ಬ್ರಿಲಿಯೆಂಟ್ ಮಹಿಳಾ ಉದ್ಯಮಿ,
ಭಾರತದ ಇ-ಕಾಮರ್ಸ್ ವಲಯದಲ್ಲಿ ಹಬ್ಬದ ಋತುವಿನ ಒಟ್ಟು ವ್ಯಾಪಾರದ ಮೌಲ್ಯವು (GMV) ಕಳೆದ ವರ್ಷ 76,000 ಕೋಟಿ ಇತ್ತು ಈಗ 2023 ರಲ್ಲಿ 90,000 ಕೋಟಿಗೆ ತಲುಪಲು ಮುಂದಾಗಿದ್ದು, ಸುಮಾರು 20 ಪ್ರತಿಶತದಷ್ಟು ಬೆಳೆಯುತ್ತದೆ ಎಂದು ಸಲಹಾ ಸಂಸ್ಥೆ ರೆಡ್‌ಸೀರ್ ಹೇಳಿದೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಈ ವಿಭಾಗದಲ್ಲಿ ಎರಡು ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದು, ಏಷ್ಯಾದ ಶ್ರೀಮಂತ ವ್ಯಕ್ತಿ ಅಂಬಾನಿ ಇ-ಕಾಮರ್ಸ್ ಕಂಪನಿಯು ಸೆಲೆಬ್ರಿಟಿ ಅಸೋಸಿಯೇಷನ್‌ನೊಂದಿಗೆ ಮಿಕ್ಕ ಮಾರಾಟಗಾರರಿಗೆ ಟಕ್ಕರ್ ನೀಡಲು ಮುಂದಾಗಿದೆ.
ಜಿಯೋಮಾರ್ಟ್ ತನ್ನ ಹಬ್ಬದ ಪ್ರಚಾರವನ್ನು ಜಿಯೋಉತ್ಸವ್, ಸೆಲೆಬ್ರೇಷನ್ಸ್ ಆಫ್ ಇಂಡಿಯಾಗೆ ಮರುಬ್ರಾಂಡ್ ಮಾಡುವುದರಿಂದ ಧೋನಿ 45 ಸೆಕೆಂಡುಗಳ ಪ್ರಚಾರ ಜಾಹೀರಾತಿನಲ್ಲಿ ಕೇಂದ್ರ ಬಿಂದುವಾಗಿದ್ದಾರೆ ಎಂದು ರಿಲಯನ್ಸ್ ರಿಟೇಲ್ ಪತ್ರಿಕಾ ಪ್ರಕಟಣೆ ತಿಳಿಸಿದೆ. ಧೋನಿ ಅವರ ಜಾಹೀರಾತು ಅಕ್ಟೋಬರ್ 8 ರಂದು ನೇರಪ್ರಸಾರದಲ್ಲಿದೆ.
ಅಂಬಾನಿ ಭಾವೀ ಸೊಸೆ ರಾಧಿಕಾ ಮರ್ಚೆಂಟ್ ಸಹೋದರಿ ಕೂಡ
ಭಾರತದಲ್ಲಿ ಅತಿ ದೊಡ್ಡ ಸ್ವದೇಶಿ-ಬೆಳೆದ ಇ-ಮಾರುಕಟ್ಟೆಯಾಗಿ ಹೊಮ್ಮಲು ಜಿಯೋಮಾರ್ಟ್ ಗುರಿ ಹೊಂದಿದೆ. ಕಂಪನಿಯು ಕಳೆದ ವರ್ಷ ಪ್ಲಾಟ್‌ಫಾರ್ಮ್‌ಗೆ ಅರ್ಬನ್ ಲ್ಯಾಡರ್, ರಿಲಯನ್ಸ್ ಟ್ರೆಂಡ್ಸ್, ರಿಲಯನ್ಸ್ ಜುವೆಲ್ಸ್ ಮತ್ತು ಹ್ಯಾಮ್ಲೀಸ್‌ನಂತಹ ರಿಲಯನ್ಸ್-ಮಾಲೀಕತ್ವದ ಬ್ರ್ಯಾಂಡ್‌ಗಳನ್ನು ತರುವ ಮೂಲಕ ತನ್ನ ಕೊಡುಗೆಯನ್ನು ವಿಸ್ತರಿಸಿತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.