7.5 ಲಕ್ಷ ಕೋಟಿ ರು ದಾನ: ಜೆಮ್‌ಶೆಡ್‌ ಜೀ ವಿಶ್ವ ನಂ.1

Published : Jun 24, 2021, 10:16 AM ISTUpdated : Jun 24, 2021, 11:25 AM IST
7.5 ಲಕ್ಷ ಕೋಟಿ ರು ದಾನ: ಜೆಮ್‌ಶೆಡ್‌ ಜೀ ವಿಶ್ವ ನಂ.1

ಸಾರಾಂಶ

7.5 ಲಕ್ಷ ಕೋಟಿ ರು ದಾನ: ಜೆಮ್‌ಶೆಡ್‌ ಜೀ ವಿಶ್ವ ನಂ.1 ಶತಮಾನಗಳಿಂದ ನಡೆದು ಬಂದ ದಾನ  

ಮುಂಬೈ(ಜೂ.24): ವಿಶ್ವದ ಅತಿದೊಡ್ಡ ದಾನಿಗಳ ಪಟ್ಟಿಬಂದಾಗಲೆಲ್ಲಾ ಕೆಲ ವಿದೇಶಿ ಎನ್‌ಜಿಒಗಳು ಮತ್ತು ಉದ್ಯಮಿಗಳು ಹೆಸರು ಕೇಳಿಬರುವುದೇ ಹೆಚ್ಚು. ಆದರೆ ಹುರೂನ್‌ ಮತ್ತು ಎಡೆಲ್‌ಗೀವ್‌ ಫೌಂಡೇಷನ್‌ ಸಿದ್ಧಪಡಿಸಿರುವ ಶತಮಾನದ ಅತಿದೊಡ್ಡ ದಾನಿಗಳ ಪೈಕಿ, ಟಾಟಾ ಸಮೂಹದ ಸಂಸ್ಥಾಪಕರಾದ ಜೆಮ್‌ಶೆಡ್‌ ಜೀ ಟಾಟಾ ವಿಶ್ವದಲ್ಲೇ ನಂ.1 ಆಗಿ ಹೊರಹೊಮ್ಮಿದ್ದಾರೆ.

ಅಮೆರಿಕ ಮತ್ತು ಯುರೋಪ್‌ನ ಹಲವು ಉದ್ಯಮಗಳು ಇತ್ತೀಚಿನ ದಶಕಗಳಲ್ಲಿ ದಾನದ ಕೆಲಸಕ್ಕೆ ಮುಂದಾಗಿವೆ. ಆದರೆ ಟಾಟಾ ಸಂಸ್ಥೆಯನ್ನು ಹುಟ್ಟುಹಾಕಿದ್ದ ಜೆಮ್‌ಶೆಡ್‌ ಜೀ ಟಾಟಾ ಅವರು 1892ರಲ್ಲೇ ಅವರು ಇಂಥ ದಾನದ ಕೆಲಸ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೆ ಟಾಟಾ ಸಮೂಹವು ಶಿಕ್ಷಣ, ಆರೋಗ್ಯ ಮತ್ತಿತರೆ ವಲಯಕ್ಕೆ ನೀಡಿರುವ ದಾನದ ಮೊತ್ತ 7.2 ಲಕ್ಷ ಕೋಟಿಗೂ. ಹೆಚ್ಚು. ಈ ಮೂಲಕ ಅದು ವಾರನ್‌ ಬಫೆಟ್‌ ಸೇರಿದಂತೆ ಇನ್ನಿತರ ವಿಶ್ವದ ಬೃಹತ್‌ ಕಂಪನಿಗಳಿಗಿಂತಲೂ ಮುಂದಿದೆ ಎಂದು ವಿಶ್ವದ 50 ಅತಿದೊಡ್ಡ ದಾನಿಗಳ ಕಂಪನಿಗಳ ವರದಿಯಲ್ಲಿ ಹೇಳಲಾಗಿದೆ.

ವರದಿ ಅನ್ವಯಬಿಲ್‌ಗೇಟ್ಸ್‌ ಮತ್ತು ಅವರ ವಿಚ್ಛೇದಿತ ಪತ್ನಿ ಮೆಲಿಂದಾ ಸಂಸ್ಥೆಯು 5.5 ಲಕ್ಷ ಕೋಟಿ (74.6 ಬಿಲಿಯನ್‌ ಡಾಲರ್‌), ವಾರನ್‌ ಬಫೆಟ್‌ 2.7 ಲಕ್ಷ ಕೋಟಿ (37.4 ಬಿಲಿಯನ್‌ ಡಾಲರ್‌), ಜಾಜ್‌ರ್‍ ಸೋರಸ್‌ 2.5 ಲಕ್ಷ ಕೋಟಿ (34.8 ಬಿಲಿಯನ್‌ ಡಾಲರ್‌) ಮತ್ತು ಜಾನ್‌ ಡಿ ರಾಕ್‌ಫೆಲ್ಲರ್‌ 1.9 ಲಕ್ಷ ಕೋಟಿ (26.8 ಬಿಲಿಯನ್‌ ಡಾಲರ್‌) ನೀಡಿವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಮದುವೆ ವ್ಲಾಗ್ ಪೋಸ್ಟ್ ಮಾಡಿ ಕೋಟಿ ಬಾಚಿಕೊಂಡ ವ್ಲಾಗರ್