ಲೋಧಾ ಗ್ರೂಪ್‌ನ ಎಂಡಿ ಮತ್ತು ಸಿಇಒ ಅಭಿಷೇಕ್ ಲೋಧಾ ಅವರು ಟಾಟಾ ಕುಟುಂಬವು ಒಂದು ಶತಮಾನದ ಹಿಂದೆ ಟಾಟಾ ಟ್ರಸ್ಟ್‌ಗಳಿಗೆ ತಮ್ಮ ವ್ಯವಹಾರದಲ್ಲಿ ತಮ್ಮ ಷೇರುಗಳ ಬಹುಭಾಗವನ್ನು ನೀಡುವ ನಿರ್ಧಾರ ಮಾಡಿದ್ದರು. ಅವರ ನಿರ್ಧಾರವೇ ನಮಗೆ ಸ್ಫೂರ್ತಿ ಎಂದು ಉಲ್ಲೇಖಿಸಿದ್ದಾರೆ.
ಮುಂಬೈ (ಅ.29): ಲೋಧಾ ಗ್ರೂಪ್‌ನ ಪ್ರಮೋಟರ್‌ಗಳು ಮ್ಯಾಕ್ರೋಟೆಕ್ ಡೆವಲಪರ್‌ಗಳಲ್ಲಿನ ತಮ್ಮ ಷೇರುಗಳು ಮಹತ್ವದ ಭಾಗವನ್ನು ತನ್ನದೇ ಆದ ಲಾಭೋದ್ದೇಶವಿಲ್ಲದ ಘಟಕ ಲೋಧಾ ಫಿಲಾಂತ್ರಪಿ ಫೌಂಡೇಶನ್‌ಗೆ ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಿದೆ. ಆರಂಭಿಕ ಹಂತವಾಗಿ 20 ಸಾವಿರ ಕೋಟಿ ಅಥವಾ 2.5 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಷೇರುಗಳನ್ನು ಲೋಧಾ ಫಿಲಾಂತ್ರಪಿ ಫೌಂಡೇಷನ್‌ಗೆ ನೀಡುವುದಾಗಿ ಘೋಷಿಸಿದೆ. ಆ ಮೂಲಕ ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿರುವ ರಿಯಲ್ ಎಸ್ಟೇಟ್ ಕಂಪನಿಯ ಅತಿದೊಡ್ಡ ಷೇರುದಾರರನ್ನಾಗಿ ಮಾಡಲಿದೆ. ಲೋಧಾ ಗ್ರೂಪ್‌ನ ಎಂಡಿ ಮತ್ತು ಸಿಇಒ ಅಭಿಷೇಕ್ ಲೋಧಾ ಅವರು ಟಾಟಾ ಕುಟುಂಬವು ಒಂದು ಶತಮಾನದ ಹಿಂದೆ ಟಾಟಾ ಟ್ರಸ್ಟ್‌ಗಳಿಗೆ ತಮ್ಮ ವ್ಯವಹಾರದಲ್ಲಿ ತಮ್ಮ ಷೇರುಗಳ ಬಹುಭಾಗವನ್ನು ನೀಡುವ ನಿರ್ಧಾರ ಮಾಡಿದ್ದರು. ನನ್ನ ನಿರ್ಧಾರಕ್ಕೂ ಇದೇ ಸ್ಫೂರ್ತಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
"ಭಾರತದ ಮೇಲೆ ಈ ಗಿಫ್ಡ್ ದೊಡ್ಡ ಪ್ರಭಾವ ಮತ್ತು ಟಾಟಾ ಟ್ರಸ್ಟ್‌ನ ಉತ್ತಮ ಕೆಲಸವು ನನಗೆ ಪ್ರಮುಖ ಸ್ಫೂರ್ತಿಯಾಗಿದೆ. ನನ್ನ ಹೆತ್ತವರ ಆಶೀರ್ವಾದ, ಮಂಗಲ್ ಪ್ರಭಾತ್ ಲೋಧಾ ಮತ್ತು ಮಂಜು ಲೋಧಾ ಮತ್ತು ನನ್ನ ಪತ್ನಿ ವಿಂಟಿ ಲೋಧಾ ಮತ್ತು ನಮ್ಮ ಮಕ್ಕಳ ಬೆಂಬಲದೊಂದಿಗೆ, ಲೋಧಾ ಫಿಲಾಂತ್ರಪಿ ಫೌಂಡೇಶನ್ (LPF) ಈಗ ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾದ ಮ್ಯಾಕ್ರೋಟೆಕ್ ಡೆವಲಪರ್‌ಗಳಲ್ಲಿ 5ನೇ 1 ಭಾಗವನ್ನು ಹೊಂದಲಿದೆ, ಮುಂಬರುವ ವರ್ಷಗಳಲ್ಲಿ ಲೋಧಾ ಮತ್ತಷ್ಟು ಬೆಳೆಯುತ್ತಿದ್ದಂತೆ, ನಮ್ಮ ಬದ್ಧತೆಯನ್ನು ಪೂರೈಸಲು LPF ನಿರಂತರವಾಗಿ ಹೆಚ್ಚುತ್ತಿರುವ ಸಂಪನ್ಮೂಲಗಳನ್ನು ಹೊಂದಿರುತ್ತದೆ. ಒಳ್ಳೆಯದನ್ನು ಮಾಡು, ಒಳ್ಳೆಯದಾಗಿ ಮಾಡು' ಎಂದು ಅಭಿಷೇಕ್ ಲೋಧಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದಿನಂತಿರಲ್ಲ ಟಾಟಾ ಗ್ರೂಪ್, ರತನ್ ಟಾಟಾ ನಿಧನದ ಬೆನ್ನಲ್ಲೇ ಟಾಟಾ ಟ್ರಸ್ಟ್‌ನ ಉನ್ನತಾಧಿಕಾರಿಗಳಿಗೆ ಗೇಟ್‌ಪಾಸ್!
ಲೋಧಾ ಫಿಲಾಂತ್ರಪಿ ಫೌಂಡೇಶನ್ (LPF) ತನ್ನ ಸಂಪೂರ್ಣ ಆದಾಯ ಮತ್ತು ಸ್ವತ್ತುಗಳನ್ನು ರಾಷ್ಟ್ರೀಯ ಮತ್ತು ಸಾಮಾಜಿಕ ಕಾರಣಗಳಿಗಾಗಿ ನಿಯೋಜಿಸುತ್ತದೆ, ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ. ಮಹಿಳೆಯರು, ಮಕ್ಕಳು, ಪರಿಸರ ಮತ್ತು ಭಾರತೀಯ ಸಂಸ್ಕೃತಿ ಈ ಕ್ಷೇತ್ರದಲ್ಲಿ ಕೆಲಸ ಮಾಡಲಿದೆ.
10 ಸಾವಿರ ಕೋಟಿಯ ವಿಲ್‌ನಲ್ಲಿ ನಂಬಿಕಸ್ತ ಗೆಳೆಯ ಶಂತನು ನಾಯ್ಡುರನ್ನು ಮರೆಯದ ರತನ್ ಟಾಟಾ!
ಮ್ಯಾಕ್ರೋಟೆಕ್ ಡೆವಲಪರ್ಸ್ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ, ಪುಣೆ ಮತ್ತು ಬೆಂಗಳೂರಿನಲ್ಲಿ ಅಸ್ತಿತ್ವವನ್ನು ಹೊಂದಿರುವ ರಿಯಲ್ ಎಸ್ಟೇಟ್ ಡೆವಲಪರ್ ಆಗಿದೆ. 1.1 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಕಂಪನಿಯಾಗಿದೆ. ಮ್ಯಾಕ್ರೋಟೆಕ್ ಡೆವಲಪರ್‌ಗಳ ಷೇರುಗಳು ಈ ವರ್ಷ ಇಲ್ಲಿಯವರೆಗೆ 5% ಹೆಚ್ಚಾಗಿದೆ ಮತ್ತು ಕಳೆದ ಒಂದು ವರ್ಷದಲ್ಲಿ 45% ಹೆಚ್ಚಾಗಿದೆ.