ಭಾರತದ ಆರ್ಥಿಕ ಪ್ರಗತಿ ಶೇ.6.4ಕ್ಕೆ ಕುಸಿತ ಸಾಧ್ಯತೆ

By Kannadaprabha News  |  First Published Jan 8, 2025, 7:37 AM IST

2024-25ನೇ ಸಾಲಿನಲ್ಲಿ ಭಾರತದ ಆರ್ಥಿಕ ಪ್ರಗತಿಯು ಶೇ.6.4ಕ್ಕೆ ಕುಸಿಯಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಉತ್ಪಾದನಾ ಮತ್ತು ಸೇವಾ ವಲಯಗಳ ಕಳಪೆ ಬೆಳವಣಿಗೆ ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ ಕೃಷಿ ಕ್ಷೇತ್ರದಲ್ಲಿ ಶೇ.3.8ರಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.


ನವದೆಹಲಿ : 2024-25ನೇ ಸಾಲಿನಲ್ಲಿ ಭಾರತದ ಆರ್ಥಿಕ ಪ್ರಗತಿಯು ಶೇ.6.4ಕ್ಕೆ ಕುಸಿಯಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಇದು ನಿಜವೇ ಆದರೆ ನಾಲ್ಕು ವರ್ಷಗಳ ಕನಿಷ್ಠವಾಗಲಿದೆ.  2020-21ರ ಕೋವಿಡ್‌ ವರ್ಷದಲ್ಲಿ ಶೇ.-5.8 ದಾಖಲಾಗಿತ್ತು. ಆದರೆ ಬಳಿಕ ಚೇತರಿಸಿಕೊಂಡು 2021-22ರಲ್ಲಿ ಶೇ.9.7, 2022-23ರಲ್ಲಿ ಶೇ.7, ಹಾಗೆ 2023-24ರಲ್ಲಿ ಶೇ.8.2ರಷ್ಟು ಜಿಡಿಪಿ ಪ್ರಗತಿ ದಾಖಲಾಗಿತ್ತು. ಆದರೆ ಈಗ ಮತ್ತೆ ಕುಸಿತದ ಹಾದಿ ಹಿಡಿದಿದ್ದು, ಶೇ.6.4ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ದತ್ತಾಂಶ ಕಚೇರಿ (ಎನ್‌ಎಸ್‌ಓ) ಅಂಕಿ-ಅಂಶ ಬಿಡುಗಡೆ ಮಾಡಿದೆ.  ಉತ್ಪಾದನಾ ವಲಯ ಮತ್ತು ಸೇವಾ ವಲಯದಲ್ಲಿನ ಕಳಪೆ ಬೆಳವಣಿಗೆ ಜಿಡಿಪಿ ಕುಸಿತಕ್ಕೆ ಕಾರಣವಾಗಿದೆ.

ಯಾವುದರಲ್ಲಿ ಎಷ್ಟು ಪ್ರಗತಿ?:

Tap to resize

Latest Videos

ಉತ್ಪಾದನಾ ವಲಯ 2023-24ರಲ್ಲಿ ಶೇ.9.9ರಷ್ಟಿದ್ದ ಜಿಡಿಪಿ ಬೆಳವಣಿಗೆಯನ್ನು ಶೇ.5.3ಕ್ಕೆ ಇಳಿಸಲಾಗಿದೆ. ವ್ಯಾಪಾರ, ಹೋಟೆಲ್‌, ಸಂವಹನ, ಸಾರಿಗೆ ಕ್ಷೇತ್ರಗಳನ್ನು ಒಳಗೊಂಡ ಸೇವಾ ವಲಯದ ಬೆಳವಣಿಗೆ ಶೇ.6.4ರಿಂದ ಶೇ.5.8ಕ್ಕೆ ಇಳಿಸಲಾಗಿದೆ. ಮತ್ತೊಂದೆಡೆ ಕೃಷಿ ಕ್ಷೇತ್ರ ಮಾತ್ರ ಶೇ.1.4ರಿಂದ ಶೇ.3.8ರಲ್ಲಿ ಬೆಳವಣಿಗೆಯಾಗಲಿದೆ ಎಂದು ಎನ್‌ಎಸ್‌ಒ ಅಂದಾಜಿಸಿದೆ.ಇತ್ತೀಚೆಗೆ ಆರ್‌ಬಿಐ ಬಿಡುಗಡೆ ಮಾಡಿದ್ದ ಅಂದಾಜು ಪ್ರಕಾರ ಭಾರತದ ಪ್ರಗತಿಯು ಶೇ.6.6ರಲ್ಲಿ ಇರಲಿದೆ ಎಂದು ಹೇಳಿತ್ತು.

33 ವರ್ಷ ಬಳಿಕ ಘೋರ ಆರ್ಥಿಕ ಹಿಂಜರಿತಕ್ಕೆ ತುತ್ತಾದ ನ್ಯೂಜಿಲೆಂಡ್, ಎಲ್ಲೆಡೆ ಉದ್ಯೋಗ ಕಡಿತ!

ನಾಲ್ಕು ಪಟ್ಟು ಆದಾಯದಲ್ಲಿರುವ ಕಾರ್ಪೋರೇಟ್‌ ಕಂಪನಿಗಳು, ಉದ್ಯೋಗಿಗಳ ಸಂಬಳದಲ್ಲಿ ಏರಿಕೆಯಿಲ್ಲ: FICCI ವರದಿ

click me!