ಮುಂದಿನ 5 ವರ್ಷಗಳಲ್ಲಿ ಆ್ಯಪಲ್ ಬೆಳವಣಿಗೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ: ಮಾರ್ಗನ್ ಸ್ಟ್ಯಾನ್ಲೆ

By Suvarna News  |  First Published Jul 19, 2023, 4:42 PM IST

ಆ್ಯಪಲ್ ಕಂಪನಿಯ ಮುಂದಿನ ಐದು ವರ್ಷಗಳ ಬೆಳವಣಿಗೆ ಭಾರತವನ್ನು ಆಧರಿಸಿದೆ ಎಂದು ಮಾರ್ಗನ್ ಸ್ಟ್ಯಾನ್ಲೆ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Business Desk:ಆ್ಯಪಲ್ ಕಂಪನಿಯ ಮುಂದಿನ ಐದು ವರ್ಷಗಳ ಆದಾಯದ ಮೂಲ ಹಾಗೂ ಅದರ ಬೆಳವಣಿಗೆ ಭಾರತವನ್ನು ಆಧರಿಸಿದೆ ಎಂದು ಮಾರ್ಗನ್ ಸ್ಟ್ಯಾನ್ಲೆ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಭಾರತದಲ್ಲಿ ಉತ್ಪಾದನೆಗೆ ಆ್ಯಪಲ್ ಹೂಡಿಕೆ ಮಾಡಿರುವ ಕಾರಣವನ್ನು ದೇಶದ ಆರ್ಥಿಕತೆಯ ಬೆಳವಣಿಗೆಯ ಜೊತೆಗೆ ಕಂಪನಿ ವಿವರಿಸಿದೆ. ಇನ್ನು ಹೊಸ ಬೆಲೆ ಹೆಚ್ಚಳದ ಗುರಿಯನ್ನು ಕೂಡ ಇದರಲ್ಲಿ ಸೇರಿಸಲಾಗಿದ್ದು, ಇದರಲ್ಲಿ ಕೂಡ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ. ಹೊಸದಾಗಿ ಬೆಲೆಯೇರಿಕೆ ಗುರಿ ನಿಗದಿಪಡಿಸಲಾಗಿದ್ದು, 190 ಡಾಲರ್ ನಿಂದ 220 ಡಾಲರ್ ಗೆ ಹೆಚ್ಚಳವಾಗಲಿದೆ. ಇನ್ನು ಮಾರ್ಗನ್ ಸ್ಟ್ಯಾನ್ಲೆ ಈ ಬಾರಿ ಕೂಡ  ಆ್ಯಪಲ್ ಅನ್ನು ತನ್ನ ಅಗ್ರ ಆಯ್ಕೆಯಾಗಿ ಆರಿಸಿದೆ. ಈ ಹಿಂದಿನ ಐದು ವರ್ಷಗಳಲ್ಲಿ ಆ್ಯಪಲ್ ಆದಾಯದ ಬೆಳವಣಿಗೆಗೆ ಭಾರತದ ಕೊಡುಗೆ ಶೇ.2ರಷ್ಟಿತ್ತು. ಆದರೆ, ಇಂದು ಶೇ.6ರಷ್ಟಿದೆ. ಹೀಗಾಗಿ ಮಾರ್ಗನ್ ಸ್ಟ್ಯಾನ್ಲೆ ವಿಶ್ಲೇಷಕರ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ಭಾರತವು ಆ್ಯಪಲ್ ಆದಾಯದ ಬೆಳವಣಿಗೆಯಲ್ಲಿ ಶೇ.15ರಷ್ಟು ಪಾಲು ಹೊಂದಿರಲಿದೆ. ಹಾಗೆಯೇ ಕಂಪನಿಯ ನಿರ್ಧರಿತ ಬೆಳವಣಿಗೆಯಲ್ಲಿ ಶೇ.20ರಷ್ಟು ಪಾಲು ಹೊಂದಿರಲಿದೆ. ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಆ್ಯಪಲ್ ಮಾರಾಟದಲ್ಲಿ 40 ಬಿಲಿಯನ್ ಡಾಲರ್ ಹೆಚ್ಚಳವಾಗಲಿದೆ ಎಂದು ಮಾರ್ಗನ್ ಸ್ಟ್ಯಾನ್ಲೆ ಊಹಿಸಿದ್ದು,ಇದು ಆ್ಯಪಲ್ ನ ಸಂಪೂರ್ಣ ಹೊಸ ಉತ್ಪನ್ನ ವಿಭಾಗಕ್ಕೆ ಸಂಬಂಧಿಸಿದ್ದಾಗಿರಲಿದೆ ಎಂದು ಹೇಳಿದೆ.

ಇನ್ನು ಮಾರ್ಗನ್ ಸ್ಟ್ಯಾನ್ಲೆ ವಿಶ್ಲೇಷಕರು ಅನೇಕ ವ್ಯತ್ಯಾಸಗಳನ್ನು ಪರಿಗಣಿಸಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಇದರಲ್ಲಿ ಭಾರತದ ಹೆಚ್ಚಿರುವ ವಿದ್ಯುದ್ದೀಕರಣ ಹಾಗೂ ದೇಶದಲ್ಲಿ ಉತ್ಪಾದನಾ ಹಾಗೂ ಚಿಲ್ಲರೆ ಮಾರಾಟ ಘಟಕ ಸ್ಥಾಪಿಸುವ ಆ್ಯಪಲ್ ಕಂಪನಿಯ ಪ್ರಯತ್ನಗಳನ್ನು ಕೂಡ ಪರಿಗಣಿಸಲಾಗಿದೆ. ಮಾರ್ಗನ್ ಸ್ಟ್ಯಾನ್ಲೆ ಕಮೀಷನ್ಡ್ ಸಮೀಕ್ಷೆ ಪ್ರಕಾರ ಭಾರತದ ಗ್ರಾಹಕರು ಐ ಫೋನ್ ಗಳನ್ನು ಖರೀದಿಸಲು ಬಯಸುವ ಜೊತೆಗೆ ಆ ಸಾಮರ್ಥ್ಯವನ್ನು ಕೂಡ ಹೊಂದಿದ್ದಾರೆ. ಆದರೆ, ಒಂದು ವೇಳೆ ಭಾರತ ತನ್ನ ನಿಗದಿತ ಆರ್ಥಿಕ ಹಾಗೂ ಜನಸಂಖ್ಯಾ ಬೆಳವಣಿಗೆ ಗುರಿಯನ್ನು ಮುಟ್ಟದಿದ್ದರೆ ಆ್ಯಪಲ್ ಭಾರತದಲ್ಲಿ ಪ್ರಮುಖ ಫಲಾನುಭವಿಯಾಗುವ ನಿರೀಕ್ಷೆಯನ್ನು ನಾವು ಹೊಂದಿಲ್ಲ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

Latest Videos

undefined

ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಭೂಮಿ ಖರೀದಿಸಿದ ಐಫೋನ್‌ ತಯಾರಕ ಫಾಕ್ಸ್‌ಕಾನ್: 1 ಲಕ್ಷ ಉದ್ಯೋಗ ಸೃಷ್ಟಿ!

ಮಾರ್ಗನ್ ಸ್ಟ್ಯಾನ್ಲೆ ವಿಶ್ಲೇಷಣೆ ಭಾರತದ ಮಟ್ಟಿಗೆ ಸಕಾರಾತ್ಮಕವಾಗಿ ಕಾಣಿಸುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಆ್ಯಪಲ್ ಬೆಳವಣಿಗೆಗೆ ಭಾರತವು ಕಳೆದ ಐದು ವರ್ಷಗಳಲ್ಲಿ ಚೀನಾ ಎಷ್ಟು ಮುಖ್ಯವಾಗಿತ್ತು ಅಷ್ಟೇ ನಿರ್ಣಾಯಕವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆ್ಯಪಲ್ ಪ್ರಮುಖ ಪೂರೈಕೆದಾರ  ಫಾಕ್ಸ್ ಕಾನ್ ( Foxconn) ಮೇ ಪ್ರಾರಂಭದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ತೆಲಂಗಣದಲ್ಲಿ 500 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ವರದಿಯಾಗಿತ್ತು. ತೆಲಂಗಣದ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮ ರಾವ್ ಪ್ರಕಾರ ಮೊದಲ ಹಂತದಲ್ಲಿ ಫಾಕ್ಸ್ ಕಾನ್ ಹೂಡಿಕೆ 25,000 ನೇರ ಉದ್ಯೋಗಗಳನ್ನು ಸೃಷ್ಟಿಸಲಿದೆ. ರಾಯ್ಟರ್ಸ್ ಪ್ರಕಾರ ಭಾರತದಲ್ಲಿ ಈಗಾಗಲೇ ಐ ಫೋನ್ ಗಳನ್ನು ಉತ್ಪಾದಿಸುತ್ತಿರುವ ಫಾಕ್ಸ್ ಕಾನ್, ಭಾರತದಲ್ಲಿ ಏರ್ ಪಾಡ್ ಗಳನ್ನು ಉತ್ಪಾದಿಸುವ ಬಿಡ್ ಅನ್ನು ಕಳೆದ ವರ್ಷದ ಪ್ರಾರಂಭದಲ್ಲಿ ಪಡೆದಿದೆ.

ಕರ್ನಾಟಕದಲ್ಲಿ ಐಫೋನ್ ಉತ್ಪಾದನಾ ಘಟಕ, ಫಾಕ್ಸ್‌ಕಾನ್‌ಗೆ 100 ಏಕರೆ ಭೂಮಿ ನೀಡಿದ ಸರ್ಕಾರ!

ಇನ್ನು ಈ ವರ್ಷದ ಮೇ ತಿಂಗಳಲ್ಲಿ ಫಾಕ್ಸ್‌ಕಾನ್ ಬೆಂಗಳೂರಿನ ಹೊರವಲಯದಲ್ಲಿ ಬೃಹತ್ ಪ್ರಮಾಣದ ಭೂಮಿಯನ್ನು ಖರೀದಿಸಿದೆ ಕೂಡ. ಈ ಬಗ್ಗೆ ಲಂಡನ್‌ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಫಾಕ್ಸ್ ಕಾನ್ ತಿಳಿಸಿದೆ. ಬೆಂಗಳೂರು ವಿಮಾನ ನಿಲ್ದಾಣದ ಸಮೀಪವಿರುವ ದೇವನಹಳ್ಳಿಯಲ್ಲಿ 1.2 ಮಿಲಿಯನ್ ಚದರ ಮೀಟರ್ (13 ಮಿಲಿಯನ್ ಚದರ ಅಡಿ) ಭೂಮಿಯನ್ನು ಫಾಕ್ಸ್ ಕಾನ್ ಖರೀದಿಸಿದೆ. 


 

click me!