ಇನ್ನು 3 ವರ್ಷದಲ್ಲಿ ಭಾರತ ವಿಶ್ವದ ನಂ. 3 ಆರ್ಥಿಕ ಶಕ್ತಿ: ಜರ್ಮನಿ, ಜಪಾನ್‌ ಹಿಂದಿಕ್ಕಲಿದೆ ದೇಶ

By Kannadaprabha News  |  First Published Jan 30, 2024, 8:06 AM IST

ಈ ಸುಧಾರಣಾ ಕ್ರಮಗಳು ಜಾಗತಿಕ ಆರ್ಥಿಕ ದುಷ್ಪರಿಣಾಮಗಳನ್ನು ಎದುರಿಸಲು ಕೂಡಾ ನೆರವಾಗಿದೆ. ಇದೆಲ್ಲದರ ಪರಿಣಾಮ ಮುಂದಿನ 3 ವರ್ಷಗಳಲ್ಲಿ ನಮ್ಮ ಆರ್ಥಿಕತೆ 5 ಲಕ್ಷ ಕೋಟಿ ರೂ. ತಲುಪಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.


ನವದೆಹಲಿ (ಜನವರಿ 30, 2024): ಮುಂದಿನ ಮೂರು ವರ್ಷಗಳಲ್ಲಿ ಭಾರತದ ಜಿಡಿಪಿ 5 ಲಕ್ಷ ಕೋಟಿ ಡಾಲರ್‌ (415 ಲಕ್ಷ ಕೋಟಿ ರೂ.) ತಲುಪುವ ಮೂಲಕ ದೇಶವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. 

ಅದೇ ರೀತಿ 2030ರ ವೇಳೆಗೆ ಜಿಡಿಪಿ ಪ್ರಮಾಣವು 7 ಲಕ್ಷ ಕೋಟಿ ಡಾಲರ್ (581 ಲಕ್ಷ ಕೋಟಿ ರೂ.) ತಲುಪಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ. ಇದು ಸಾಧ್ಯವಾದಲ್ಲಿ 3ನೇ ಸ್ಥಾನದಲ್ಲಿರುವ ಜರ್ಮನಿ ಹಾಗೂ 4ನೇ ಸ್ಥಾನದಲ್ಲಿರುವ ಜಪಾನ್‌ ದೇಶಗಳನ್ನು ಭಾರತ ಹಿಂದಿಕ್ಕಿದಂತಾಗಲಿದೆ.

Tap to resize

Latest Videos

ನಾಳೆಯಿಂದ ಅಯೋಧ್ಯೆ ಸಾರ್ವಜನಿಕ ಮುಕ್ತ: ವರ್ಷಕ್ಕೆ 5 ಕೋಟಿ ಭಕ್ತರ ನಿರೀಕ್ಷೆ; ಪ್ರವಾಸೋದ್ಯಮಕ್ಕೆ ಸುವರ್ಣ ಯುಗ!

ಸೋಮವಾರ ದೇಶದ ಆರ್ಥಿಕತೆ ಕುರಿತು ವರದಿ ಪ್ರಕಟಿಸಿರುವ ವಿತ್ತ ಸಚಿವಾಲಯ, ‘10 ವರ್ಷಗಳ ಹಿಂದೆ 1.9 ಲಕ್ಷ ಕೋಟಿ ಜಿಡಿಪಿಯೊಂದಿಗೆ ನಾವು ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೆವು. ನಂತರದ ವರ್ಷಗಳಲ್ಲಿ ಕೋವಿಡ್‌ ಸಾಂಕ್ರಾಮಿಕ ಮತ್ತು ಹಿಂದಿನ ಸರ್ಕಾರಗಳು ತಂದಿಟ್ಟ ಆರ್ಥಿಕ ಸಂಕಷ್ಟದ ಹೊರತಾಗಿಯೂ ಸರ್ಕಾರ ಕೈಗೊಂಡ ವಿವಿಧ ಕ್ರಮಗಳಿಂದಾಗಿ ನಾವು 3.7 ಲಕ್ಷ ಕೋಟಿ ರೂ. ನೊಂದಿಗೆ 5ನೇ ಸ್ಥಾನದಲ್ಲಿದ್ದೇವೆ’ ಎಂದಿದೆ.

‘ಕಳೆದ 10 ವರ್ಷಗಳಲ್ಲಿ ಕೈಗೊಂಡ ವಿವಿಧ ಸುಧಾರಣಾ ಕ್ರಮಗಳು ದೇಶದ ಆರ್ಥಿಕ ಪ್ರಗತಿಗೆ ಕಾರಣವಾಗಿದೆ. ಜೊತೆಗೆ ಈ ಸುಧಾರಣಾ ಕ್ರಮಗಳು ಜಾಗತಿಕ ಆರ್ಥಿಕ ದುಷ್ಪರಿಣಾಮಗಳನ್ನು ಎದುರಿಸಲು ಕೂಡಾ ನೆರವಾಗಿದೆ. ಇದೆಲ್ಲದರ ಪರಿಣಾಮ ಮುಂದಿನ 3 ವರ್ಷಗಳಲ್ಲಿ ನಮ್ಮ ಆರ್ಥಿಕತೆ 5 ಲಕ್ಷ ಕೋಟಿ ರೂ. ತಲುಪಲಿದೆ’ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಅತಿ ಹೆಚ್ಚು ಮೀಸಲು ಚಿನ್ನ ಹೊಂದಿರುವ ಜಗತ್ತಿನ ಟಾಪ್ 10 ದೇಶಗಳ ಪಟ್ಟಿ ಬಹಿರಂಗ: ಭಾರತಕ್ಕೆ ಎಷ್ಟನೇ ಸ್ಥಾನ ನೋಡಿ..

  • 10 ವರ್ಷ ಹಿಂದೆ 1.9 ಲಕ್ಷ ಕೋಟಿ ಡಾಲರ್‌ ಇದ್ದ ದೇಶದ ಜಿಡಿಪಿ
  • ಆಗ ಜಗತ್ತಿನ 10ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದ ಭಾರತ
  • ಸುಧಾರಣಾ ಕ್ರಮಗಳಿಂದಾಗಿ ಜಿಡಿಪಿ 3.7 ಲಕ್ಷ ಕೋಟಿ ಡಾಲರ್‌ಗೆ
  • ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ ಭಾರತ: ವಿತ್ತ ಸಚಿವಾಲಯ ವರದಿ

ವಿಶ್ವಕ್ಕೆ ಭಾರತ ಭರವಸೆಯ ಆಶಾಕಿರಣ: ಪ್ರಧಾನಿ ಮೋದಿ; ನಾನು ಹೆಮ್ಮೆಯ ಗುಜರಾತಿ ಎಂದ ಅಂಬಾನಿ 

click me!