2020 ರಲ್ಲಿ ಭಾರತದ ಆರ್ಥಿಕತೆ ಸುಧಾರಿಸುತ್ತಾ?

By Kannadaprabha News  |  First Published Dec 20, 2019, 4:21 PM IST

ಇತ್ತೀಚೆಗೆ ಭಾರತ ಕಾರ್ಪೋರೇಟ್‌ ತೆರಿಗೆಯನ್ನು ಕಡಿತ ಮಾಡಿದೆ. ಇದೊಂದು ಧನಾತ್ಮಕ ಹೆಜ್ಜೆ. ಆದರೆ ಅದೇ ಸಮಯದಲ್ಲಿ ಯಾವುದೇ ಹೊಸ ಆದಾಯದ ಮೂಲಗಳನ್ನು ಸರ್ಕಾರ ಕಂಡುಕೊಂಡಿಲ್ಲ. ಇದು ಈಗಿರುವ ಸಮಸ್ಯೆ. ಭಾರತದಲ್ಲಿ ಆರ್ಥಿಕ ಹಿಂಜರಿಕೆ ಆರಂಭವಾಗಲು ಮೂಲ ಕಾರಣ ಬ್ಯಾಂಕುಗಳ ಎನ್‌ಪಿಎ. ಇದು ಸುಧಾರಿಸಲು ಇನ್ನೂ 5-6 ವರ್ಷ ಬೇಕು. 


ನವದೆಹಲಿ (ಡಿ. 20): ಭಾರತದ ಜಿಡಿಪಿ ಬೆಳವಣಿಗೆ ದರ ಈ ಹಿಂದಿನ ಅಂದಾಜಿಗಿಂತ ಕಡಿಮೆ ಆಗಲಿದೆ ಎಂದು ಜಾಗತಿಕ ಹಣಕಾಸು ಸಂಸ್ಥೆಗಳಾದ ವಿಶ್ವಬ್ಯಾಂಕ್‌ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಇತ್ತೀಚೆಗೆ ಹೇಳಿವೆ. ಕೇವಲ ಭಾರತ ಮಾತ್ರವಲ್ಲ, ಜಗತ್ತೇ ಈಗ ಆರ್ಥಿಕ ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮೂಲದ ಐಎಂಎಫ್‌ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್‌ ಬ್ಲೂಮ್‌ಬರ್ಗ್‌ ಕ್ವಿಂಟ್‌ಗೆ ಸಂದರ್ಶನ ನೀಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

2020 ರಲ್ಲಿ ಭಾರತದ ಆರ್ಥಿಕತೆ ಸುಧಾರಿಸುತ್ತಾ?

Latest Videos

undefined

ಇತ್ತೀಚೆಗೆ ಭಾರತ ಕಾರ್ಪೋರೇಟ್‌ ತೆರಿಗೆಯನ್ನು ಕಡಿತ ಮಾಡಿದೆ. ಇದೊಂದು ಧನಾತ್ಮಕ ಹೆಜ್ಜೆ. ಆದರೆ ಅದೇ ಸಮಯದಲ್ಲಿ ಯಾವುದೇ ಹೊಸ ಆದಾಯದ ಮೂಲಗಳನ್ನು ಸರ್ಕಾರ ಕಂಡುಕೊಂಡಿಲ್ಲ. ಇದು ಈಗಿರುವ ಸಮಸ್ಯೆ. ಭಾರತದಲ್ಲಿ ಆರ್ಥಿಕ ಹಿಂಜರಿಕೆ ಆರಂಭವಾಗಲು ಮೂಲ ಕಾರಣ ಬ್ಯಾಂಕುಗಳ ಎನ್‌ಪಿಎ. ಇದು ಸುಧಾರಿಸಲು ಇನ್ನೂ 5-6 ವರ್ಷ ಬೇಕು.

ನಾವು ಮತ್ತೆ ಮೇಲೆದ್ದು ಬರುತ್ತೇವೆ: ಸಣ್ಣ ಧ್ವನಿಯಲ್ಲಿ ಮೋದಿ ಅಂದಿದ್ದೇನು?

2020 ರಲ್ಲಿ ಜಾಗತಿಕ ಆರ್ಥಿಕತೆ ಅಲ್ಪಮಟ್ಟಿಗೆ ಚೇತರಿಸಿಕೊಳ್ಳಲಿದೆ ಎಂದು ಐಎಂಎಫ್‌ ಹೇಳಿದೆ. ಆದರೆ ಇದು ಅನಿಶ್ಚಿತವಾಗಿದೆ. ನಿಮ್ಮ ಪ್ರಕಾರ 2020ರ ಮೊದಲರ್ಧದಲ್ಲಿ ಜಾಗತಿಕ ಆರ್ಥಿಕತೆಗಿರುವ ಸವಾಲುಗಳೇನು?

ಜಾಗತಿಕ ಆರ್ಥಿಕತೆಯು 2019ರಲ್ಲಿ ಶೇ.3ರಷ್ಟುಬೆಳವಣಿಗೆಯಲ್ಲಿದ್ದು, 2020ರ ವೇಳಗೆ ಅದು ಶೇ.3.4ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಎಂಎಫ್‌ ಅಂದಾಜಿಸಿದೆ. ವಿಶ್ವದ ಅತಿದೊಡ್ಡ ಆರ್ಥಿಕತೆಗಳಿಂದ ಈ ಬೆಳವಣಿಗೆ ಸಾಧ್ಯವಿಲ್ಲ. ಅಂದರೆ ನಮ್ಮ ಅಂದಾಜಿನ ಪ್ರಕಾರ ಚೀನಾ ಆರ್ಥಿಕತೆಯು ಈಗಿನಂತೆಯೇ ಇರಲಿದೆ ಮತ್ತು ಜಪಾನ್‌ ಆರ್ಥಿಕತೆ ಕೂಡ ಹೀಗೇ ಮಂದಗತಿಯಲ್ಲಿ ಇರಲಿದೆ.

ನೂತನವಾಗಿ ಅನುಷ್ಠಾನಗೊಳ್ಳುತ್ತಿರುವ ಅದರಲ್ಲೂ ಟರ್ಕಿ ಮತ್ತು ಅರ್ಜೆಂಟೈನಾಗಳ ಉದಯೋನ್ಮುಖ ಮಾರುಕಟ್ಟೆಗಳಿಂದ ಚೇತರಿಕೆ ಸಾಧ್ಯ ಎನಿಸುತ್ತಿದೆ. ಹಾಗೆಯೇ, ಬ್ರೆಜಿಲ… ಮತ್ತು ಮೆಕ್ಸಿಕೊ ಮತ್ತು ಭಾರತದಂತಹ ಆರ್ಥಿಕತೆಗಳು 2019ರಲ್ಲಿ ಸಾಕಷ್ಟುದುರ್ಬಲವಾಗಿವೆ. 2020ರಲ್ಲಿ ಇವು ಚೇತರಿಸಿಕೊಳ್ಳಬಹುದು. ಅದು ನಮ್ಮ ನಿರೀಕ್ಷೆ ಕೂಡ.

ಮುಂದಿನ ವರ್ಷ ಜಾಗತಿಕ ಆರ್ಥಿಕತೆ ಚೇತರಿಸಿಕೊಳ್ಳಲು ಅಭಿವೃದ್ಧಿ ಹೊಂದಿದ ದೇಶಗಳ ಬೆಂಬಲ ಬೇಕು ಎಂದು ನಿಮಗೆ ಅನಿಸುತ್ತದೆಯೇ?

2019ರಲ್ಲಿ ಆರ್ಥಿಕ ಚೇತರಿಕೆಗೆ ಎಲ್ಲ ದೇಶಗಳಲ್ಲೂ ಸಾಕಷ್ಟುಪೂರಕ ವಾತಾವರಣವಿತ್ತು. ವಿಶ್ವದ ಎಲ್ಲಾ ಕೇಂದ್ರ ಬ್ಯಾಂಕುಗಳು ಬಡ್ಡಿದರಗಳನ್ನು ಕಡಿತಗೊಳಿಸಿದವು ಮತ್ತು ಸಾಕಷ್ಟುಸಮನ್ವಯತೆಯಿಂದ ಕೆಲಸ ಮಾಡಿದವು. ವಿತ್ತೀಯ ನೀತಿಗಳ ಪರಿಣಾಮ ವಿಳಂಬವಾಗಿರುವುದರಿಂದ, 2020ರಲ್ಲಿ ಅದರ ಪರಿಣಾಮಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಈ ಬಾರಿಯೂ ಅವು ಬಡ್ಡಿದರವನ್ನು ಕಡಿತಗೊಳಿಸುತ್ತವೆಯೇ ಇಲ್ಲವೇ ಎಂಬುದು ಅಸ್ಪಷ್ಟವಾಗಿದೆ.

ಅತಿ ಹೆಚ್ಚು ಸಂಬಳ ಕೊಡುವ ನಗರ: ಬೆಂಗಳೂರು ನಂ.1!

ಆರ್ಥಿಕ ಸ್ಥಿರತೆಯ ಕೆಲವು ಚಿಹ್ನೆಗಳು ಗೋಚರವಾಗುತ್ತಿವೆ. 2019ರಲ್ಲಿ ಉತ್ಪಾದನೆ ಮತ್ತು ಜಾಗತಿಕ ವ್ಯಾಪಾರ ಉದ್ಯಮದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಾವು ಕಾಳಜಿ ವಹಿಸಿದ್ದೆವು. ಉತ್ಪಾದನೆಯು ಬಹಳ ತೀವ್ರವಾಗಿ ಕುಸಿಯಿತು. ಸೇವಾ ವಲಯವು ಪ್ರಗತಿಯಲ್ಲಿರುವುದರಿಂದ, ನಾವು 2019ಕ್ಕೆ ವಿರುದ್ಧವಾಗಿ ಸ್ವಲ್ಪ ಸ್ಥಿರ ಹಂತಕ್ಕೆ ಪ್ರವೇಶಿಸುತ್ತಿದ್ದೇವೆ. ಆದರೆ ಇದೇ ಅಂತಿಮ ಅಲ್ಲ, ಅಪಾಯಗಳು ನಮ್ಮೆದುರಿಗಿವೆ.

ಉತ್ಪಾದನಾ ಕ್ಷೇತ್ರವು ತಳಮಟ್ಟಕ್ಕೆ ಕುಸಿದಿತ್ತು ಎಂದು ಹೇಳಿದ್ದೀರಿ. ಇದು ಸೇವಾ ಕ್ಷೇತ್ರಕ್ಕೂ ವಿಸ್ತರಿಸುವುದಿಲ್ಲವೇ?

ಸೇವಾ ಕ್ಷೇತ್ರಗಳು ಸಾಕಷ್ಟುಉತ್ತಮವಾಗಿವೆ. ಜರ್ಮನಿಯಂತಹ ದೇಶಗಳು ಅಮೆರಿಕಕ್ಕಿಂತ ಹೆಚ್ಚಾಗಿ ಉತ್ಪಾದನೆಯ ಮೇಲೆ ಅವಲಂಬಿತವಾಗಿವೆ. ಸೇವಾ ವಲಯದಲ್ಲಿಯೂ ಕೆಲ ದೌರ್ಬಲ್ಯಗಳನ್ನು ಕಾಣಬಹುದು, ಆದರೆ ಅದು ತಾತ್ಕಾಲಿಕ. ಆದರೆ ಈಗ ವ್ಯಾಪಾರ ವಹಿವಾಟಿನ ಹೊರತಾಗಿ ಉತ್ಪಾದನಾ ಕ್ಷೇತ್ರದ ಮಂದಗತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ವಾಹನೋತ್ಪಾದನೆ ಉದ್ದಿಮೆಗಳು ಹೆಚ್ಚು ಅಪಾಯದಲ್ಲಿವೆ.

ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಸಾಕಷ್ಟುಸೂಕ್ಷ್ಮವಾಗಿ ನೀವು ಗಮನಿಸಿದ್ದೀರಿ. ಆರ್ಥಿಕತೆಯ ಚೇತರಿಕೆಗೆ ನಿಮ್ಮ ಸಲಹೆ ಏನು?

ನಾವು ವಿತ್ತೀಯ ಕೊರತೆ ಕುರಿತ ಎಲ್ಲಾ ಅಂಶಗಳನ್ನೂ ಟ್ರ್ಯಾಕ್‌ ಮಾಡುತ್ತಿದ್ದೇವೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ನಾವು ಕಲಿತ ಅತಿ ದೊಡ್ಡ ಪಾಠವೆಂದರೆ ಹಣಕಾಸಿನ ಸ್ಥಿತಿಗತಿ ಬಗ್ಗೆ ಮೊದಲೇ ಸೂಕ್ಷ್ಮ ದೃಷ್ಟಿಇಟ್ಟಿರಬೇಕೆಂಬುದು. ಜೊತೆಗೆ, ಪ್ರಮುಖ ಆರ್ಥಿಕತೆಗಳಲ್ಲಿ, ವಿಶೇಷವಾಗಿ ಅಮೆರಿಕದಲ್ಲಿ ನಿಯಂತ್ರಿತ ಬ್ಯಾಂಕಿಂಗ್‌ ಕ್ಷೇತ್ರವು ಸುರಕ್ಷಿತವಾಗಿದೆ ಎಂದು ತೋರುತ್ತದೆ. ಆದರೆ ನಿಜವಾದ ಕಾಳಜಿ ಇರಬೇಕಾದುದು ಅನಿಯಂತ್ರಿತ ಮಾರುಕಟ್ಟೆಗಳ ಮೇಲೆ.

ಕೇಂದ್ರದಿಂದ ಜಿಎಸ್‌ಟಿ ಶಾಕ್‌ ಇಲ್ಲ, ಉದ್ಯಮಿಗಳು ಬಚಾವ್!

ಸದ್ಯದ ವಿತ್ತೀಯ ಬಿಕ್ಕಟ್ಟಿಗೆ ಹಲವು ಕಾರಣಗಳಿವೆ. ಅವು ಸ್ಥಳೀಯವೂ ಆಗಿರಬಹುದಲ್ಲವೇ?

ಜಗತ್ತಿನ ವಿವಿಧೆಡೆ ತಲೆ ಎತ್ತಿರುವ ಉದಯೋನ್ಮುಖ ಮಾರುಕಟ್ಟೆಗಳ ಮೇಲೆ ವಿಚಿತ್ರ ರೀತಿಯ ಅಂಶಗಳು ಪ್ರಭಾವ ಬೀರಿರಬಹುದು. ಈಗ, ಚೀನಾದಂತಹ ಕೆಲವು ದೇಶಗಳು ವ್ಯಾಪಾರದ ಉದ್ವಿಗ್ನತೆಯಿಂದ ನೇರವಾಗಿ ಬಿಕ್ಕಟ್ಟಿಗೆ ಸಿಲುಕಿವೆ.

ನೀವು ಲ್ಯಾಟಿನ್‌ ಅಮೆರಿಕದ ವಿವಿಧ ಪ್ರದೇಶಗಳನ್ನು ನೋಡಿದರೆ ಅಥವಾ ಭಾರತವನ್ನು ನೋಡಿದರೆ ಅಲ್ಲಿ ಇತರ ಸ್ಥಳೀಯ ಸಮಸ್ಯೆಗಳಿವೆ. ಇನ್ನು ಹಾಂಕಾಂಗ್‌ ಕಡೆಗೆ ನೋಡಿದರೆ, ಅಲ್ಲಿ ಅಮೆರಿಕ-ಚೀನಾ ವ್ಯಾಪಾರ ಬಿಕ್ಕಟ್ಟಿನ ಪ್ರಭಾವವನ್ನು ಕಾಣಬಹುದು. ಆದರೆ ಅಲ್ಲಿ ನಾಗರಿಕ ಕಲಹವೂ ಇತ್ತು.

ಐಎಂಎಫ್‌ ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ಪರಿಷ್ಕರಿಸಿದ್ದು, 2019-20ರಲ್ಲಿ ಜಿಡಿಪಿ ಶೇ.6.1ಕ್ಕೆ ಕುಸಿಯಲಿದೆ ಎಂದು ಹೇಳಿದೆ.

ಹೌದು, 2019-20ರಲ್ಲಿ ಭಾರತದ ಆರ್ಥಿಕತೆಯು ಶೇ.6.1ಗೆ ಕುಸಿಯಲಿದೆ ಎಂದು ಅಂದಾಜಿಸಿದ್ದೆವು. ಹಾಗೆಯೇ 2020-21ರಲ್ಲಿ ಅದು 7% ಆಗಲಿದೆ ಎಂದೂ ಹೇಳಿದ್ದೆವು. ನಮ್ಮ ನಿರೀಕ್ಷೆಯ ಪ್ರಕಾರ 2019-20ರ ನಾಲ್ಕನೇ ತ್ರೈಮಾಸಿಕದಲ್ಲಿ ಅಲ್ಪ ಮಟ್ಟಿಗೆ ಚೇತರಿಕೆ ಕಂಡುಬಂದಿದೆ.

ಭಾರತದಲ್ಲಿನ ಆರ್ಥಿಕ ಹಿಂಜರಿತಕ್ಕೆ ಕಾರಣ ಏನು?

ಹಣಕಾಸಿನ ವಿಷಯವೂ ಒಂದು ಪ್ರಮುಖ ಅಂಶ. ಇದೇನೂ ಹೊಸದಲ್ಲ. ಏಕೆಂದರೆ ನಾನ್‌ ಪರ್ಫಾರ್ಮಿಂಗ್‌ ಅಸೆಟ್‌ ಮತ್ತು ಕಾರ್ಪೋರೇಟ್‌ ಬ್ಯಾಲೆನ್ಸ್‌ ಶೀಟ್‌ನಲ್ಲಿ ಸಮಸ್ಯೆ ಇದೆ. ಇದು ಇತ್ತೀಚಿನ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಬಿದ್ದ ಅತಿ ದೊಡ್ಡ ಹೊಡೆತ. ಬ್ಯಾಂಕಿಂಗ್‌ ಕ್ಷೇತ್ರಗಳಿಂದಾಗಿ ಬಿಕ್ಕಟ್ಟು ಮತ್ತಷ್ಟುಹೆಚ್ಚಾಗಿದೆ. ಅಲ್ಲದೆ ಬ್ಯುಸಿನೆಸ್‌ ಸೆಂಟಿಮೆಂಟ್‌ನಲ್ಲಿ ಬದಲಾವಣೆ ಕಂಡುಬರುತ್ತಿದೆ. ಆರ್‌ಬಿಐ ಸಮೀಕ್ಷೆ ಪ್ರಕಾರ ವ್ಯವಹಾರ ಮನೋಭಾವವು ಇತ್ತೀಚೆಗೆ ಕಡಿಮೆಯಾಗುತ್ತಿದೆ.

ಇದು ಬಿಕ್ಕಟ್ಟಿಗೆ ಮತ್ತೊಂದು ಕಾರಣ. ಆದಾಯ ಬೆಳವಣಿಗೆ ಜೊತೆಗೆ ಈ ಎಲ್ಲಾ ಅಂಶಗಳೂ ಸೇರಿ ಭಾರತದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಭಾರತದಲ್ಲಿನ ಖಾಸಗಿ ವಲಯದ ಬೇಡಿಕೆಯ ಒಟ್ಟಾರೆ ದೌರ್ಬಲ್ಯವೇ ಆರ್ಥಿಕತೆಯನ್ನು ಕುಗ್ಗಿಸಿದೆ. ಇದೀಗ ಸರ್ಕಾರದ ಖರ್ಚಿನಲ್ಲಿ ಆರ್ಥಿಕತೆಯ ಚೇತರಿಕೆ ಪ್ರಯತ್ನ ನಡೆಯುತ್ತಿದೆ.

ಸುಮಾರು ಅರ್ಧ ದಶಕದಿಂದ ಹಣಕಾಸು ವಲಯದಲ್ಲಿ ಸಮಸ್ಯೆಗಳು ಕಂಡುಬರುತ್ತಿವೆ. ಇದಕ್ಕೆ ಬಲವಾದ ಪರಿಹಾರ ಕ್ರಮಗಳು ಬೇಕೇ?

ಇದೇನು ಅನಿರೀಕ್ಷಿತ ಅಲ್ಲ. ಅಂದರೆ ನಾನ್‌ ಪರ್ಫಾರ್ಮಿಂಗ್‌ ಅಸೆಟ್‌ ಸಮಸ್ಯೆ ಎದುರಿಸುತ್ತಿರುವ ದೇಶಗಳೆಡೆಗೆ ನೋಡುವುದಾದರೆ, ಅದರಿಂದ ಹೊರಬರಲು ಕನಿಷ್ಠ 5-6 ವರ್ಷ ಬೇಕಾಗುತ್ತದೆ. ಭಾರತವೂ ಇಂಥ ಸಮಸ್ಯೆ ಎದುರಿಸುತ್ತಿದೆ ಎಂದರೆ ಅದಕ್ಕೆ ಅಚ್ಚರಿ ಪಡಬೇಕಿಲ್ಲ. ಆದರೆ ಇನ್ನೂ ಮಾಡಬಹುದಾದ ಕೆಲಸಗಳಿವೆ ಎಂದು ನಾನು ಭಾವಿಸುತ್ತೇನೆ. ದಿವಾಳಿತನ ಪರಿಹಾರಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಇದೆ.

ಮೊಬೈಲ್ ಬಳಕೆದಾರರಿಗೆ ಕಹಿ ಸುದ್ದಿ! ಇನ್ಮುಂದೆ ಸಿಗಲ್ಲ ಅಚ್ಚುಮೆಚ್ಚಿನ ಆಫರ್

ಇದು ಈ ರೀತಿಯ ಸಮಸ್ಯೆಗಳನ್ನು ಪರಿಹರಿಸುತ್ತಿದೆ. ಆದರೆ ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ನಿರ್ಣಯವು ಕಾನೂನಿನ ಪ್ರಕಾರ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಆದ್ದರಿಂದ, ಗಂಭೀರ ಆಡಳಿತ ಸುಧಾರಣೆ ತರಬೇಕಾದ ಅಗತ್ಯವಿದೆ. ಹಣಕಾಸು ವಲಯದ ಸುಧಾರಣೆಗಳು ಈ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿರಬೇಕು ಎಂದು ನಾನು ಭಾವಿಸುತ್ತೇನೆ.

ಭಾರತದಲ್ಲಿ ಬೇಡಿಕೆಯ ಕೊರತೆ ಇರುವುದನ್ನು ಮೊಟ್ಟಮೊದಲಿಗೆ ನೋಡುತ್ತಿದ್ದೇವೆ. ಸಾಮಾನ್ಯವಾಗಿ ಇಷ್ಟುವರ್ಷ ಪೂರೈಕೆಯ ಕೊರತೆ ಕಾಣುತ್ತಿತ್ತು.

ವಿತ್ತೀಯ ನೀತಿಯು ಆರ್ಥಿಕತೆ ಮೇಲೆ ಸಾಕಷ್ಟುಪ್ರಭಾವ ಬೀರಿದೆ. ಮೊದಲೇ ಹೇಳಿದಂತೆ ಹಣಕಾಸು ವಲಯದ ಸುಧಾರಣೆಗಳಿಗೆ ಆದ್ಯತೆ ನೀಡಬೇಕಾದ ತುರ್ತಿದೆ. ಇತ್ತೀಚೆಗೆ ಸರ್ಕಾರ ಕಾರ್ಪೋರೇಟ್‌ ತೆರಿಗೆಯನ್ನು ಕಡಿತ ಮಾಡಿದೆ. ಇದೊಂದು ಧನಾತ್ಮಕ ಹೆಜ್ಜೆಯೇ. ಆದರೆ ಅದೇ ಸಮಯದಲ್ಲಿ ಯಾವುದೇ ಹೊಸ ಆದಾಯದ ಮೂಲಗಳನ್ನು ಘೋಷಿಸಲಾಗಿಲ್ಲ. ಆದ್ದರಿಂದ, ಈ ಸಮಯದಲ್ಲಿ, ಹಣಕಾಸಿನ ದೃಷ್ಟಿಯಿಂದ ಇದು ಸಂದಿಗ್ಧ ಪರಿಸ್ಥಿತಿಗೆ ಕಾರಣವಾಗುತ್ತದೆ.

ಭಾರತದ ಆರ್ಥಿಕತೆ ಕುರಿತ ಅಂಕಿ ಅಂಶಗಳ ಬಗ್ಗೆ ಅನುಮಾನಗಳಿವೆ. ಇದರ ಹಿಂದೆ ರಾಜಕೀಯ ಇದೆ ಎಂಬ ಆರೋಪ ಇದೆ. ಈ ಬಗ್ಗೆ ಏನು ಹೇಳುತ್ತೀರಿ?

ಉತ್ತಮ ನೀತಿ ನಿರೂಪಣೆಗೆ ಉತ್ತಮ ದತ್ತಾಂಶಗಳನ್ನು ಹೊಂದಿರುವುದು ಅತ್ಯಗತ್ಯ. ದತ್ತಾಂಶ ಸಂಗ್ರಹಣೆಯನ್ನು ಸುಧಾರಿಸುವಲ್ಲಿ ಭಾರತವು ಪ್ರಗತಿ ಸಾಧಿಸುತ್ತಿದೆ. ಆದರೆ ಕೆಲವೊಂದು ಸಮಸ್ಯೆಯೂ ಇದೆ. ಡೇಟಾ ಕವರೇಜ್‌ ಅಥವಾ ನೀವು ಬಳಸುವ ಡಿಫ್ಲೇಟರ್‌ಗಳಲ್ಲಿ ಸಮಸ್ಯೆಗಳಿವೆ.

ರಾಷ್ಟ್ರೀಯ ಬಳಕೆ ವೆಚ್ಚದ ಸಮೀಕ್ಷೆಯು ಜಾರಿಯಲ್ಲಿದೆ ಎಂದು ಕೇಳಿದ್ದೇನೆ. ಇದು ನಿಜಕ್ಕೂ ಕಾರ್ಯಗತಗೊಂಡಿದ್ದರೆ ಬಹಳ ಮುಖ್ಯ. ಪೀರಿಯಾಡಿಕ್‌ ಲೇಬರ್‌ ಸರ್ವೇ ಎಂಬ ಹೊಸದೊಂದು ಸಮೀಕ್ಷೆಯು ಹೆಚ್ಚಿನ ಡೇಟಾ ಮತ್ತು ಹೆಚ್ಚಿನ ಮಾಹಿತಿಯನ್ನು ಒದಗಿಸಲು ಅಗತ್ಯವಾಗಿರುತ್ತದೆ. ದತ್ತಾಂಶ ಸಂಗ್ರಹಣೆ ಎಂದಿಗೂ ಪರಿಪೂರ್ಣ ಅಲ್ಲ. ಆದರೆ ಹೆಚ್ಚು ಉತ್ತಮವಾದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು.

-  ಗೀತಾ ಗೋಪಿನಾಥ್‌, ಐಎಂಎಫ್‌ ಮುಖ್ಯ ಆರ್ಥಿಕ ತಜ್ಞೆ

 

click me!