
ಕಳೆದ ಒಂದು ದಶಕಗಳಿಂದ ಆನ್‌ಲೈನ್ ಶಾಪಿಂಗ್ ಪ್ರಮಾಣ ಏರಿಕೆಯಾಗುತ್ತಿದೆ. ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರಿಗೆ ಮೋಸ ಮಾಡುತ್ತಿರುತ್ತಾರೆ. ದುಬಾರಿ ಬೆಲೆಯ ಮೊಬೈಲ್‌ಗಳಲ್ಲಿ ಸೋಪ್ ಇರಿಸಿರುವಂತಯ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ವಿಶ್ವಾಸರ್ಹನೀಯ ಕಂಪನಿಗಳ ಆನ್‌ಲೈನ್ ಶಾಪಿಂಗ್‌ನಲ್ಲಿ ಮೋಸದ ಪ್ರಕರಣಗಳು ನಡೆಯುತ್ತಿರುತ್ತವೆ. ಇದೀಗ ಇ-ಕಾಮರ್ಸ್ ವೇದಿಕೆಯ ದೈತ್ಯ ಕಂಪನಿಯಾಗಿರುವ ಅಮೆಜಾನ್ ತನ್ನ ಗ್ರಾಹಕರ ಆರ್ಡರ್ ಸುರಕ್ಷಿತವಾಗಿಸಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಇನ್ಮುಂದೆ ಗ್ರಾಹಕರು ತಾವು ಸ್ವೀಕರಿಸುವ ಪಾರ್ಸೆಲ್ ಮೇಲೆ ಪಿಂಕ್ (ತಿಳಿ ಗುಲಾಬಿ ಬಣ್ಣ) ಗುರುತು ಕಂಡ್ರೆ ಸ್ವೀಕರಿಸದೇ ವಾಪಸ್ ಕಳುಹಿಸಿ ಮೋಸದಿಂದ ಪಾರಾಗಬಹುದಾಗಿದೆ.
ಆರ್ಡರ್‌ಗಳನ್ನು ಸುರಕ್ಷಿತವಾಗಿಸುವ ಹೊಸ ತಂತ್ರಜ್ಞಾನವನ್ನು ಅಮೆಜಾನ್ ಪರಿಚಯಿಸಿದೆ. ಇದರಿಂದ ಗ್ರಾಹಕರಿಗೆ ಮೋಸವಾಗೋದನ್ನು ತಡೆಯಲು ಅಮೆಜಾನ್ ಮುಂದಾಗಿದೆ. ಈಗ ಕಂಪನಿ ಮತ್ತು ಗ್ರಾಹಕರಿಗೆ ತಲುಪುವ ಮಾರ್ಗ ಮಧ್ಯೆದಲ್ಲಿ ಅಂದ್ರೆ ವಿತರಣೆ ವೇಳೆ ನಿಮ್ಮ ಪಾರ್ಸೆಲ್ ಹಾಳು ಮಾಡಿರೋದನ್ನು ಪತ್ತೆ ಮಾಡಲು ಅಮೆಜಾನ್ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಈ ವಿಧಾನದಿಂದ ಗ್ರಾಹಕರು ಪಾರ್ಸೆಲ್ ಸ್ವೀಕರಿಸುವ ವೇಳೆ ಈ ವಿಧಾನ ಬಳಸಬಹುದು. ಹೌದು, ಅಮೆಜಾನ್ ತನ್ನ ಪ್ಯಾಕೇಜಿಂಗ್‌ನಲ್ಲಿ ಯಾವುದೇ ರೀತಿಯ ಹಾಳುಮಾಡುವಿಕೆಯ ಬಗ್ಗೆ ಮಾಹಿತಿಯನ್ನು ನೀಡುವ ವಿಶೇಷ ಸೀಲುಗಳು ಮತ್ತು ಟೇಪ್‌ಗಳನ್ನು ಬಳಸಲು ಪ್ರಾರಂಭಿಸಿದೆ.
ಅಮೆಜಾನ್‌ನ ಹೊಸ ಭದ್ರತಾ ತಂತ್ರಜ್ಞಾನ!
ಅಮೆಜಾನ್ ಈಗ ತನ್ನ ಹೆಚ್ಚಿನ ಮೌಲ್ಯದ ಉತ್ಪನ್ನಗಳ ಪ್ಯಾಕೇಜಿಂಗ್‌ನಲ್ಲಿ ವಿಶೇಷ ರೀತಿಯ ಟೇಪ್ ಬಳಸುತ್ತಿದೆ. ಪ್ಯಾಕೇಜಿಂಗ್ ಮೇಲೆ ಸಣ್ಣ ಗುಲಾಬಿ ಮತ್ತು ಕೆಂಪು ಚುಕ್ಕೆಗಳಿವೆ. ತಾಪಮಾನಕ್ಕೆ ಒಡ್ಡಿಕೊಂಡಾಗ ಈ ಚುಕ್ಕೆಗಳು ತಮ್ಮ ಬಣ್ಣವನ್ನು ಬದಲಾಯಿಸುತ್ತವೆ. ಸಾಮಾನ್ಯವಾಗಿ ಕಳ್ಳರು ಪ್ಯಾಕೇಜಿಂಗ್ ಓಪನ್ ಮಾಡಲು ಹೀಟ್ ಗನ್‌ಗಳಂತಹ ಸಾಧನಗಳನ್ನು ಬಳಸುತ್ತಾರೆ. ಹೀಟ್ ಗನ್ ಬಳಕೆಯಿಂದ ಪ್ಯಾಕೇಜ್ ಸುಲಭವಾಗಿ ತೆರೆದು ಮತ್ತೆ ಅಂಟಿಸಬಹುದು. ಇದರಿಂದ ತಮ್ಮ ಕೈಗೆ ಸೇರುವ ಮುನ್ನವೇ ಪ್ಯಾಕೇಜ್ ಓಪನ್ ಆಗಿರೋದು ಗ್ರಾಹಕರ ಗಮನಕ್ಕೆ ಬರುತ್ತಿರಲಿಲ್ಲ.
ಟೇಪ್ ತೆರೆಯಲು ಹೀಟ್ ಗನ್ ಬಳಕೆ ಮಾಡುತ್ತಿದ್ದಂತೆ ಈ ಸ್ಮಾರ್ಟ್ ಟೇಪ್ ತಕ್ಷಣವೇ ಬಣ್ಣವನ್ನು ಬದಲಾಯಿಸುತ್ತದೆ. ಈ ಮೂಲಕ ನಿಮ್ಮ ಪಾರ್ಸೆಲ್ ಹಾಳು ಮಾಡಲಾಗಿದೆ ಎಂದು ಸೂಚಿಸುತ್ತದೆ.
ಗುಲಾಬಿ ಚುಕ್ಕೆ ಕಂಡರೆ ಏನು ಮಾಡಬೇಕು?
ನಿಮ್ಮ ಪಾರ್ಸೆಲ್ ಬಾಕ್ಸ್ ಮೇಲೆ ಈ ಗುಲಾಬಿ ಅಥವಾ ಬದಲಾದ ಚುಕ್ಕೆ ಕಂಡುಬಂದರೆ, ಮೊದಲು ಆ ಪಾರ್ಸೆಲ್ ಫೋಟೋ ಅಥವಾ ವಿಡಿಯೋ ತೆಗೆದುಕೊಳ್ಳಿ. ಇದು ನಿಮಗೆ ಪುರಾವೆಯಾಗುತ್ತದೆ. ಅದರ ನಂತರ ನೀವು ಅಮೆಜಾನ್‌ನಿಂದ ಆ ಪ್ಯಾಕೇಜ್ ಸ್ವೀಕರಿಸಲು ನಿರಾಕರಿಸಬಹುದು. ಪ್ಯಾಕೇಜ್ ನಿರಾಕರಿಸಲು ಕಾರಣ ಕೇಳಿದಾಗ ನೀವು ತೆಗೆದುಕೊಂಡಿರುವವ ಫೋಟೋ ಮತ್ತು ವಿಡಿಯೋವನ್ನು ಪುರಾವೆಯಾಗಿ ತೋರಿಸಬಹುದು.
ಗ್ರಾಹಕರು ಬಯಸಿದರೆ, ಗುಲಾಬಿ ಚುಕ್ಕೆ ತೋರಿಸುವ ಯಾವುದೇ ಪ್ಯಾಕೇಜ್ ಅನ್ನು ಸ್ವೀಕರಿಸಲು ನಿರಾಕರಿಸಬಹುದು ಎಂದು ಅಮೆಜಾನ್ ಹೇಳುತ್ತದೆ. ವಿತರಣೆಯ ಮೊದಲು ಯಾರೋ ಪಾರ್ಸೆಲ್ ಬಾಕ್ಸ್ ತೆರೆಯಲು ಪ್ರಯತ್ನಿಸಿದ್ದಾರೆ ಎಂದು ಇದು ಸ್ಪಷ್ಟಪಡಿಸುತ್ತದೆ.
ಈ ಹೊಸ ಉಪಕ್ರಮ ಏಕೆ ವಿಶೇಷವಾಗಿದೆ?
ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್ ವಿತರಣೆಗೆ ಸಂಬಂಧಿಸಿದ ಅನೇಕ ಮೋಸದ ಪ್ರಕರಣಗಳು ಬೆಳಕಿಗೆ ಬಂದಿವೆ, ಅಲ್ಲಿ ಗ್ರಾಹಕರಿಗೆ ದುಬಾರಿ ಗ್ಯಾಜೆಟ್‌ಗಳ ಬದಲಿಗೆ ಸೋಪ್, ಕಲ್ಲು ಅಥವಾ ಇಟ್ಟಿಗೆಯಂತಹ ವಸ್ತುಗಳನ್ನು ಕಳುಹಿಸಲಾಗುತ್ತಿತ್ತು. ಹಾಗಾಗಿ ಮೋಸದ ಪ್ರಕರಣಗಳ ತಡೆಗೆ ಅಮೆಜಾನ್ ಸ್ಮಾರ್ಟ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಈಗ ನೀವು ಯಾವುದೇ ದುಬಾರಿ ವಸ್ತುವನ್ನು ಆರ್ಡರ್ ಮಾಡಿದಾಗ, ಪ್ಯಾಕೇಜ್ ಸ್ವೀಕರಿಸುವಾಗ, ಅದರ ಮೇಲಿನ ಚುಕ್ಕೆಗಳನ್ನು ಖಂಡಿತವಾಗಿಯೂ ಪರಿಶೀಲಿಸಿ. ಎಲ್ಲವೂ ಸರಿಯಾಗಿದ್ದರೆ, ಪ್ಯಾಕೇಜ್ ತೆಗೆದುಕೊಳ್ಳಲು ಹಿಂಜರಿಯಬೇಡಿ, ಇಲ್ಲದಿದ್ದರೆ ಅದೇ ಸಮಯದಲ್ಲಿ ಅಮೆಜಾನ್ ಅನ್ನು ಸಂಪರ್ಕಿಸಿ. ಈ ತಂತ್ರಜ್ಞಾನದಿಂದ ಗ್ರಾಹಕರು ನಿರಾಳರಾಗುವುದಲ್ಲದೆ, ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್ ಅನ್ನು ಹೆಚ್ಚು ವಿಶ್ವಾಸಾರ್ಹವಾಗಿಸಲು ಸಾಧ್ಯವಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.