Personal Finance : ಐಎಂಪಿಎಸ್ ನಲ್ಲಿ ಹಣ ವರ್ಗಾವಣೆ ಮಾಡೋದು ಹೇಗೆ?

Published : Feb 18, 2023, 03:32 PM IST
Personal Finance : ಐಎಂಪಿಎಸ್ ನಲ್ಲಿ ಹಣ ವರ್ಗಾವಣೆ ಮಾಡೋದು ಹೇಗೆ?

ಸಾರಾಂಶ

ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ತಿಳಿಯೋದು ಸಾಕಷ್ಟಿದೆ. ಈಗಿನ ಹೊಸ ತಂತ್ರಜ್ಞಾನದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಬ್ಯಾಂಕ್ ನಮ್ಮ ಕೆಲಸವನ್ನು ಸುಲಭವಾಗಿಸಲು ಅನೇಕ ಸೇವೆಗಳನ್ನು ನೀಡ್ತಿದೆ. ಅದ್ರಲ್ಲಿ ಐಎಂಪಿಎಸ್ ಕೂಡ ಒಂದು.  

ಈಗಿನ ದಿನಗಳಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಎಲ್ಲವೂ ಆನ್ಲೈನ್. ಮನೆಯಲ್ಲಿ ಕುಳಿತು ಅರೆ ಕ್ಷಣದಲ್ಲಿ ಎಲ್ಲ ಕೆಲಸ ಮುಗಿಸಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಸರತಿ ಸಾಲಿನಲ್ಲಿ ನಿಂತು ಬ್ಯಾಂಕಿನ ಕೆಲಸ ಮಾಡ್ಬೇಕಾಗಿಲ್ಲ. ನಾವಿರುವ ಸ್ಥಳದಲ್ಲಿಯೇ ಬ್ಯಾಂಕ್ ಕೆಲಸ ಮುಗಿಸಬಹುದು. ನಾವಿಂದು ನಿಮ್ಮ ಕೆಲಸವನ್ನು ಸುಲಭ ಮಾಡಿರುವ ಪಾವತಿ ಸೇವೆ ಐಎಂಪಿಎಸ್ ಬಗ್ಗೆ ಮಾಹಿತಿ ನೀಡ್ತೇವೆ. 

ಐಎಂಪಿಎಸ್ (IMPS) ಅಂದ್ರೇನು? : ಐಎಂಪಿಎಸ್  ಮೂಲಕ NEFT ಮತ್ತು RTGS ನಂತೆ ನೀವು ಯಾರಿಗಾದ್ರೂ ಸುಲಭವಾಗಿ ಹಣವನ್ನು ಕಳುಹಿಸಬಹುದು. ಇದನ್ನು 2010 ರಲ್ಲಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಾರಂಭಿಸಿತು. ಬ್ಯಾಂಕ್ (Bank) ಖಾತೆಗಳ ನಡುವೆ ಹಣವನ್ನು ವರ್ಗಾವಣೆ ಮಾಡುವ ಅತ್ಯಂತ ವಿಶ್ವಾಸಾರ್ಹ ಮಾರ್ಗವೆಂದು ಇದನ್ನು ಪರಿಗಣಿಸಲಾಗಿದೆ. ನೀವು ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡಲು ಬಯಸಿದ್ರೆ ಮೊಬೈಲ್ (Mobile) ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ನೋಂದಾಯಿಸುವುದು ಅವಶ್ಯಕ. ಇಲ್ಲವೆಂದ್ರೆ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನೀವು ಹೊಂದಿರಬೇಕು. ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿ ನಿಮಗೆ ಪಿನ್ ನೀಡಲಾಗುತ್ತದೆ. ಅದನ್ನು ಪಾಸ್‌ವರ್ಡ್ (Password) ಆಗಿ ಬಳಸಬಹುದು. ಇದರ ನಂತ್ರ ನಿಮ್ಮ ಬ್ಯಾಂಕ್ ಖಾತೆಯನ್ನು ಬೇರೆ ಯಾವುದೇ ಖಾತೆ (Account) ಗೆ ಲಿಂಕ್ ಮಾಡಬಹುದು ಮತ್ತು ಹಣವನ್ನು ವರ್ಗಾಯಿಸಬಹುದು.

ಐಎಂಪಿಎಸ್ ಯಾವ ರೀತಿ ಸೇವೆ ನೀಡುತ್ತದೆ? : ಇದ್ರಲ್ಲಿ ಪ್ರತಿದಿನ ಒಂದು ಲಕ್ಷ ರೂಪಾಯಿಗಳವರೆಗೆ ವಹಿವಾಟು ನಡೆಸಬಹುದು. ಪ್ರತಿ ಬ್ಯಾಂಕ್ ಐಎಂಪಿಎಸ್ ಬಳಸುವ ಗ್ರಾಹಕರಿಂದ ಶುಲ್ಕ ವಸೂಲಿ ಮಾಡುತ್ತದೆ.  ಇದು 5 ರಿಂದ 15 ರೂಪಾಯಿವರೆಗಿರುತ್ತದೆ. ಐಎಂಪಿಎಸ್ ಮೂಲಕ ನೀವು ದೇಶದಾದ್ಯಂತ ಬ್ಯಾಂಕ್‌ಗಳಲ್ಲಿ ತ್ವರಿತ ನಿಧಿ ವರ್ಗಾವಣೆ ಮಾಡಬಹುದು. ಐಎಂಪಿಎಸ್ ಹಣವನ್ನು ವರ್ಗಾಯಿಸಲು ವೇಗವಾದ, ಸುರಕ್ಷಿತವಾದ ಮತ್ತು ವಿಶ್ವಾಸಾರ್ಹ ಮಾರ್ಗವಾಗಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದನ್ನು ನೀವು ಬಳಸಬಹುದು.  

ವೇಟರ್ ಆಗಿದ್ದ ಮಹಿಳೆ ಇಂದು 105 ಕೋಟಿ ರೂ. ಸಂಪಾದಿಸುವ ಬ್ಲಾಗರ್!

ಈ ತ್ವರಿತ ಪಾವತಿ ಸೇವೆಯನ್ನು ನೀವು ಸಾರ್ವಜನಿಕ ಮತ್ತು ಬ್ಯಾಂಕ್ ರಜಾದಿನಗಳಲ್ಲಿ ಕೂಡ ಬಳಸಬಹುದು. ಇದರ ಬಳಕೆಗೆ ಯಾವುದೇ ಸಮಯದ ಮಿತಿಯಿಲ್ಲ. ಮೊಬೈಲ್ ಫೋನ್‌ಗಳ ಮೂಲಕ ಮಾಡುವ ವಹಿವಾಟುಗಳಿಗೆ ಬ್ಯಾಂಕ್ ಖಾತೆ ಸಂಖ್ಯೆ ಅಗತ್ಯವಿಲ್ಲ. ಈ ವಹಿವಾಟು ಪೂರ್ಣಗೊಂಡ ನಂತರ ಪಾವತಿದಾರ ಮತ್ತು ಪಾವತಿಸುವ ವ್ಯಕ್ತಿಗೆ ಬ್ಯಾಂಕ್ ನಿಂದ ಸಂದೇಶ ಬರುತ್ತದೆ. ನೀವು ಇದ್ರಲ್ಲಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ಹಣವನ್ನು ವರ್ಗಾಯಿಸುವುದರ ಜೊತೆಗೆ, ಪಾವತಿಗಳನ್ನು ಸ್ವೀಕರಿಸಲು, ಇತರ ವ್ಯಾಪಾರಿಗಳಿಗೆ ಪಾವತಿ ಮಾಡಲು, ಮೊಬೈಲ್ ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡಲು ಬಳಸಬಹುದು.  

Street Food : ಸೀಬೆ ಹಣ್ಣಂತೆ ಬೀದಿಗೆ ಬಂದ ಸ್ಟ್ರಾಬೆರಿ.. ! ಈ ವರ್ಷ ಸ್ಪರ್ಧೆ ಜೋರು

ಐಎಂಪಿಎಸ್ ನಲ್ಲಿ ಹಣ ವರ್ಗಾವಣೆ ಹೇಗೆ? : ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡಲು ಬಯಸಿದ್ದರೆ ಮೊಬೈಲ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಮಾಡಬೇಕು. ಇದರ ನಂತರ ಮುಖ್ಯ ಪುಟ ತೆರೆಯುತ್ತದೆ. ಅದರಲ್ಲಿ ನಿಧಿ ವರ್ಗಾವಣೆ  ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಐಎಂಪಿಎಸ್ ಆಯ್ಕೆ ಮಾಡಬೇಕು. ನಂತ್ರ MMID ಮತ್ತು ನಿಮ್ಮ MPIN ಅನ್ನು ಇಲ್ಲಿ ನಮೂದಿಸಬೇಕು. ವರ್ಗಾವಣೆ ಮಾಡಬೇಕಾದ ಮೊತ್ತವನ್ನು ನಮೂದಿಸಿ, ದೃಢೀಕರಿಸಿ ಕ್ಲಿಕ್ ಮಾಡಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಗೆ  ಒಟಿಪಿ ಬರುತ್ತದೆ. ಇದನ್ನು ನಮೂದಿಸಿದ ನಂತ್ರ ನಿಮ್ಮ ಹಣ ವರ್ಗಾವಣೆಯಾಗುತ್ತದೆ. ನಂತ್ರ ಬ್ಯಾಂಕ್ ನಿಂದ ಹಣ ವರ್ಗಾವಣೆಯಾದ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!