ಅಂಬಾನಿ ರೀತಿ ಕೋಟಿ ಆದಾಯಗಳಿಸ ಬೇಕಾ? ಉದ್ಯಮಿಯ ಯಶಸ್ಸಿನ ಸೂತ್ರ ಹೇಳಿದ ಗೊಯೆಂಕಾ

Published : Mar 13, 2025, 07:54 PM ISTUpdated : Mar 13, 2025, 08:01 PM IST
ಅಂಬಾನಿ ರೀತಿ ಕೋಟಿ ಆದಾಯಗಳಿಸ ಬೇಕಾ? ಉದ್ಯಮಿಯ ಯಶಸ್ಸಿನ ಸೂತ್ರ ಹೇಳಿದ ಗೊಯೆಂಕಾ

ಸಾರಾಂಶ

ನಿಮಗೆ ಮುಕೇಶ್ ಅಂಬಾನಿ ರೀತಿ ಶ್ರೀಮಂತರಾಗಬೇಕಾ, ಕೋಟಿ ಕೋಟಿ ಆದಾಯ ಗಳಿಸಬೇಕಾ? ಇದಕ್ಕೆ ಮತ್ತೊಬ್ಬ ಶ್ರೀಮಂತ ಉದ್ಯಮಿ ಹರ್ಷಾ ಗೊಯೆಂಕಾ ಸೂತ್ರ ಹೇಳಿದ್ದಾರೆ. ಇದು ಅಂಬಾನಿ ಪಾಲಿಸುವ ಸೂತ್ರ. ಈ ಯಶಸ್ಸಿನ ಮಾರ್ಗ ನಿಮಗೂ ಗೊತ್ತಾದರೆ, ಸೋಲು ಮಾತಿಲ್ಲ.  

ಮುಂಬೈ(ಮಾ.13) ಉದ್ಯಮಿ ಮುಕೇಶ್ ಅಂಬಾನಿ ಪ್ರತಿ ದಿನ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಾರೆ. ಅಂಬಾನಿ ಅದಾಯ ಲಕ್ಷ ಲಕ್ಷ ಕೋಟಿ ರೂಪಾಯಿ. ರಿಲಯನ್ಸ್ ಗ್ರೂಪ್ ಸಂಸ್ಥೆ ನಡೆಸುತ್ತಿರುವ ಮುಕೇಶ್ ಅಂಬಾನಿ ಉದ್ಯಮ ಆರಂಭಿಸುವ, ಉದ್ಯಮ ನಡೆಸುತ್ತಿರುವರಿಗೆ ಮಾದರಿಯಾಗಿದ್ದಾರೆ. ಅಂಬಾನಿ ರೀತಿಯ ಯಶಸ್ಸು ಬೇಕು ಎಂದು ಹಲವರು ಬಯಸುತ್ತಾರೆ. ಇನ್ನು ಕೆಲವರು ಏನಾದರೂ ಉದ್ಯಮ ಆರಂಭಿಸಿ ಅಂಬಾನಿ ರೀತಿ  ಆದಾಯ ಗಳಿಸಬೇಕು ಅನ್ನೋ ಕನಸು ಕಟ್ಟಿರುತ್ತಾರೆ. ಮುಕೇಶ್ ಅಂಬಾನಿ ರೀತಿ ಆದಾಯ, ಯಶಸ್ಸು ಗಳಿಸಬೇಕು ಎಂದರೆ ಅದಕ್ಕೊಂದು ಸೂತ್ರವಿದೆ. ಈ ಸೂತ್ರ ಪಾಲಿಸಿದರೆ ಸೋಲುವ ಮಾತಿಲ್ಲ. ಅಷ್ಟಕ್ಕೂ ಈ ಸೂತ್ರವನ್ನು ಮತ್ತೊಬ್ಬ ಉದ್ಯಮಿ ಹರ್ಷಾ ಗೋಯೆಂಕಾ ಹಂಚಿಕೊಂಡಿದ್ದಾರೆ. ಅಂಬಾನಿಯ ಯಶಸ್ಸಿನ ಸೂತ್ರವನ್ನು ಯಾರೇ ಪಾಲಿಸಿದರೂ ಗೆಲುವು ಖಚಿತ.

ಮುಕೇಶ್ ಅಂಬಾನಿ ಕೆಲ ವರ್ಷಗಳ ಹಿಂದೆ ತಮ್ಮ ಯಶಸ್ಸಿನ ಸೂತ್ರ ಕುರಿತು ಮಾತಾಡಿದ್ದಾರೆ. ಇದೀಗ ಈ ವಿಡಿಯೋವನ್ನು ಹರ್ಷಾ ಗೊಯೆಂಕಾ ಹಂಚಿಕೊಂಡಿದ್ದಾರೆ. ಇಲ್ಲಿ ಮುಕೇಶ್ ಅಂಬಾನಿ ಯಶಸ್ಸಿಗೆ, ಉತ್ತಮ ಆದಾಯಗಳಿಸಲು ಆಯ್ಕೆ ಮಾಡಿಕೊಂಡ ದಾರಿ ಕುರಿತು ಹೇಳಿದ್ದಾರೆ. ಈ ಮಾರ್ಗ ಯಾರೇ ಅನುಸರಿಸಿದರೂ ಅವರಿಗೆ ಗೆಲುವು ಖಚಿತ ಎಂದಿದ್ದಾರೆ.

₹15,000 ಕೋಟಿ ಆ್ಯಂಟಿಲಿಯಾ ಮಾತ್ರವಲ್ಲ, ಅಂಬಾನಿ ಬಳಿ ಇದೆ 5ಕ್ಕೂ ಹೆಚ್ಚು ದುಬಾರಿ ಮನೆ

ಹರ್ಷಾ ಗೋಯೆಂಕಾ  ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?
ಹರ್ಷಾ ಗೋಯೆಂಕಾ ಹಂಚಿಕೊಂಡಿರುವುದು ಮುಕೇಶ್ ಅಂಬಾನಿ ಯಶ್ಸಸಿನ ಮಾರ್ಗ ಕುರಿತು ಹೇಳುತ್ತಿರುವ ವಿಡಿಯೋ. ಈ ವಿಡಿಯೋದಲ್ಲಿ ಮುಕೇಶ್ ಅಂಬಾನಿ, ಒಬ್ಬ ಗೆಲುವು ಸಾಧಿಸಿದವನ ಮೈಂಡ್ ಸೆಟ್ ಏನಿರುತ್ತೆ? ಹೇಗಿರುತ್ತೆ? ಅವನ ಯಶಸ್ಸಿನಲ್ಲಿ ಹೇಗೆ ಪರಿಣಾಮ ಬೀರುತ್ತೆ ಅನ್ನೋ ಕುರಿತು ಮಕೇಶ್ ಅಂಬಾನಿ ತಮ್ಮ ಸಾಧನೆಯ ಹಾದಿಯನ್ನು ಚೊಕ್ಕವಾಗಿ ಹೇಳಿದ್ದಾರೆ. ಈ ವಿಡಿಯೋದಲ್ಲಿ ಒಂದೆರೆಡು ಸಾಲಿನಲ್ಲಿ ಯಶಸ್ಸಿನ ಗುಟ್ಟನ್ನು ಅಂಬಾನಿ ಹೇಳುತ್ತಾರೆ. ಅಂಬಾನಿ ತಮ್ಮ ಯಶ್ಸಸಿಗೆ ಅನುಸರಿಸುತ್ತಿರುವುದು ಸ್ವಾಮಿ ವಿವೇಕಾನಂದರು ಹೇಳಿದ ಮಾತನ್ನು.

ನನಗೆ ಹಾಗೂ ನನ್ನ ಬದುಕಿಗೆ ಪ್ರೇರಣೆಯಾದ ಸ್ವಾಮಿ ವಿವೇಕಾನಂದರ ಮಾತುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ವಿವೇಕಾನಂದರು ಹೇಳುತ್ತಾರೆ, ನೀವು ಒಮ್ಮೆ ಒಂದು ಐಡಿಯಾ ಅಥವಾ ಯೋಜನೆ ಅಥವಾ ಆಲೋಚನೆಯನ್ನು ತೆಗೆದುಕೊಳ್ಳಿ. ಆ ಒಂದು .ಯೋಜನೆ ಅಥವಾ ಐಡಿಯಾವನ್ನು ನಿಮ್ಮ ಜೀವನವಾಗಿಸಿಕೊಳ್ಳಿ. ಅದರ ಬಗ್ಗೆ ಕನಸು ಕಾಣಿ, ಅದರಲ್ಲೇ ಜೀವಿಸಿ, ಅದನ್ನೇ ಆಲೋಚಿಸಿ. ನಿಮ್ಮ ಮೆದುಳು, ನರ ಸೇರಿದಂತೆ ದೇಹದ ಎಲ್ಲಾ ಭಾಗ ಈ ಐಡಿಯಾ ತುಂಬಿಕೊಳ್ಳಲಿ. ಈ ವೇಳೆ ನಿಮ್ಮ ಇತರ ಐಡಿಯಾ ಅಥವಾ ಆಲೋಚನೆಯನ್ನು ಪಕ್ಕಕ್ಕೆ ಇಟ್ಟುಬಿಡಿ. ಒಂದರ ಬಗ್ಗೆ ಗಮನಕೇಂದ್ರೀಕರಿಸಿ, ಕೆಲಸ ಮಾಡಿ. ಯಶಸ್ಸಿಗೆ ಇನ್ನೊಂದು ಮಾರ್ಗ ಬೇಕಿಲ್ಲ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

ಹರ್ಷಾ ಗೋಯೆಂಕಾ ಹಂಚಿಕೊಂಡ ವಿಡಿಯೋ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಹಲವರು ಕಮೆಂಟ್ ಮಾಡಿದ್ದಾರೆ. ಮುಕೇಶ್ ಅಂಬಾನಿಯ ಯಶಸ್ಸಿನ ಸೂತ್ರ ನಮಗೆ ತಿಳಿಯಿತು. ಈಗ ನಿಮ್ಮ ಯಶಸ್ಸಿನ ಸೂತ್ರ ಯಾವುದು ಎಂದು ಹರ್ಷಾ ಗೋಯೆಂಕಾಗೆ ಹಲವರು ಪ್ರಶ್ನಿಸಿದ್ದಾರೆ. ಇದಕ್ಕೆ ಹರ್ಷಾ ಗೋಯೆಂಕಾ ಉತ್ತರಿಸಿದ್ದಾರೆ. ಮೊದಲು ನನಗೆ ಯಶಸ್ಸು ಸಿಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಕೇಶ್ ನೀತಾ ಅಂಬಾನಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ, ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!