ಇನ್ಫೋಸಿಸ್‌ಗೆ 32000 ಕೋಟಿ ರು. ತೆರಿಗೆ ನೋಟಿಸ್‌?: ಈ ಮೊತ್ತ ಸಂಸ್ಥೆಯ ಒಂದಿಡೀ ವರ್ಷದ ಲಾಭಕ್ಕೆ ಸಮ

By Kannadaprabha News  |  First Published Aug 1, 2024, 9:14 AM IST

ಭಾರತದ 2ನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ, ಬೆಂಗಳೂರು ಮೂಲದ ಇನ್ಫೋಸಿಸ್‌ಗೆ ಜಿಎಸ್ಟಿ ಗುಪ್ತಚರ ಪ್ರದಾನ ನಿರ್ದೇಶನಾಲಯವು 32 ಸಾವಿರ ಕೋಟಿ ರು. ತೆರಿಗೆ ಕಟ್ಟುವಂತೆ ನೋಟಿಸ್‌ ಜಾರಿ ಮಾಡಿದೆ ಎನ್ನಲಾಗಿದೆ.  


ನವದೆಹಲಿ: ಭಾರತದ 2ನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ, ಬೆಂಗಳೂರು ಮೂಲದ ಇನ್ಫೋಸಿಸ್‌ಗೆ ಜಿಎಸ್ಟಿ ಗುಪ್ತಚರ ಪ್ರದಾನ ನಿರ್ದೇಶನಾಲಯವು 32 ಸಾವಿರ ಕೋಟಿ ರು. ತೆರಿಗೆ ಕಟ್ಟುವಂತೆ ನೋಟಿಸ್‌ ಜಾರಿ ಮಾಡಿದೆ ಎನ್ನಲಾಗಿದೆ.  ವಿಶೇಷವೆಂದರೆ ಜಿಎಸ್ಟಿಯ ವೆಬ್‌ಸೈಟ್‌ ಅಭಿವೃದ್ಧಿಪಡಿಸಿರುವುದೇ ಇನ್ಫೋಸಿಸ್‌. ಜೊತೆಗೆ ತೆರಿಗೆ ವಂಚನೆ ಆರೋಪದಡಿ ಕಟ್ಟಲು ಸೂಚಿಸಲಾಗಿರುವ 32,000 ಕೋಟಿ ರು.ಮೊತ್ತ ಕಂಪನಿಯ ಒಂದಿಡೀ ವರ್ಷದ ಲಾಭಕ್ಕೆ ಸಮ. ಈ ತೆರಿಗೆ ನೋಟಿಸ್‌ ಕುರಿತು ಇನ್ಫೋಸಿಸ್‌ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಏನಿದು ಪ್ರಕರಣ?:

Tap to resize

Latest Videos

undefined

ಇನ್ಪೋಸಿಸ್‌ ಸಂಸ್ಥೆ ತನ್ನ ವಿದೇಶಿ ಗ್ರಾಹಕರ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ವಿದೇಶಗಳಲ್ಲೇ ತನ್ನ ಕೆಲವು ಶಾಖೆಗಳನ್ನು ತೆರೆದಿದೆ. 2017-18ರಿಂದ 2021-22ರ ಅವಧಿಯಲ್ಲಿ ಇನ್ಪೋಸಿಸ್‌ ಈ ವಿದೇಶಿ ಶಾಖೆಗಳ ಮೂಲಕ ನೀಡಿದ ಸೇವೆಗೆ ಐಜಿಎಸ್‌ಟಿ (ಇಂಟಿಗ್ರೇಟೆಡ್‌ ಗೂಡ್ಸ್‌ ಆ್ಯಂಡ್‌ ಸರ್ವೀಸ್‌ ಟ್ಯಾಕ್ಸ್‌) ಕಟ್ಟಬೇಕಿತ್ತು. ಆದರೆ ಈ ತೆರಿಗೆಯನ್ನು ಅದು ಕಟ್ಟಿಲ್ಲ. ಇದು ತೆರಿಗೆ ವಂಚನೆ ಎಂದು ಪರಿಗಣಿತವಾಗುತ್ತದೆ. ಹೀಗಾಗಿ ಈ ಅವಧಿಗೆ ಪಾವತಿಸದೇ ಉಳಿದ 32403 ಕೋಟಿ ರು. ಜಿಎಸ್ಟಿ ಬಾಕಿ ಪಾವತಿಸುವಂತೆ ಇನ್ಪೋಸಿಸ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಭಾರತೀಯರ ಮೆದುಳನ್ನು ವಿದೇಶಿಯರಿಗೆ ಅಡವಿಟ್ಟ ನಾರಾಯಣ ಮೂರ್ತಿ ಅವಕಾಶವಾದಿ: ಲೇಖಕ ರಾಜೀವ್‌ ಮಲ್ಹೋತ್ರಾ ಟೀಕೆ!

ತೆರಿಗೆ ಸಂಸ್ಥೆ ವಾದ ಏನು?:

ಐಜಿಎಸ್ಟಿ ನಿಯಮಗಳ ಅನ್ವಯ, ಇನ್ಫೋಸಿಸ್‌ ತನ್ನ ವಿದೇಶಿ ಶಾಖೆಗಳ ಮೂಲಕ ನಿರ್ವಹಿಸಿದ ಸೇವೆಯನ್ನು ಮೂಲ ಕಂಪನಿಯ ಮೂಲಕ ನೀಡಿದ ಸೇವೆ ಎಂದೇ ಪರಿಗಣಿಸಲಾಗುತ್ತದೆ. ಆರ್‌ಸಿಎಂ (ರಿವರ್ಸ್‌ ಚಾರ್ಜ್‌ ಮೆಕಾನಿಸಂ) ಅನ್ವಯ, ಸೇವೆ ನೀಡಿದವರ ಬದಲಾಗಿ, ಸೇವೆ ಸ್ವೀಕರಿಸಿದವರು ತೆರಿಗೆ ಪಾವತಿಸಬೇಕಿದೆ. ಜೊತೆಗೆ ಇನ್ಫೋಸಿಸ್‌ ತನ್ನ ವಿದೇಶಿ ಶಾಖೆಗಳ ವೆಚ್ಚವನ್ನು ರಫ್ತು ಇನ್ವಾಯ್ಸ್‌ ಮೂಲಕ ರೀಫಂಡ್‌ಗೆ ಬಳಸಿಕೊಂಡಿದೆ. ಹೀಗಾಗಿ ನಿಯಮಗಳ ಉಲ್ಲಂಘನೆ ಕಾರಣಕ್ಕೆ ಕಂಪನಿಗೆ 32403 ಕೋಟಿ ರು. ತೆರಿಗೆ ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ವರ್ಷಾಂತ್ಯಕ್ಕೆ ಹಳದಿ ಮೆಟ್ರೋ ಓಪನ್, ಇನ್ಫೋಸಿಸ್ ಅನುದಾನಿತ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಹೈಟೆಕ್ ಸೌಲಭ್ಯ!

click me!