ಜಿಎಸ್ಟಿ ಇಳಿಕೆಯಿಂದ ಕೇಂದ್ರಕ್ಕೆ ಕೇವಲ ₹3,700 ಕೋಟಿ ನಷ್ಟ

Kannadaprabha News   | Kannada Prabha
Published : Sep 06, 2025, 05:35 AM IST
GST Rate Cuts: What’s Cheaper Now? Check Full List of Reduced Items

ಸಾರಾಂಶ

ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‌ಟಿ) ಸರಳೀಕರಣದಿಂದಾಗಿ ಕೇಂದ್ರ ಸರ್ಕಾರಕ್ಕೆ ದೊಡ್ಡ ಹೊಡೆತವೇನೂ ಆಗುವುದಿಲ್ಲ. ಕೇವಲ 3,700 ಕೋಟಿ ರು. ನಷ್ಟವಷ್ಟೇ ಆಗಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿ ಹೇಳಿದೆ.

ಕೋಲ್ಕತಾ : ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಸರಳೀಕರಣದಿಂದಾಗಿ ಕೇಂದ್ರ ಸರ್ಕಾರಕ್ಕೆ ದೊಡ್ಡ ಹೊಡೆತವೇನೂ ಆಗುವುದಿಲ್ಲ. ಕೇವಲ 3,700 ಕೋಟಿ ರು. ನಷ್ಟವಷ್ಟೇ ಆಗಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿ ಹೇಳಿದೆ.

‘ಜಿಎಸ್‌ಟಿ ಸರಳೀಕರಣದಿಂದಾಗಿ 48 ಸಾವಿರ ಕೋಟಿ ರು.ನಷ್ಟು ವಾರ್ಷಿಕ ನಷ್ಟ ಆಗಲಿದೆ ಎಂದು ಕೇಂದ್ರ ಅಂದಾಜಿಸಿದೆ. ಆದರೆ ಎಸ್‌ಬಿಐ ವರದಿ ಪ್ರಕಾರ, ಜಿಎಸ್‌ಟಿ ಸರಳೀಕರಣದಿಂದಾಗಿ ಆರ್ಥಿಕ ಬೆಳವಣಿಗೆ ಮತ್ತು ಖರೀದಿಗೆ ಉತ್ತೇಜನ ಸಿಗಲಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೆ ಕನಿಷ್ಠ 3700 ಕೋಟಿ ರು.ನಷ್ಟು ನಷ್ಟವಷ್ಟೇ ಆಗಲಿದೆ. ವಿತ್ತೀಯ ಕೊರತೆ ಮೇಲೆ ಇದು ಗಂಭೀರ ಪರಿಣಾಮವನ್ನೇನೂ ಬೀರುವುದಿಲ್ಲ’ ಎಂದಿದೆ.

ದೇಶದಲ್ಲಿ ಸದ್ಯ ಶೇ.28, ಶೇ.18, ಶೇ.12 ಮತ್ತು ಶೇ.5ರಷ್ಟು ಹೀಗೆ ನಾಲ್ಕು ಸ್ಲ್ಯಾಬ್‌ಗಳಲ್ಲಿ ಜಿಎಸ್ಟಿ ವಿಧಿಸಲಾಗುತ್ತಿದೆ. ಆದರೆ ಇತ್ತೀಚೆಗೆ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಆ ಸ್ಲ್ಯಾಬ್‌ಗಳನ್ನು ನಾಲ್ಕರಿಂದ ಎರಡಕ್ಕಿಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಇನ್ನು ಮುಂದೆ ದೇಶದಲ್ಲಿ ಶೇ.5 ಮತ್ತು ಶೇ.12ರಷ್ಟು ತೆರಿಗೆ ಮಾತ್ರ ಚಾಲ್ತಿಯಲ್ಲಿರಲಿದೆ. ತಂಬಾಕು, ಐಷಾರಾಮಿ ವಸ್ತು, ಸೇವೆಗಳಿಗೆ ಮಾತ್ರ ಶೇ.40ರಷ್ಟು ಪ್ರತ್ಯೇಕ ತೆರಿಗೆ ಹಾಕಲು ನಿರ್ಧರಿಸಲಾಗಿದೆ.

- ಜನರು ಹೆಚ್ಚು ಖರೀದಿಸುವ ಕಾರಣ ನಷ್ಟ ಇಳಿಕೆ

- ₹48000 ಕೋಟಿ ನಷ್ಟ ಎಂಬ ಅಂದಾಜು ಸರಿಯಲ್ಲ

- ಎಸ್‌ಬಿಐ ಸಂಶೋಧನಾ ವರದಿಯಲ್ಲಿ ಉಲ್ಲೇಖ

- ಕೇಂದ್ರ ಸರ್ಕಾರಕ್ಕೆ ಇದರಿಂದ ದೊಡ್ಡ ಹೊಡೆತ ಇಲ್ಲ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!