
ನವದೆಹಲಿ(ಡಿ.28): ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಈರುಳ್ಳಿ ರಫ್ತು ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸಿದೆ.
ಪ್ರಸ್ತುತ, ಈರುಳ್ಳಿ ವ್ಯಾಪಾರಿಗಳು ಭಾರತದ ವ್ಯಾಪಾರಿಗಳ ರಫ್ತು ಯೋಜನೆಯಡಿಯಲ್ಲಿ ತಾಜಾ ಬೆಳೆಗೆ ಶೇ. 5 ರಫ್ತು ಪ್ರೋತ್ಸಾಹಧನ ಪಡೆಯುತ್ತಿದ್ದಾರೆ.
ಇದೀಗ ರೈತರ ಹಿತಾಸಕ್ತಿಯಿಂದ ಈ ಪ್ರೋತ್ಸಾಹಧನವನ್ನು ಶೇ.10ಕ್ಕೆ ಏರಿಸಲಾಗಿದೆ. ಇದು ಸ್ಥಳೀಯ ಮಾರುಕಟ್ಟೆಗಳಲ್ಲಿ ಈರುಳ್ಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಸಹಾಯ ಮಾಡಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.