ಅಕ್ಟೋಬರ್ ತಿಂಗಳಲ್ಲಿ ಅನೇಕ ರಜೆಗಳಿರುವ ಕಾರಣ ಟೂರ್ ಪ್ಲ್ಯಾನ್ ಮಾಡುತ್ತಿರೋರಿಗೆ ಗುಡ್ ನ್ಯೂಸ್ ಇದೆ. ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಲು ನೆರವು ನೀಡುವ ಹೊಸ ಫೀಚರ್ ಅನ್ನು ಗೂಗಲ್ ಫ್ಲೈಟ್ಸ್ ಪರಿಚಯಿಸಿದೆ. ಹಾಗಾದ್ರೆ ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಇದರ ವಿಶೇಷತೆಯೇನು? ಇಲ್ಲಿದೆ ಮಾಹಿತಿ.
ನವದೆಹಲಿ (ಆ.30): ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಲು ಅನುಕೂಲ ಕಲ್ಪಿಸುವ ಹೊಸ ಫೀಚರ್ ಅನ್ನು ಗೂಗಲ್ ಫ್ಲೈಟ್ಸ್ ಪರಿಚಯಿಸಿದೆ. ಇದು ವಿಮಾನ ಪ್ರಯಾಣದ ಮೇಲಿನ ಹಣವನ್ನು ಉಳಿತಾಯ ಮಾಡಲು ಪ್ರವಾಸಿಗರಿಗೆ ನೆರವು ನೀಡಲಿದೆ. ಈ ಹೊಸ ಫೀಚರ್ ಬಗ್ಗೆ ಸೋಮವಾರವಷ್ಟೇ ಬ್ಲಾಗ್ ಪೋಸ್ಟ್ ಮೂಲಕ ಗೂಗಲ್ ಮಾಹಿತಿ ನೀಡಿದೆ. ಈ ಹೊಸ ಫೀಚರ್ ವಿಮಾನ ಟಿಕೆಟ್ ಗಳನ್ನು ಬುಕ್ ಮಾಡಲು ಯಾವ ಅವಧಿ ಹೆಚ್ಚು ಬಜೆಟ್ ಸ್ನೇಹಿಯಾಗಿದೆ ಎಂಬ ಮಾಹಿತಿಯನ್ನು ಒದಗಿಸಲಿದೆ. ಇನ್ನು ಇದು ಈಗಾಗಲೇ ಗೂಗಲ್ ಪ್ಲ್ಯಾಟ್ ಫಾರ್ಮ್ ನಲ್ಲಿ ಲಭ್ಯವಿರುವ ಪ್ರೈಸ್ ಟ್ರ್ಯಾಕಿಂಗ್ ಅಲರ್ಟ್ಸ್ ಹಾಗೂ ಪ್ರೈಸ್ ಗ್ಯಾರಂಟಿ ಆಯ್ಕೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಈ ಹೊಸ ಫೀಚರ್ ಮೂಲಕ ವಿಮಾನ ಟಿಕೆಟ್ ಗಳನ್ನು ಬುಕ್ ಮಾಡಲು ಯಾವ ಸಮಯ ಅತ್ಯಂತ ಅಗ್ಗವಾಗಿದೆ ಎಂಬ ಮಾಹಿತಿ ಒದಗಿಸುವ ಕಾರ್ಯಕ್ಕೆ ಹೊಸ ಆಯಾಮ ನೀಡೋದಾಗಿ ಗೂಗಲ್ ಭರವಸೆ ನೀಡಿದೆ. ವಿಶ್ವಾಸಾರ್ಹ ಟ್ರೆಂಡ್ ಡಾಟಾದ ಮೂಲಕ ನೀವು ಹುಡುಕಿದಾಗ ನೀವು ಆಯ್ಕೆ ಮಾಡಿದ ದಿನಾಂಕಗಳು ಹಾಗೂ ಸ್ಥಳಗಳಿಗೆ ಸಂಬಂಧಿಸಿ ಯಾವಾಗ ವಿಮಾನ ಟಿಕೆಟ್ ಬುಕ್ ಮಾಡೋದು ಹೆಚ್ಚು ಅಗ್ಗವಾಗಿದೆ ಎಂಬ ಮಾಹಿತಿ ಸಿಗುತ್ತದೆ ಎಂದು ಗೂಗಲ್ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ.
ಹೊಸ ಫೀಚರ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಹೊಸ ಗೂಗಲ್ ಫೀಚರ್ ನಿಮಗೆ ನೀವು ಪ್ರವಾಸಕ್ಕೆ ಹೊರಡುವ ಎರಡು ತಿಂಗಳು ಮುಂಚೆ ಟಿಕೆಟ್ ಬುಕ್ ಮಾಡಿದ್ರೆ ದರ ಕಡಿಮೆಯಿದೆ ಎಂಬ ಮಾಹಿತಿ ತೋರಿಸುತ್ತದೆ ಎಂದು ಭಾವಿಸೋಣ. ಪ್ರಸ್ತುತ ನೀವು ಈಗ ಅದೇ ಅವಧಿಯಲ್ಲಿದ್ದೀರ ಎಂದು ಭಾವಿಸೋಣ. ಆಗ ನಿಮಗೆ ಕೂಡ ಇನ್ನು ವಿಮಾನದ ದರ ತಗ್ಗುವುದಿಲ್ಲ ಎಂಬ ವಿಶ್ವಾಸವಿದ್ರೆ ಆ ಸಮಯದಲ್ಲೇ ಟಿಕೆಟ್ ಬುಕ್ ಮಾಡಬಹುದು. ಇಲ್ಲವೇ ಇನ್ನೂ ತಗ್ಗುತ್ತದೆ ಎಂಬ ನಿರೀಕ್ಷೆಯಿದ್ದರೆ ಕಾಯುವ ನಿರ್ಧಾರ ಕೂಡ ಕೈಗೊಳ್ಳಬಹುದು. ಈ ಹೊಸ ಫೀಚರ್ ಗೂಗಲ್ ಫ್ಲೈಟ್ಸ್ ನಲ್ಲಿ ಈ ಹಿಂದಿನ ಟಿಕೆಟ್ ದರಗಳ ಪ್ಯಾಟರ್ನ್ ನೋಡಿ ಸಿದ್ಧಪಡಿಸಿರುವ ಮಾಹಿತಿಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ.
ವಿಮಾನಗಳಲ್ಲೂ ಆರಂಭವಾಯ್ತು ‘’ವಯಸ್ಕರಿಗೆ ಮಾತ್ರ’’ ಸೆಕ್ಷನ್: ವಿಶೇಷತೆ ಹೀಗಿದೆ..
ನೀಡುತ್ತೆ ಬೆಲೆ ಗ್ಯಾರಂಟಿ
ಬೆಲೆ ಗ್ಯಾರಂಟಿ ನೀಡುವ ಬಗ್ಗೆ ಕೂಡ ಗೂಗಲ್ ಫ್ಲೈಟ್ ಬ್ಲಾಗ್ ಪೋಸ್ಟ್ ನಲ್ಲಿ ಮಾಹಿತಿ ನೀಡಿದೆ. 'ನೀವು ಗೂಗಲ್ ಫ್ಲೈಟ್ ಹೊಸ ಫೀಚರ್ ನಲ್ಲಿ ಕೆಲವು ಫ್ಲೈಟ್ ಫಲಿತಾಂಶಗಳಲ್ಲಿ ಆಕರ್ಷಕ ಬೆಲೆ ಗ್ಯಾರಂಟಿ ಬ್ಯಾಡ್ಜ್ ಗಳನ್ನು ನೋಡಬಹುದು. ಇದರರ್ಥ ಇಂದು ನೀವು ನೋಡುತ್ತಿರೋದಕ್ಕಿಂತ ವಿಮಾನ ದರ ತಗ್ಗುವುದಿಲ್ಲ ಎಂಬ ಬಗ್ಗೆ ನಮಗೆ ಆತ್ಮವಿಶ್ವಾಸವಿದೆ. ಯಾವಾಗ ನೀವು ಈ ಫ್ಲೈಟ್ ಗಳಲ್ಲಿ ಒಂದನ್ನು ಬುಕ್ ಮಾಡುತ್ತೀರೋ ಆಗ ಆ ಫ್ಲೈಟ್ ಟೇಕ್ ಆಫ್ ಆಗುವ ತನಕ ನಾವು ಅದರ ಬೆಲೆಯನ್ನು ಪ್ರತಿದಿನ ಗಮನಿಸುತ್ತೇವೆ. ಒಂದು ವೇಳೆ ಬೆಲೆ ನೀವು ಬುಕ್ ಮಾಡಿರೋದಕ್ಕಿಂತ ಕಡಿಮೆ ಹೋದರೆ, ಆಗ ನಾವು ವ್ಯತ್ಯಾಸದ ಮೊತ್ತವನ್ನು ಗೂಗಲ್ ಪೇ ಮೂಲಕ ನಿಮಗೆ ಪಾವತಿಸುತ್ತೇವೆ' ಎಂದು ಬ್ಲಾಗ್ ಪೋಸ್ಟ್ ನಲ್ಲಿ ಗೂಗಲ್ ಫ್ಲೈಟ್ಸ್ ಮಾಹಿತಿ ನೀಡಿದೆ.
ಹೊಸ ರೂಲ್ಸ್: ಇನ್ಮುಂದೆ ಫ್ಲೈಟ್ ಹತ್ತೋ ಮೊದ್ಲು ಲಗೇಜ್ ಮಾತ್ರವಲ್ಲ, ನಿಮ್ಮ ತೂಕನೂ ಪರೀಕ್ಷೆ ಮಾಡ್ಕೊಳ್ಳಿ!
ಕ್ರಿಸ್ಮಸ್ ಗೆ ಫ್ಲೈಟ್ ಟಿಕೆಟ್ ಬುಕ್ ಮಾಡಲು ಇದು ಸೂಕ್ತ ಸಮಯ
ಗೂಗಲ್ ಪ್ರಕಾರ ಡಿಸೆಂಬರ್ ಮಧ್ಯ ಭಾಗದಲ್ಲಿ ಪ್ರವಾಸ ಕೈಗೊಳ್ಳಲು ನೀವು ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಪಡೆಯಲು ಅಕ್ಟೋಬರ್ ಪ್ರಾರಂಭದಲ್ಲಿ ಟಿಕೆಟ್ ಮಾಡೋದು ಉತ್ತಮ. ಯಾವುದೇ ವಿಮಾನದ ಸರಾಸರಿ ಬೆಲೆ ಅದು ಹೊರಡುವ ದಿನಕ್ಕಿಂತ 71 ದಿನಗಳ ಮುನ್ನ ಕಡಿಮೆ ಇರುತ್ತದೆ. ಆದರೆ, 2022ರ ನಮ್ಮ ಅಧ್ಯಯನದ ಪ್ರಕಾರ ವಿಮಾನ ಹೊರಡುವ ಕೇವಲ 22 ದಿನಗಳ ಮುಂಚೆ ಅದರ ಟಿಕೆಟ್ ದರ ಕಡಿಮೆ ಇರುತ್ತದೆ. ಇನ್ನು ಸಾಮಾನ್ಯವಾಗಿ ಈಗಿನ ಕಡಿಮೆ ಬೆಲೆ ಟ್ರೆಂಡ್ ಟೇಕ್ ಆಫ್ ದಿನಕ್ಕೂ ಮುನ್ನದ 54-78 ದಿನಗಳ ನಡೆಯುವ ಇದೆ.