ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಬದಲಾವಣೆ: ಹೊಸ ದಾಖಲೆ!

By Suvarna News  |  First Published Jul 22, 2020, 1:54 PM IST

ಕೊರೋನಾತಂಕ ನಡುವೆ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಬದಲಾವಣೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರುತ್ತಿದ್ದಂತೆಯೇ, ಭಾರತದಲ್ಲಿ ದಾಖಲೆ ನಿರ್ಮಿಸಿದ ಚಿನ್ನದ ದರ| 


ಮುಂಬೈ(ಜು.22): ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ದಾಖಲೆಯ ಏರಿಕೆ ಕಂಡಿದೆ. ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಬೆನ್ನಲ್ಲೇ ದೇಶದಲ್ಲೂ ಚಿನ್ನ, ಬೆಳ್ಳಿ ದರ ಜಿಗಿದಿದೆ. ಚಿನ್ನದ ಬೆಲೆ ಈವರೆಗಿನ ಗರಿಷ್ಟ ಅಂದರೆ 50 ಸಾವಿರ ರೂ. ದಾಟಿದೆ. ಅತ್ತ ಬೆಳ್ಳಿ ದರವೂ 60,619 ರೂ.ಗೇರಿದೆ.

ತಿರುಪತಿಯ 15 ಅರ್ಚಕರು ಸೇರಿ 100 ಸಿಬ್ಬಂದಿಗೆ ವೈರಸ್: ಆದರೂ ದೇಗುಲ ಮುಚ್ಚಲ್ಲ

Latest Videos

undefined

Multi Commodity Exchange ನಲ್ಲಿ ಗೋಲ್ಡ್‌ ಫ್ಯೂಚರ್ ರೇಟ್‌ನಲ್ಲಿ ಶೇ. 1 ಅಂದರೆ 493 ರೂ. ಏರಿಕೆ ದಾಖಲಾಗಿದೆ. ಇದಾದ ಬಳಿಕ ಹತ್ತು ಗ್ರಾಂ ಚಿನ್ನದ ಬೆಲೆ ಏಕಾಏಕಿ 50,020ಗೇರಿದೆ. ಇನ್ನು ಸೆಪ್ಟೆಂಬರ್ ಸಿಲ್ವರ್ ಫ್ಯೂಚರ್ ರೇಟ್‌ನಲ್ಲಿ ಶೇ. 6ರಷ್ಟು ಏರಿಕೆಯಾಗಿದೆ. ಹೀಗಾಗಿ ಒಂದು ಕೆ. ಜಿ ಬೆಳ್ಳಿ ಬೆಲೆ 57,342 ರೂ. ನಿಂದ 60,782 ರೂಗೇರಿದೆ. 

ಭಾರತದಲ್ಲಿ ಗೋಲ್ಡ್ ಮಾಸ್ಕ್ ಟ್ರೆಂಡ್, 3.5 ಲಕ್ಷ ರೂ. ಮಾಸ್ಕ್ ಧರಿಸಿದ ಇದೀಗ ಮತ್ತೊರ್ವ ಉದ್ಯಮಿ!

ಇನ್ನು ವಿಶ್ವಾದ್ಯಂತ ಕೊರೋನಾತಂಕದ ನಡುವೆಯೂ ಕಳೆದ ಕೆಲ ವಾರಗಳಿಂದ ಜನರು ಚಿನ್ನ, ಬೆಳ್ಳಿ ಖರೀದಿಸುತ್ತಿದ್ದಾರೆ. ಸಾಮಾನ್ಯವಾಗಿ ಅನಿಶ್ಚಿತತೆಯ ಪರಿಸ್ಥಿತಿ ನಿರ್ಮಾಣವಾದಾಗ ಹೂಡಿಕೆದಾರರು ರಿಸ್ಕ್ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಬದಲಾಗಿ ಚಿನ್ನ, ಬೆಳ್ಳಿ ಖರೀದಿಗೆ ಮುಂದಾಗುತ್ತಾರೆ. ದೇಶದಲ್ಲಿ ಲಾಕ್‌ಡೌನ್‌ನಿಂದ ಚಿನ್ನ ಖರೀದಿಸುವವರು ಕಡಿಮೆಯಾಘಿದ್ದರೂ ಬೆಲೆ ಮಾತ್ರ ಗಗನಕ್ಕೇರಿದೆ. 

click me!