
ನವದೆಹಲಿ : ಚಿನ್ನದ ಬೆಲೆ ಗುರುವಾರ ಒಂದೇ ದಿನ 10 ಗ್ರಾಂಗೆ ಭರ್ಜರಿ 3600 ರು. ಏರಿಕೆಯಾಗಿದೆ. ಪರಿಣಾಮ ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧತೆಯ ಚಿನ್ನದ ಬೆಲೆ 1,06,100 ಲಕ್ಷಕ್ಕೆ ತಲುಪಿದೆ. ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.50ರಷ್ಟು ತೆರಿಗೆ ಹೇರಿದ್ದು ಮತ್ತು ಅದರ ಪರಿಣಾಮಗಳ ಭೀತಿಯಿಂದಾಗಿ ಹೂಡಿಕೆದಾರರು ಷೇರುಪೇಟೆ ಬದಲಾಗಿ ಚಿನ್ನದತ್ತ ಮುಖ ಮಾಡಿದ್ದು ದಿಢೀರ್ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ.
ಇದು ದೇಶದಲ್ಲಿ ಚಿನ್ನದ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ.
ಇನ್ನೊಂದೆಡೆ ದೆಹಲಿಯಲ್ಲಿ ಚಿನ್ನದ ಬೆಲೆ ಗುರುವಾರ 3600 ರು. ಏರಿಕೆಯಾಗಿ 1,02,200 ಲಕ್ಷ ರು.ಗೆ ತಲುಪಿದೆ.
ಮತ್ತೊಂದೆಡೆ ಬೆಳ್ಳಿ ಬೆಲೆಯು ಕೇಜಿಗೆ 1500 ರು. ಏರಿಕೆಯಾಗಿ 1,14,000 ಲಕ್ಷ ರು.ಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯು ಕೇಜಿಗೆ 1,21,500 ಲಕ್ಷ ರು.ಗೆ ತಲುಪಿದೆ. ಮುಂಬೈನಲ್ಲಿ 1,00,300 ಲಕ್ಷ ರು.ಗೆ ತಲುಪಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.