ಜಾಗತಿಕವಾಗಿ ಚಿನ್ನದ ಮೇಲಿನ ಬೇಡಿಕೆ ಕುಸಿದ ಪರಿಣಾಮವಾಗಿ ಇದೀಗ ಚಿನ್ನದ ಬೆಲೆಯಲ್ಲಿ ಹಬ್ಬದ ಸಂದರ್ಭದಲ್ಲಿಯೇ ಇಳಿಕೆಯಾಗಿದೆ.
ನವದೆಹಲಿ : ಜಾಗತಿಕವಾಗಿ ನಿರಂತರವಾಗಿ ಏರಿಳಿತವಾಗುವ ಚಿನ್ನದ ಬೆಲೆ ಇದೀಗ ಮತ್ತೊಮ್ಮೆ ಕುಸಿದಿದೆ.
ದೀಪಾವಳಿ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಚಿನ್ನ ಕೊಳ್ಳೋರಿಗೆ ಗುಡ್ ನ್ಯೂಸ್ ಲಭ್ಯವಾಗಿದೆ.
ಪ್ರತೀ 10 ಗ್ರಾಂ ಚಿನ್ನದ ಮೇಲೆ 145 ರು. ಇಳಿಕೆಯಾಗಿದೆ. ಇದರಿಂದ 10 ಗ್ರಾಂ ಚಿನ್ನದ ಬೆಲೆ 32 ಸಾವಿರದಷ್ಟಾಗಿದೆ.
ಸ್ಥಳೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಕುಸಿತವಾಗಿರುವುದೇ ಚಿನ್ನದ ಬೆಲೆಯ ಇಳಿಕೆಗೆ ಕಾರಣವಾಗಿದೆ.
ಮಾರುಕಟ್ಟೆ ಮಟ್ಟದಲ್ಲಿಯೇ ಬೇಡಿಕೆ ಕುಸಿದ ಪರಿಣಾಮದಿಂದ ಬೆಲೆಯ ಇಳಿದಿದ್ದಾಗಿ ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.